ದುಬೈ: ಯುಎಇಯಲ್ಲಿ ವಾಟ್ಸಾಪ್ ಕರೆಗಳ ಮೇಲಿನ ನಿಷೇಧವನ್ನು ತೆರವುಗೊಳಿಸುವ ಕುರಿತು ಮಾತುಕತೆ ಮುಂದುವರೆದಿದೆ.
ವಾಟ್ಸಾಪ್ ಮತ್ತು ಫೇಸ್ಟೈಮ್ನಲ್ಲಿನ ಧ್ವನಿ ಕರೆಗಳ ನಿಷೇಧವನ್ನು ತೆಗೆದುಹಾಕಲು ಮಾತುಕತೆ ನಡೆಸಲಾಗುತ್ತಿದೆ ಎಂದು ಯುಎಇ ಸರ್ಕಾರದ ಸೈಬರ್ ಭದ್ರತೆಯ ಮುಖ್ಯಸ್ಥ ಮೊಹಮ್ಮದ್ ಅಲ್-ಕುವೈತಿ ಬಹಿರಂಗಪಡಿಸಿದ್ದಾರೆ. ಇದಕ್ಕಾಗಿ ಸಿದ್ಧತೆಗಳು ನಡೆಯುತ್ತಿದೆ ಎಂದು ಜಿಸಿಸಿ ಸೈಬರ್ ಸೆಕ್ಯುರಿಟಿ ಸಮ್ಮೇಳನದಲ್ಲಿ ಅವರು ಸ್ಪಷ್ಟಪಡಿಸಿದ್ದಾರೆ.