ಕೊಡಗು:ಎಸ್ ಕೆ ಎಸ್ ಎಸ್ ಎಫ್ ಕೇಂದ್ರ ಸಮಿತಿ ಅಧ್ಯಕ್ಷರಾದ ಪಾಣಕ್ಕಾಡ್ ಸಯ್ಯಿದ್ ಹಮೀದಲಿ ಶಿಹಾಬ್ ತಂಙಳ್ ರವರ ನೇತೃತ್ವದಲ್ಲಿ ನಡೆಯುತ್ತಿರುವ ಮುನ್ನಡೆ ಯಾತ್ರೆಯ ಸ್ವೀಕಾರ ಕಾರ್ಯಕ್ರಮ ಜನವರಿ 10ರಂದು ಬೆಳಗ್ಗೆ 09:00ಕ್ಕೆ ನೆಲ್ಯಾಹುದಿಕೇರಿಯ ಶಾದಿ ಮಹಲ್ ಸಭಾಂಗಣದಲ್ಲಿ ನಡೆಯಲಿದೆ ಎಂದು SKSSF ಕೊಡಗು ಜಿಲ್ಲಾ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಅಸ್ತಿತ್ವ, ಹಕ್ಕು ಯುವಜನಾಂಗ ಮರಳಿ ಪಡೆಯುತ್ತಿದೆ ಎಂಬ ಧ್ಯೇಯ ವಾಕ್ಯದೊಂದಿಗೆ SKSSF ಆರಂಭಿಸಿದ ಅಭಿಯಾನದ ಅಂಗವಾಗಿ , ಡಿಸೆಂಬರ್ 30 ರಂದು ತಿರುವನಂತಪುರಂ ನಿಂದ ಪ್ರಾರಂಭಗೊಂಡ ಮುನ್ನಡೆ ಯಾತ್ರೆಯು ಜನವರಿ 11ನೇ ತಾರೀಖು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಸಮಾಪ್ತಿಗೊಳ್ಳಲಿದೆ.ಇದರ ಭಾಗವಾಗಿ ಮುನ್ನಡೆ ಯಾತ್ರೆಯು ಜಿಲ್ಲೆಯ ಮೂಲಕ ಹಾದು ಹೋಗಲಿದ್ದು,
ಅಭೂತಪೂರ್ವ ಸ್ವಾಗತ ಕೋರಲು SKSSF ಜಿಲ್ಲಾ ಸಮಿತಿ ನಿರ್ಧರಿಸಿದೆ.
ಮುನ್ನಡೆ ಯಾತ್ರೆಯ ಸ್ವೀಕಾರ ಕಾರ್ಯಕ್ರಮದ ಉದ್ಘಾಟನೆಯನ್ನು ಕೊಡಗು ಜಿಲ್ಲಾ ಉಪ ಖಾಝಿ ಶೈಖುನಾ ಅಬ್ದುಲ್ಲಾ ಫೈಝಿ ಉಸ್ತಾದ್ ನಡೆಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮುನ್ನಡೆ ಯಾತ್ರೆಯ ಸಾರಥಿ, SKSSF ಕೇಂದ್ರ ಸಮಿತಿ ಅಧ್ಯಕ್ಷರಾದ ಪಾಣಕ್ಕಾಡ್ ಸಯ್ಯಿದ್ ಹಮೀದಲಿ ಶಿಹಾಬ್ ತಂಙಳ್, ಪ್ರಧಾನ ಕಾರ್ಯದರ್ಶಿ ಸತ್ತಾರ್ ಪಂದಲ್ಲೂರ್, ಕೋಶಾಧಿಕಾರಿ ರಶೀದ್ ಫೈಝಿ ವೆಳ್ಳಾಯಿಕ್ಕೊಡ್, ಅಯ್ಯೂಬ್ ಮಾಸ್ಟರ್ ಹೀಗೆ SKSSF ಕೇಂದ್ರ ಸಮಿತಿಯ ಹತ್ತು ಹಲವು ನಾಯಕರುಗಳು ಹಾಗೂ ಮಾಜಿ ಶಾಸಕರಾದ ಕೆ ಎಂ ಇಬ್ರಾಹಿಂ ಮಾಸ್ಟರ್, ಕೊಡಗು ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷರಾದ ಯಾಕೂಬ್ ಕೆ ಎ ಭಾಗವಹಿಸಲಿದ್ದಾರೆ.
ಅಬ್ದುರಹ್ಮಾನ್ ಉಸ್ತಾದ್ ಗೋಣಿಕೊಪ್ಪ, ಇಸ್ಮಾಯಿಲ್ ಉಸ್ತಾದ್, ಉಮರ್ ಫೈಝಿ ಎಡಪಾಲ, ಇಕ್ಬಾಲ್ ಉಸ್ತಾದ್ ನೆಲ್ಲಿಹುದಿಕೇರಿ, ಆರಿಫ್ ಫೈಝಿ, ಅಬೂಬಕರ್ ಮುಸ್ಲಿಯಾರ್, ಬಶೀರ್ ಹಾಜಿ ಪೆರಂಬಾಡಿ ಹೀಗೆ ಹಲವು ಧಾರ್ಮಿಕ, ಸಾಮಾಜಿಕ ನೇತಾರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಎಸ್ ಕೆ ಎಸ್ ಎಸ್ ಎಫ್ ಕೊಡಗು ಜಿಲ್ಲಾಧ್ಯಕ್ಷರಾದ ತಮ್ಲೀಕ್ ದಾರಿಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.