ಹೊಸದಿಲ್ಲಿ: ಸಾಮಾಜಿಕ ಮಾಧ್ಯಮಗಳಿಗೆ ಮೂಗುದಾರ ಹಾಕುವ ನೂತನ ಐಟಿ ನೀತಿಗಳ ಬೆನ್ನಲ್ಲೇ ಕೇಂದ್ರ ಸರಕಾರ, ಇ-ಕಾಮರ್ಸ್ ವ್ಯವಹಾರದಲ್ಲಿ ನಡೆಯುತ್ತಿರುವ ವಂಚನೆ ಹಾಗೂ ನ್ಯಾಯೋಚಿತವಲ್ಲದ ವ್ಯಾಪಾರಗಳಿಗೆ ಕಡಿವಾಣ ಹಾಕಲು ಮುಂದಾಗಿದೆ. ದೇಶದ ಇ-ಕಾಮರ್ಸ್ ನಿಯಮಗಳಲ್ಲಿ ಹಲವು ಬದಲಾವಣೆಗಳಿಗೆ ಸೋಮವಾರ ಪ್ರಸ್ತಾಪ ಇರಿಸಲಾಗಿದೆ. ಈ ಬದಲಾವಣೆಗಳು ಇ-ಕಾಮರ್ಸ್ ಸಂಸ್ಥೆಗಳು ನಡೆಸುವ ಫ್ಲ್ಯಾಶ್ ಸೇಲ್‌ನಂತಹ ವಿಶೇಷ ವ್ಯಾಪಾರ ಚಟುವಟಿಕೆಗಳನ್ನು ನಿರ್ಬಂಧಿಸುವ ಹಾಗೂ ಮಾರಾಟಗಾರರು ಪೂರೈಕೆ ಮಾಡದೆ ಹೋದರೆ ಕಠಿಣ ಕ್ರಮ ತೆಗೆದುಕೊಳ್ಳುವಂತಹ ನಿಯಮಗಳನ್ನೂ ಒಳಗೊಂಡಿವೆ.
ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವಾಲಯವು ಗ್ರಾಹಕ ರಕ್ಷಣೆ (ಇ-ಕಾಮರ್ಸ್) 2020 ನಿಯಮಗಳಲ್ಲಿ ಭಾರಿ ಬದಲಾವಣೆಗಳನ್ನು ಮಾಡಲು ಮುಂದಾಗಿದೆ. ಇದರ ಕರಡು ನಿಯಮಗಳನ್ನು ಸೋಮವಾರ ಬಿಡುಗಡೆ ಮಾಡಲಾಗಿದೆ. ಪಾರದರ್ಶಕತೆ ತರುವುದು, ನಿಯಂತ್ರಣ ಕ್ರಮಗಳನ್ನು ಬಲಪಡಿಸುವುದು, ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸುವುದು ಮತ್ತು ಮುಕ್ತ ಹಾಗೂ ನ್ಯಾಯಸಮ್ಮತ ಸ್ಪರ್ಧೆಗೆ ಉತ್ತೇಜನ ನೀಡುವುದು ಈ ನಿಯಮ ತಿದ್ದುಪಡಿಗಳ ಉದ್ದೇಶ ಎಂದು ಸಚಿವಾಲಯ ತಿಳಿಸಿದೆ.
ಹೊಸ ನಿಯಮಾವಳಿಗಳ ಪ್ರಕಾರ, ಆನ್‌ಲೈನ್ ಮಾರಾಟ ಮಾಡುವ ಇ-ಕಾಮರ್ಸ್ ಕಂಪೆನಿಗಳು ಕೈಗಾರಿಕೆಗಳು ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯಲ್ಲಿ (ಡಿಪಿಐಐಟಿ) ನೋಂದಣಿ ಮಾಡಿಸಿಕೊಳ್ಳಬೇಕು. ಅವು ಸೈಬರ್ ಭದ್ರತೆಯ ಘಟನೆಗಳು ಅಥವಾ ಯಾವುದೇ ಕಾನೂನಿನ ಪ್ರಕಾರ ಉಂಟಾಗಬಹುದಾದ ಅಪರಾಧಗಳ ತಡೆ, ಪತ್ತೆ, ತನಿಖೆ ಅಥವಾ ಶಿಕ್ಷೆಗಾಗಿ ಅಥವಾ ಗುರುತುಗಳ ಪರಿಶೀಲನೆಗಾಗಿ ದೇಶದ ಕಾನೂನಾತ್ಮಕ ಅಧಿಕಾರವುಳ್ಳ ಸಂಸ್ಥೆಗಳ ಜತೆ ಅಗತ್ಯ ಸಮಯಗಳಲ್ಲಿ ಮಾಹಿತಿ ಹಂಚಿಕೊಳ್ಳಬೇಕಿದೆ.
ಫ್ಲ್ಯಾಶ್ ಸೇಲ್ ಮಾರಾಟಕ್ಕೆ ನಿರ್ಬಂಧ?
ಸರಕಾರದ ಸಂಸ್ಥೆಯು ಕೇಳುವ ಮಾಹಿತಿಯನ್ನು ಇ-ಕಾಮರ್ಸ್ ಕಂಪೆನಿಯು ಆದೇಶ ಸ್ವೀಕರಿಸಿದ 72 ಗಂಟೆಗಳ ಒಳಗೆ ಅಗತ್ಯ ಮಾಹಿತಿಗಳನ್ನು ಒದಗಿಸಬೇಕಿದೆ. ಕೆಲವು ಇ-ಕಾಮರ್ಸ್ ಸಂಸ್ಥೆಗಳು ಗ್ರಾಹಕರ ಆಯ್ಕೆಗಳನ್ನು ಸೀಮಿತಗೊಳಿಸುವುದರಲ್ಲಿ ತೊಡಗಿವೆ. ಒಂದು ಪ್ಲಾಟ್‌ಫಾರ್ಮ್‌ನಲ್ಲಿ ಮಾರಾಟ ಮಾಡುತ್ತಿರುವ ಮಾರಾಟಗಾರ ಯಾವುದೇ ದಾಸ್ತಾನು ಅಥವಾ ಆರ್ಡರ್ ಪೂರೈಕೆ ಸಾಮರ್ಥ್ಯವನ್ನು ಹೊಂದಿರುವುದಿಲ್ಲ. ಆದರೂ ‘ಫ್ಲ್ಯಾಶ್ ಅಥವಾ ಬ್ಯಾಕ್ ಟು ಬ್ಯಾಕ್ ಆರ್ಡರ್’ ಸೌಲಭ್ಯಗಳನ್ನು ಆ ಪ್ಲಾಟ್‌ಫಾರ್ಮ್ ನಿಯಂತ್ರಿಸುವ ಬೇರೊಬ್ಬ ಮಾರಾಟಗಾರರಲ್ಲಿ ಇರಿಸುತ್ತಾರೆ ಎಂದಿರುವ ಸಚಿವಾಲಯ, ವಿವಿಧ ಇ-ಕಾಮರ್ಸ್ ಸಂಸ್ಥೆಗಳು ನಡೆಸುವ ಫ್ಲ್ಯಾಶ್ ಸೇಲ್‌ಗಳಿಗೆ ನಿಷೇಧ ಹೇರುವ ಪ್ರಸ್ತಾಪ ಇರಿಸಿದೆ.
ಇದು ನ್ಯಾಯೋಚಿತ ಸ್ಪರ್ಧೆಯನ್ನು ತಡೆಯುತ್ತಿದೆ ಮತ್ತು ಅಂತಿಮವಾಗಿ ಗ್ರಾಹಕರ ಆಯ್ಕೆಗಳನ್ನು ಸೀಮಿತಗೊಳಿಸುತ್ತದೆ ಹಾಗೂ ಬೆಲೆಯನ್ನು ಹೆಚ್ಚಿಸುತ್ತದೆ ಎಂದು ಸಚಿವಾಲಯ ಹೇಳಿದೆ.
ಕಾನೂನು ಜಾರಿ ಸಂಸ್ಥೆಗಳ ಜತೆ ದಿನದ 24 ಗಂಟೆಯೂ ಸಮನ್ವಯ ಸಾಧಿಸುವ ಮುಖ್ಯ ಅಹವಾಲು ಅಧಿಕಾರಿಗಳು, ನೋಡಲ್ ಸಂಪರ್ಕ ವ್ಯಕ್ತಿಗಳನ್ನು ನೇಮಿಸುವಂತೆ ಶಿಫಾರಸು ಮಾಡಲಾಗಿದೆ.
















ಇನ್ನಷ್ಟು ಸುದ್ದಿಗಳು
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್‌ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್
ಮದ್ರಸಾ ಅಧ್ಯಾಪಕರ ಮೇಲಿನ ಹಲ್ಲೆ ಅತ್ಯಂತ ಖಂಡನೀಯ- ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ SJM ಕಿನ್ನಿಗೋಳಿ ರೇಂಜ್ ಆಗ್ರಹ