janadhvani

Kannada Online News Paper

ಮುಹಬ್ಬತೇ ಅಸಾಸ್ ಸಮಿತಿಗೆ ನವ ಸಾರಥ್ಯ

ಮಂಗಳೂರು: ಅಸಾಸ್ ಎಜುಕೇಶನಲ್‌‌ ಸೆಂಟರ್ ಮಲ್ಲೂರು ಇದರ ಅಭಿವೃದ್ಧಿಗಾಗಿ 2019 ರಲ್ಲಿ ಪ್ರಾರಂಭವಾದ “ಮುಹಬ್ಬತೇ ಅಸಾಸ್” ಸಮಿತಿಯ ವಾರ್ಷಿಕ ಮಹಾಸಭೆಯು ಸಯ್ಯದ್ ಮುಡೀಸ್ ತಂಙಳರವರ ಸಭಾಧ್ಯಕ್ಷತೆಯಲ್ಲಿ ದಿನಾಂಕ 15-2-21 ರ ಸೋಮವಾರದಂದು ಮಲ್ಲೂರಿನಲ್ಲಿ ನಡೆಯಿತು. ಸಯ್ಯದ್ ನಿಝಾಮುದ್ದೀನ್ ಬಾಫಖೀ ತಂಙಳರ್ ರವರು ದುವಾ ಮಾಡುವ ಮೂಲಕ ಮಹಾಸಭೆಗೆ ಚಾಲನೆ ನೀಡಿದರು. MPM ಅಶ್ರಫ್ ಸ ಅದಿ ಮತ್ತು MG ಇಕ್ಬಾಲ್ ಧಮಾಮ್ ರವರು ಪ್ರಸ್ತಾವಿಕ ಮಾತುಗಳನ್ನಾಡಿದರು.

ಕಾರ್ಯದರ್ಶಿಯಾದ ಮನ್ಸೂರ್ ಅಮ್ಮುಂಜೆ ಸ್ವಾಗತಿಸಿ,ವರದಿ ಹಾಗೂ ಲೆಕ್ಕಪತ್ರವನ್ನು ಮಂಡಿಸಿದರು. 19 ಜನ ಸದಸ್ಯರ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.

ಗೌರವಧ್ಯಾಕ್ಷರಾಗಿ MG ಇಕ್ಬಾಲ್ ಧಮಾಮ್, ಅಧ್ಯಕ್ಷರಾಗಿ ಖಲೀಲ್ ರಹಿಮಾನ್ ಅಬ್ಬೆಟ್ಟು,ಪ್ರಧಾನ ಕಾರ್ಯದರ್ಶಿಯಾಗಿ Ms ಅನ್ಸಾರ್ (ಪುತ್ತಾ), ಕೋಶಾಧಿಕಾರಿಯಾಗಿ MH ಸುಲೈಮಾನ್ ರವರನ್ನು ಆಯ್ಕೆಮಾಡಲಾಯಿತು.
ಉಪಾಧ್ಯಕ್ಷರಾಗಿ‌ Ms ಉಬೈದುಲ್ಲಾ ಮತ್ತು Mg ನಾಸೀರ್, ಕಾರ್ಯದರ್ಶಿಯಾಗಿ ಹಂಝ ಹಮೀದ್ Th ಕಲಾಯಿ ಮತ್ತು Mi ಸಫ್ವಾನ್ ರವರನ್ನು ಆಯ್ಕೆ ಮಾಡಲಾಯಿತು.

ಕಾರ್ಯಕಾರಿಣಿ ಸಮಿತಿಯ ಸದಸ್ಯರಾಗಿ MS ಜಲೀಲ್, ಮನ್ಸೂರ್ ಅಮ್ಮುಂಜೆ,MS ಸಿರಾಜ್,ಅಬ್ದುಲ್ ಶಮೀರ್,ನೌಷದ್ KGN,ಸಿರಾಜ್ (ಪುತ್ತುಮೋನು),MK ಅನ್ಸಾರ್,ಅಮೀರ್, MP ಝಬೈರ್,MY ಶಾಕೀರ್,MS ಅಝ್ಮಾಲ್ ರವರನ್ನು ಸರ್ವಾನುಮತದಿಂದ ಆಯ್ಕೆಮಾಡಲಾಯಿತು.

ಹಳೆಯ ಸಮಿತಿಯ ನಾಯಕರು ನೂತನ ಸಮಿತಿಗೆ ಕಡತ ಹಸ್ತಾಂತರ ಮಾಡುವುದರ ಮೂಲಕ ಹಾಗೂ ನೂತನ ಕಾರ್ಯದರ್ಶಿ ಧನ್ಯವಾದ ಹೇಳುವುದರ ಮೂಲಕ ಮಹಾಸಭೆಯನ್ನು ಕೊನೆಗೊಳಿಸಲಾಯಿತು.

error: Content is protected !! Not allowed copy content from janadhvani.com