ಮಂಗಳೂರು: ಕರ್ನಾಟಕ ಮುಸ್ಲಿಂ ಜಮಾಅತ್ ನಿಂದ ಕೆಸಿಎಫ್ ಒಮಾನ್ ಪ್ರಾಯೋಜಕತ್ವದ ಸಹಾಯ್ ಆಂಬ್ಯುಲೆನ್ಸ್ ಮಂಗಳೂರಿನ ಜಿಲ್ಲಾಧಿಕಾಕಿ ಕಚೇರಿ ಮುಂಭಾಗದಲ್ಲಿ ಸೋಮವಾರ ಲೋಕಾರ್ಪಣೆಗೊಳಿಸಲಾಯಿತು.
ಆಂಬ್ಯುಲೆನ್ಸ್ ಕೀ ಹಸ್ತಾಂತರಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರರವರು ಕೋವಿಡ್ ನಂತಹ ಸಂಕಷ್ಟದ ಸಮಯದಲ್ಲಿ ಕೆಸಿಎಫ್ ನ ಸಮಾಜ ಸೇವೆ ಪ್ರಶಂಸನೀಯ, ಜನಸೇವೆಗೆ ಆಂಬ್ಯುಲೆನ್ಸ್ ನೀಡಿರುವುದು ಮಾದರಿ ಕೆಲಸವಾಗಿದೆ. ಜಿಲ್ಲೆ ಯ ಪರವಾಗಿ ಕೆಸಿಎಫ್ ಗೆ ಧನ್ಯವಾದ ಎಂದು ಹೇಳಿದರು.
ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಡಾ.ಶೇಕ್ ಬಾವ ಮಾತನಾಡಿ ಕೆಸಿಎಫ್ ಒಮಾನ್ ಸೇವೆಯು ಶ್ಲಾಗನೀಯ. ಕೆಸಿಎಫ್ ನೀಡುತ್ತಿರುವುದು ಇದು ಹತ್ತನೇ ಆಂಬ್ಯುಲೆನ್ಸ್ ಆಗಿದೆ ಮುಂದಿನ ದಿನಗಳಲ್ಲಿ ಸದಾ ಜನರ ಸೇವೆಗೆ ಕೆಸಿಎಫ್ ಸಿದ್ದವಾಗಿದೆ ಎಂದರು.
ವಿದೇಶಗಳಲ್ಲಿ ಕೆಲಸಕ್ಕೆಂದು ಹೋಗಿ ಅಲ್ಲಿ ಸಿಗುವ ವರಮಾನದಲ್ಲಿ ಒಂದಂಶವನ್ನು ಕೆಸಿಎಫ್ ಗೆ ನೀಡಿ ಅದನ್ನು ಕೆಸಿಎಫ್ ಸಮಾಜ ಸೇವೆಗೆ ಉಪಯೇಗಿಸುತ್ತಿರುವುದು ಶ್ಲಾಗನೀಯ, ಶಾಂತಿ ಹಾಗೂ ಸೌಹಾರ್ದತೆಗೆ ಕೆಸಿಎಫ್ ಸಹಕರಿಸುತ್ತಿರುವುದು ಸಂತಸ ತಂದಿದೆ ಎಂದು ಮಾಜಿ ಶಾಸಕ ಮೊಯ್ದಿನ್ ಬಾವ ಮಾತನಾಡಿತ್ತಿದ್ದರು.
ಕೆಎಂಜೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ ಎಂ ಮುಮ್ತಾಝ್ ಅಲಿ ಮಾತನಾಡಿ, ಕೆಸಿಎಫ್ ಸಂಘಟನೆಯು ಉಲಮಾಗಳ ನೇತೃತ್ವದಲ್ಲಿ ಹಲವು ಜನಪರ ಯೋಜನೆಗಳನ್ನು ಹಮ್ಮಿಕೊಂಡು ಜನರ ಸೇವೆ ನೀಡುತ್ತಿದೆ. ಕೇವಲ ಒಂದು ಧರ್ಮಕ್ಕೆ ಸೀಮಿತವಾಗದೆ ಎಲ್ಲಾ ಧರ್ಮಗಳ ಜನರಿಗೂ ಸಹಾಯಹಸ್ತ ಚಾಚುತ್ತಿದೆ ಎಂದರು.
ಕೆಸಿಎಫ್ ಸೌದಿ ಅರೇಬಿಯಾ ಅಧ್ಯಕ್ಷರಾದ ಡಿಪಿ ಯೂಸುಫ್ ಸಖಾಫಿ ಬೈತಾರ್, ಖಾಝಿ ಖುರ್ರತ್ತುಸಾದಾತ್ ಕೂರತ್ ತಂಗಳ್, ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್, ಹಝ್ರತ್ ಫಾಝಿಲ್ ರಝ್ವಿ ಕಾವಳಕಟ್ಟೆ ಶುಭಹಾರೈಸಿದರು.
ಸ್ಥಳದಲ್ಲಿ ಸುನ್ನೀ ಕೋ ಆರ್ಡಿನೇಟರ್ ಅಧ್ಯಕ್ಷ ಎಸ್ ಪಿ ಹಂಝ ಸಖಾಫಿ, ಸಹಾಯ್ ಎಲೈಟ್ ಅಲೈಯನ್ಸ್ ಚೇರ್ಮೆನ್ ಡಾ.ಯುಟಿ ಇಫ್ತಿಕಾರ್, ಕೆಸಿಎಫ್ ಒಮಾನ್ ಡೈರಕ್ಟರ್ ಉಮರ್ ಸಖಾಫಿ ಮಿತ್ತೂರು, ಕೆಎಂಜೆ ಮಂಗಳೂರು ತಾಲೂಕು ಅಧ್ಯಕ್ಷರಾದ ನಾಸಿರ್ ಲಕ್ಕಿಸ್ಟಾರ್ ಹಾಗೂ ಕೆಸಿಎಫ್ ಒಮಾನ್ ಕಾರ್ಯಕರ್ತರು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಅಶ್ರಫ್ ಕಿನಾರ ಕಾರ್ಯಕ್ರಮ ನಿರೂಪಿಸಿ ವಂದುಸಿದರು.