janadhvani

Kannada Online News Paper

ರಮಳಾನ್: ಮಸೀದಿಯಲ್ಲಿನ ಪ್ರಾರ್ಥನೆಗೆ ರಾಜ್ಯ ಸರಕಾರದಿಂದ ಮಾರ್ಗಸೂಚಿ ಬಿಡುಗಡೆ

ಬೆಂಗಳೂರು: ಕೋವಿಡ್ ರೋಗದ ಎರಡನೇ ಅಲೆ ಎಲ್ಲೆಡೆ ಹರಡುವ ಕಾರಣ ರಮಳಾನ್ ತಿಂಗಳಲ್ಲಿ ಮಸೀದಿಯಲ್ಲಿ ಪ್ರಾರ್ಥನೆ ಮಾಡುವ ಕುರಿತು ಕರ್ನಾಟಕ ರಾಜ್ಯ ಸರಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.

ಮಾರ್ಗಸೂಚಿಯಲ್ಲಿ ತಿಳಿಸಿದ ಪ್ರಮುಖ ವಿಷಯಗಳು ಈ ಕೆಳಗಿನಂತಿವೆ.

  • ಕಂಟೈನ್ಮೆಂಟ್‌ ಝೋನ್‌ ಗಳಲ್ಲಿರುವ ಮಸೀದಿಗಳನ್ನು ಮುಚ್ಚಲಾಗುವುದು.
  • 60 ವರ್ಷ ಮೇಲ್ಪಟ್ಟವರು, ಅನಾರೋಗ್ಯದಿಂದಿರುವವರು, ಗರ್ಭಿಣಿ ಸ್ತ್ರೀಯರು ಮತ್ತು ಮಕ್ಕಳು ಮಸೀದಿಗೆ ಬರಕೂಡದು.
  • ನಮಾಝ್‌ ಗೆ ನಿಲ್ಲುವ ಸಾಲುಗಳ ಮಧ್ಯೆ 6 ಅಡಿ‌ ಅಂತರ ಪಾಲಿಸುವುದು.
  • ಅವಶ್ಯಕತೆಯಿದ್ದರೆ ಎರಡು ಇಮಾಮ್‌ ಜಮಾಅತ್‌ ನಡೆಸುವುದು.
  • ಮಸೀದಿಯು ಭರ್ತಿಯಾಗಿದ್ದರೆ ಎರಡನೇ ಹಂತದ ಜಮಾಅತ್‌ ವರೆಗೆ ಮಸೀದಿಯ ಹೊರಗಡೆ  ಸುರಕ್ಷಿತ ಅಂತರ ಪಾಲನೆಯೊಂದಿಗೆ ಕಾಯುವುದು.
  • ಗ್ರಂಥಾಲಯ, ಮದ್ರಸಾ ಮತ್ತು ಧಾರ್ಮಿಕ ತರಗತಿಗಳನ್ನು ಮಸೀದಿಯೊಳಗೆ ನಡೆಸಬಾರದು.
  • ಸಾಮೂಹಿಕವಾಗಿ ಧಾರ್ಮಿಕ ಗ್ರಂಥ ಪಠಣ ಮತ್ತು ಮಸೀದಿಯೊಳಗೆ ಸಾಮೂಹಿಕ ಚರ್ಚೆ ನಡೆಸಬಾರದು
  • ಮನೆಯಲ್ಲೇ ಇಫ್ತಾರ್ ಮಾಡಿ ಪ್ರಾರ್ಥನೆಗಾಗಿ ಮಾತ್ರ ಮಸೀದಿಗೆ ಬರುವುದು, ಯಾವುದೇ ಕಾರಣಕ್ಕೂ ಮಸೀದಿಗೆ ಅಹಾರವನ್ನು ತರಬಾರದು.
  • ಕೋವಿಡ್‌ ನಿಯಮಗಳನ್ನು ಪಾಲಿಸಿಕೊಂಡು ತರಾವೀಹ್‌ ನಮಾಝ್‌ ನಡೆಸಬೇಕು. ಅಗತ್ಯವಿದ್ದರೆ ಎರಡು ಜಮಾಅತ್‌ ನಡೆಸುವುದು
  • ಸಾಮಾನ್ಯವಾಗಿ ಉಪಯೋಗಿಸುವ ಟವೆಲ್‌, ಟೋಪಿಗಳನ್ನು ಮಸೀದಿಯೊಳಗೆ ಬಳಸಬಾರದು.
  • ನಮಾಝ್‌ ಗೆ ಬಂದವರು ಪರಸ್ಪರ ಹಸ್ತಲಾಘವ ಅಥವಾ ಅಪ್ಪಿಕೊಳ್ಳಬಾರದು.
  • ತರಾವೀಹ್‌ ನಮಾಝ್‌ ಗೆ ಮನೆಯಲ್ಲೇ ವುಝೂ (ಅಂಗಸ್ನಾನ) ನಿರ್ವಹಿಸಿ ಮಸೀದಿಗೆ ಬರಬೇಕು.
  • ಸುನ್ನತ್‌ ನಮಾಝ್‌ ಮನೆಯಲ್ಲೇ ನಿರ್ವಹಿಸುವುದು.
  • ನಮಾಝ್‌ ಗೆ ಬೇಕಾಗುವ ಮುಸಲ್ಲಾ‌ ತರುವುದು.
  • ಮಾಸ್ಕ್‌ ಧರಿಸುವುದು ಕಡ್ಡಾಯ.
  • ಜನದಟ್ಟನೆಯನ್ನು ನಿಯಂತ್ರಿಸುವುದು.
  • ಸೀನುವಾಗ ಸಮರ್ಪಕ ಕರವಸ್ತ್ರಗಳನ್ನು ಬಳಸುವುದು.
  • ಮಸೀದಿಗೆ ಪ್ರವೇಶಿಸುವಾಗ ಥರ್ಮಲ್‌ ಸ್ಕ್ಯಾನರ್‌ ಮೂಲಕ ಸ್ಕ್ಯಾನ್‌ ಮಾಡುವುದು. ಶೀತ, ಕಫ, ಗಂಟಲು ನೋವು ಮತ್ತು ಉಸಿರಾಟ ತೊಂದರೆಗಳು ಕಂಡು ಬಂದರೆ ಮಸೀದಿಗೆ ಪ್ರವೇಶಿಸಲು ಅನುಮತಿ ನೀಡದಿರುವುದು.
  • ಕೊರೋನ ಜಾಗೃತಿ ಮೂಡಿಸುವ ಪೋಸ್ಟರ್‌ ಗಳನ್ನು ಪ್ರದರ್ಶಿಸಬೇಕು. ಆಡಿಯೋ ಮತ್ತು ವೀಡಿಯೋ ಕ್ಲಿಪ್‌ ಗಳನ್ನು ಪ್ರಸಾರ ಮಾಡಬೇಕು.
  • ಕೈ ತೊಳೆಯಲು ಸೋಪ್‌ ಮತ್ತು ದ್ರಾವಕಗಳ ವ್ಯವಸ್ಥೆ ಮಾಡುವುದು.
  • ಆರೋಗ್ಯ ಸೇತು ಅಪ್ಲಿಕೇಶನ್‌ ಬಳಸುವುದು ಉತ್ತಮ.
  • ನಮಾಝ್‌ ಮುಗಿದ ಬಳಿಕ ಸೋಂಕು ನಿವಾರಕ ದ್ರಾವಕಗಳನ್ನು ಸಿಂಪಡಿಸುವುದು.
  • ಎಲ್ಲಾ ನಮಾಝ್‌ ಗಳನ್ನು ಸರಿಯಾದ ಸಮಯಕ್ಕೆ ಮುಗಿಸುವುದು.

error: Content is protected !! Not allowed copy content from janadhvani.com