ರಾಜ್ಯ ಹಾಗು ಅಂತರ್ ರಾಜ್ಯ ಮಟ್ಟದಲ್ಲಿ ಮಿಂಚುತ್ತಿರುವ ಯುವ ಪ್ರತಿಭೆ
ಕರೋನ ಹಾವಳಿಯ ಈ ಸಮಯದಲ್ಲಿ ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸಿ, ಅದನ್ನೇ ಗುರಿಯಾಗಿಸಿ , ಅಂತರ್ರಾಜ್ಯ ಮಟ್ಟದಲ್ಲಿ ಸಾಧನೆಗೈಯುತ್ತಿರುವ ಯುವ ಪ್ರತಿಭೆಗೆ ಸಾಕ್ಷಿ ದಕ್ಷಿಣ ಕನ್ನಡ ಜಿಲ್ಲೆಯ ಸಮ್ಯಕ್ತ್ .ಜೈನ್.
ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ,ಕೇಂದ್ರ ಸಮಿತಿ ಹುಬ್ಬಳ್ಳಿ , ಜಿಲ್ಲಾ ಮಹಿಳಾ ಘಟಕ ಧಾರವಾಡ , ಗಾಂಧೀ ಜಯಂತಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ ಪ್ರಯುಕ್ತ ರಾಜ್ಯ ಮತ್ತು ಅಂತರ್ರಾಜ್ಯ ಮಟ್ಟದಲ್ಲಿ ಲೇಖನ ಸ್ಪರ್ಧೆಯನ್ನು ಆಯೋಜಿಸಿತ್ತು.
“ಪ್ರಸ್ತುತ ಪರಿಸ್ಥಿತಿಯಲ್ಲಿ ಸ್ವದೇಶಿ ಆಂದೋಲನದ ಪ್ರಸ್ತುತತೆ” ಎಂಬ ವಿಷಯಾಧಾರಿತ ಸ್ಪರ್ಧೆಯನ್ನು ಆಯೋಜಿಸಿತ್ತು. ಇದರಲ್ಲಿ ದಕ್ಷಿಣ ಕನ್ನಡ ,ಕಡಬ ತಾಲೂಕು, ನೂಜಿಬಾಳ್ತಿಲ ಗ್ರಾಮದ ಬಹುಮುಖ ಪ್ರತಿಭೆ ಸಮ್ಯಕ್ತ್ .ಜೈನ್ ರವರು ಪ್ರಥಮ ಸ್ಥಾನವನ್ನು ಪಡೆದು ಸಂಸ್ಥೆಯಿಂದ ಕೊಡಲ್ಪಡುವ ಪುರಸ್ಕಾರಕ್ಕೆ ಭಾಜನರಾಗಿರುತ್ತಾರೆ .
ಯುವ ಬರಹಗಾರ,ವಾಗ್ಮಿ ,ನಿರೂಪಕ, ಲೇಖಕ , ಕವಿ , ವಿಮರ್ಶೆಗಾರ , ನಾಟಕ ರಚನೆಗಾರರಾಗಿ ಗುರುತಿಸಿಕೊಂಡಿರುವ ಇವರು , ತನ್ನ ಎಳೆ ವಯಸ್ಸಿನಲ್ಲಿಯೇ ಮೂರು ಕವನ ಸಂಕಲನಗಳನ್ನು ಬರೆದು – ಬಿಡುಗಡೆಗೊಳಿಸಿರುತ್ತಾರೆ .
ರಾಜ್ಯ ಹಾಗು ಅಂತರ್ ರಾಜ್ಯ ಮಟ್ಟದ ಹಲವು ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿರುವ ಈ ಪ್ರತಿಭೆಗೆ ಈಗ ಮತ್ತೊಂದು ಸಾಧನೆಯ ಗರಿ ಪ್ರಾಪ್ತವಾಗಿದೆ .
ಇವರು ನೂಜಿಬಾಳ್ತಿಲ , ಹೊಸಂಗಡಿ ಬಸದಿ ಶ್ರೀ ಧರಣೇಂದ್ರ ಇಂದ್ರ ಮತ್ತು ಶ್ರೀಮತಿ ಮಂಜುಳಾ ರವರ ಸುಪುತ್ರ .