ಲಖನೌ: ಉತ್ತರ ಪ್ರದೇಶದಲ್ಲಿ ಮತ್ತೊಂದು ಮರ್ಯಾದಾ ಹತ್ಯೆ ಘಟನೆ ಬೆಳಕಿಗೆ ಬಂದಿದ್ದು, ತನ್ನ ವಿರೋಧದ ನಡುವೆಯೂ ಪ್ರೀತಿಯಲ್ಲಿ ಬಿದ್ದಿದ್ದ ಮಗಳ ತಲೆಯನ್ನೇ ಕತ್ತರಿಸಿದ ತಂದೆಯೋರ್ವ ಆ ತಲೆಯನ್ನು ಪೊಲೀಸ್ ಠಾಣೆಗೆ ತಂದು ಪೊಲೀಸರಿಗೆ ಶರಣಾಗಿದ್ದಾನೆ.
ಹೌದು.. ಉತ್ತರ ಪ್ರದೇಶದ ಹರ್ದೋಯಿಯ ಪಂಡೆೇತಾರ ಗ್ರಾಮದಲ್ಲಿ ಈ ನಡೆದಿದ್ದು, 17 ವರ್ಷದ ಮಗಳು ಸೋದರ ಸಂಬಂಧಿ ಆದೇಶ್ ಎಂಬ ಯುವಕನೊಂದಿಗೆ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಳು. ಇದಕ್ಕೆ ಆಕೆಯ ಪೋಷಕರು ತೀವ್ರವಿರೋಧ ವ್ಯಕ್ತಪಡಿಸಿದ್ದರು. ಅದಾಗ್ಯೂ ಯುವತಿ ತನ್ನ ಪ್ರೇಮ ಸಲ್ಲಾಪ ಮುಂದುವರೆಸಿದ್ದಳು ಎನ್ನಲಾಗಿದೆ. ಇದರಿಂದ ವ್ಯಾಘ್ರಗೊಂಡ ತಂದೆ ಮಗಳು ಮತ್ತು ಆತನ ಪ್ರಿಯಕರ ಇಬ್ಬರನ್ನೂ ಕೊಲೆ ಮಾಡಲು ಯೋಜನೆ ರೂಪಿಸಿದ್ದ.
ಮಗಳು ಮನೆಯಲ್ಲಿ ಒಬ್ಬಂಟಿಯಾಗಿರುವ ಮಾಹಿತಿ ಗೊತ್ತಾಗುತ್ತಿದ್ದಂತೆ ಬಾಗಿಲು ಮುಚ್ಚಿ ಆಕೆಯ ತಲೆ ಕತ್ತರಿಸಿದ್ದಾನೆ. ಬಳಿಕ ಕೈಯಲ್ಲಿ ಆಕೆಯ ರುಂಡ ಹಿಡಿದುಕೊಂಡು ಪೊಲೀಸ್ ಠಾಣೆಗೆ ಬರಲು ಮುಂದಾಗಿದ್ದಾನೆ. ಘಟನೆಯಿಂದ ಭಯಭೀತರಾದ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಗಳ ಕತ್ತರಿಸಿದ ತಲೆ ಹಿಡಿದು ಬರುತ್ತಿದ್ದ ಆತನನ್ನು ಬಂಧಿಸಿದ್ದಾರೆ.
ಇಬ್ಬರು ಪೊಲೀಸ್ ಅಧಿಕಾರಿಗಳು ಆಗಮಿಸಿ ಆತನ ಸಮೀಪದಿಂದ ತಮ್ಮ ಫೋನ್‌ನಲ್ಲಿ ವೀಡಿಯೊ ಮಾಡಿಕೊಂಡರು. ಆತನ ಹೆಸರು ಕೇಳಿ ಯಾರ ತಲೆ ಎಂದು ಪ್ರಶ್ನಿಸಿದರು. ಸರ್ವೇಶ್ ಯಾವುದೇ ಅಂಜಿಕೆ ಇಲ್ಲದೇ ಉತ್ತರಿಸುವ ದೃಶ್ಯ ಸೆರೆಯಾಗಿದೆ. ವ್ಯಕ್ತಿಯೊಬ್ಬನ ಜತೆ ಪುತ್ರಿ ಸಂಬಂಧ ಬೆಳೆಸಿದ್ದರಿಂದ ಕೋಪಗೊಂಡು ಹರಿತವಾದ ಆಯುಧದಿಂದ ತಲೆ ಕತ್ತರಿಸಿದ್ದಾಗಿ ಸರ್ವೇಶ್ ಹೇಳಿದ್ದಾನೆ.
ಈ ವೇಳೆ ಈ ಕೊಲೆಯನ್ನು ನಾನೇ ಮಾಡಿದ್ದು ಎಂದು ಸರ್ವೇಶ್ ಹೇಳಿದ್ದಾನೆ. ‘ಬೇರೆ ಯಾರೂ ಇರಲಿಲ್ಲ. ನಾನೇ ಅದನ್ನು ಮಾಡಿದ್ದು. ಬಾಗಿಲು ಚಿಲಕ ಹಾಕಿ ತಲೆ ಕತ್ತರಿಸಿದೆ. ಮೃತದೇಹ ಕೊಠಡಿಯಲಿದೆ” ಎಂದು ಹೇಳುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಇನ್ನು ಪ್ರಸ್ತುತ ಆತನನ್ನು ಪೊಲೀಸ್ ಠಾಣೆಗೆ ಕರೆತಂದ ಪೊಲೀಸರು ಬಳಿಕ ಬಂಧಿಸಿದರು. ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಅನುರಾಗ್ ವತ್ಸ್ ಹೇಳಿದರು.
















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ
ಶೈಖ್ ಅಬೂಬಕ್ಕರ್ ಅಹ್ಮದ್ ಮುಸ್ಲಿಯಾರ್- ಜಗತ್ತು ಕಂಡ ಆಧುನಿಕ ದಾರ್ಶನಿಕ ನಾಯಕ
ಸೌಹಾರ್ದ ಹಾಗೂ ಸಾಮರಸ್ಯದ ಸಂಗಮಕ್ಕೆ ಸಾಕ್ಷಿಯಾದ ಬಳಕುಂಜೆ