janadhvani

Kannada Online News Paper

ಆರ್‌ಟಿಓ ಪರೀಕ್ಷೆ ಇಲ್ಲದೆ ಡ್ರೈವಿಂಗ್ ಲೈಸೆನ್ಸ್- ನಿಯಮ ಸಡಿಲಿಕೆಗೆ ಸರ್ಕಾರ ಚಿಂತನೆ

ನವದೆಹಲಿ: ವಾಹನ ಚಾಲನಾ ಪರವಾನಿಗೆ ಪಡೆಯಲು ಇನ್ನುಮುಂದೆ ಟ್ರಯಲ್‌ ನೀಡಬೇಕಿಲ್ಲ ಎನ್ನುವ ಹೊಸ ನಿಯಮ ರೂಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಆ ಮೂಲಕ ಡಿಎಲ್‌ ಪಡೆಯುವುದನ್ನು ಮತ್ತಷ್ಟು ಸರಳಗೊಳಿಸಲು ಸರ್ಕಾರ ಮುಂದಾಗಿದೆ.

ಸದ್ಯ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ ಸೇರಿದ ಪಥದಲ್ಲಿ ವಾಹನ ಓಡಿಸಿ ಟ್ರಯಲ್‌ ನೀಡದ ಬಳಿಕ, ಅದಲ್ಲಿ ತೇರ್ಗಡೆಯಾದ ಬಳಿಕ ಮಾತ್ರ ಈ ವರೆಗೆ ಚಾಲನಾ ಪರವಾನಗಿ ನೀಡಲಾಗತ್ತಿತ್ತು. ಆದರೆ ಇದನ್ನು ಸಡಿಲಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ನಿರ್ದಿಷ್ಟ ಚಾಲನಾ ತರಬೇತಿ ಕೇಂದ್ರಗಳಲ್ಲಿ ನುರಿತ ತರಬೇತಿ ಪಡೆದ ನಾಗರಿಕರಿಗೆ ಆರ್‌ಟಿಓಗಳು ನಡೆಸುವ ಚಾಲನಾ ಪರೀಕ್ಷೆಯಿಂದ ವಿನಾಯಿತಿ ನೀಡಲು ಕೇಂದ್ರ ಸರ್ಕಾರ ಹೊರಟಿದ್ದು, ಈ ಸಂಬಂಧ ಕರಡು ಅಧಿಸೂಚನೆಯೊಂದನ್ನು ಪ್ರಕಟಿಸಿದೆ. ಆ ಮೂಲಕ ಡ್ರೈವಿಂಗ್‌ ಲೈಸೆನ್ಸ್‌ ಪಡೆಯುವುದನ್ನು ಇನ್ನಷ್ಟು ಸರಳೀಕೃತಗೊಳಿಸಲು ಮುಂದಾಗಿದೆ. ಅಲ್ಲದೇ ಈ ನಿಯಮದಿಂದಾಗಿ ರಸ್ತೆ ಅಪಘಾತವನ್ನು ಕಡಿಮೆಗೊಳಿಸುವುದು ಸರ್ಕಾರದ ಉದ್ದೇಶ.

ಚಾಲನಾ ತರಬೇತಿ ಕೇಂದ್ರಗಳಿಗೆ ಸರ್ಕಾರದಿಂದ ಮಾನ್ಯತೆ ನೀಡಲು ಸರ್ಕಾರ ಮುಂದಾಗಿದ್ದು, ಇಂಥ ಕೇಂದ್ರಗಳಿಂದ ಆರ್‌ಟಿಒ ಪರೀಕ್ಷೆಯಿಂದ ವಿನಾಯಿತಿ ಸಿಗಲಿದೆ. ಈ ಕೇಂದ್ರಗಳಲ್ಲಿ ವಿಶೇಷ ತರಬೇತಿ ಲಭಿಸಿದ ಚಾಲಕರು ಸೃಷ್ಠಿಯಾಗಲಿದ್ದಾರೆ. ಹೀಗಾಗಿ ಅವರಿಗೆ ಆರ್‌ಟಿಒ ಪರೀಕ್ಷೆ ವಿನಾಯಿತಿ ನೀಡಲಾಗುತ್ತಿದೆ. ಅಲ್ಲದೇ ರಸ್ತೆ ಅಪಘಾತಗಳೂ ತಗ್ಗಲಿವೆ ಎನ್ನುವುದು ಸರ್ಕಾರದ ಆಲೋಚನೆ.
ದೇಶಾದ್ಯಂತ ಸದ್ಯ ಲಕ್ಷಾಂತರ ಡ್ರೈವಿಂಗ್‌ ಸ್ಕೂಲ್‌ಗಳಿದ್ದು, ಅವುಗಳ ಮೂಲಸೌಕರ್ಯವನ್ನು ಪರಶೀಲನೆ ಮಾಡಿ, ಅವುಗಳು ಸರ್ಕಾರ ಬಯಸಿದ ಗುಣಮಟ್ಟಕ್ಕೆ ಇದ್ದರೆ ಅಂಥವುಗಳಿಗೆ ಮಾನ್ಯತೆ ನೀಡಲಾಗುತ್ತದೆ. ಈ ಕೇಂದ್ರಗಳಲ್ಲಿ ಚಾಲನಾ ತರಬೇತಿ ಪಡೆದವರಿಗೆ ಆರ್‌ಟಿಒ ಪರೀಕ್ಷೆ ಇರುವುದಿಲ್ಲ.

ಚಾಲನಾ ತರಬೇತಿ ಕೇಂದ್ರಗಳು ಮಾನ್ಯತೆ ಪಡೆಯಬೇಕಿದ್ದರೇ, ಅಲ್ಲಿ ಕೌಶಲ್ಯಾಭಿವೃದ್ಧಿ ಸೌಲಭ್ಯಮ ಭೂಮಿ, ಕಟ್ಟಡ, ಚಾಲನಾ ಪರೀಕ್ಷಾ ಪಥ, ವಾಹನಗಳು, ಸಿಮ್ಯುಲೇಟರ್‌ ವರ್ಕ್‌ ಶಾಪ್‌ ಸೇರಿದಂತೆ ಇನ್ನಿತರ ಸೌಕರ್ಯಗಳು ಇರಬೇಕಾಗುತ್ತದೆ.

error: Content is protected !! Not allowed copy content from janadhvani.com