janadhvani

Kannada Online News Paper

ಎಲ್ಲಾ ರಾಷ್ಟ್ರಗಳಲ್ಲಿ ಹವಾಮಾನ ತುರ್ತು ಪರಿಸ್ಥಿತಿ ಘೋಷಿಸಬೇಕು- ವಿಶ್ವಸಂಸ್ಥೆ

ವಾಷಿಂಗ್ಟನ್‌, ಡಿ 13 (ಯುಎನ್ಐ): ಇಂಗಾಲದ ಪ್ರಮಾಣ ಸಾಕಷ್ಟು ಕಡಿಮೆಯಾಗುವವರೆಗೆ ಎಲ್ಲಾ ವಿಶ್ವ ನಾಯಕರು ತಮ್ಮ ಸಂಬಂಧಿತ ರಾಷ್ಟ್ರಗಳಲ್ಲಿ ಹವಾಮಾನ ತುರ್ತು ಪರಿಸ್ಥಿತಿ ಘೋಷಿಸಬೇಕು ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರಸ್‌ ಭಾನುವಾರ ಮನವಿ ಮಾಡಿದ್ದಾರೆ.

ಈ ಕುರಿತು ವಿಡಿಯೋ ಬಿಡುಗಡೆಗೊಳಿಸಿರುವ ಅವರು, ಇದೇ ರೀತಿ ಮುಂದುವರಿದಲ್ಲಿ ಈ ಶತಮಾನದ ಅಂತ್ಯದಲ್ಲಿ ನಾವು ಮೂರು ಡಿಗ್ರಿ ತಾಪಮಾನದ ಏರಿಕೆ ಕಾಣುವ ಸಾಧ್ಯತೆಯಿದೆ. ಈಗಾಗಲೇ 38 ರಾಷ್ಟ್ರಗಳು ಹವಾಮಾನ ತುರ್ತು ಪರಿಸ್ಥಿತಿ ಘೋಷಿಸಿವೆ. ಆದ್ದರಿಂದ ಇತರರು ಈ ಉದಾಹರಣೆಯನ್ನು ಅನುಕರಿಸದಿರಲು ಯಾವುದೇ ಕಾರಣಗಳಿಲ್ಲ ಎಂದಿದ್ದಾರೆ.

ನಾವು ಒಂದು ನಾಟಕೀಯ ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ ಎಂಬುದನ್ನು ಯಾರಾದರೂ ಅಲ್ಲಗೆಳೆಯಲು ಸಾಧ್ಯವೇ? ಆದ್ದರಿಂದ ಇದು ನಾವು ವಿಶ್ವದ ಎಲ್ಲಾ ನಾಯಕರಿಗೆ ಹವಾಮಾನ ತುರ್ತು ಪರಿಸ್ಥಿತಿ ಘೋಷಿಸಬೇಕು ಎಂದು ಮನವಿ ಮಾಡುತ್ತಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿರಿ...