ಕಿನ್ಯಾ: ಇಲ್ಲಿನ ಪ್ರಖ್ಯಾತ ಕೇಂದ್ರ ಜುಮಾ ಮಸೀದಿಯಲ್ಲಿ ಸುದೀರ್ಘ ಕಾಲ ಮುಅದ್ಸಿನ್ ಆಗಿ ಸೇವೆ ಸಲ್ಲಿಸುತ್ತಿದ್ದ ಕೆ.ಬಿ.ಅಬ್ದುಲ್ಲಾಹ್ ಮುಕ್ರಿಕ ನಿನ್ನೆ ರಾತ್ರಿ ಇಹಲೋಕ ತ್ಯಜಿಸಿದ್ದಾರೆ.
ಇತ್ತೀಚೆಗೆ ನಮ್ಮನ್ನಗಲಿದ ಮರ್ಹೂಮ್ ಕೆ. ಬಿ. ಅಬ್ದುರ್ರಹ್ಮಾನ್ ಉಸ್ತಾದರ ಸಹೋದರರಾದ ಇವರು ತನ್ನ ಅಣ್ಣ ಅಗಲಿದ ಏಳನೇ ದಿನದಂದು ಕಿನ್ಯಾ ಕೇಂದ್ರ ಮಸೀದಿಯಲ್ಲೇ ಕೊನೆಯುಸಿರೆಳೆದಿದ್ದಾರೆ.
ಕಿನ್ಯಾ ಹಾಗೂ ಪರಿಸರ ಪ್ರದೇಶಗಳಲ್ಲೆಲ್ಲ ಅದ್ರಾಮುಕ್ರಿಕ ಮತ್ತು ಅದ್ಲ ಮುಕ್ರಿಕ ಎಂದೇ ಈ ಇಬ್ಬರು ಸಹೋದರರು ಪ್ರಸಿದ್ಧಿಯಾಗಿದ್ದರು. ಪಾರಂಪರಿಕವಾಗಿ ಮುಕ್ರಿಕಾ ಕುಟುಂಬದವರಾದ ಅವರು,ಕಿನ್ಯಾ ಮಸೀದಿಯಲ್ಲಿ ಸೇವೆ ಗೈಯುತ್ತಿದ್ದ ತಂದೆಯ ಅಗಲಿಕೆ ನಂತರ ಅದೇ ಸ್ಥಾನದಲ್ಲಿ ಸೇವೆ ಗೈಯುತ್ತಾ ಬಂದಿದ್ದರು.
ಮೃತರು ಪತ್ನಿ ಇಬ್ಬರು ಪುತ್ರರು ಹಾಗೂ ನಾಲ್ವರು ಪುತ್ರಿಯರನ್ನು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ ಅವರ ಪರಲೋಕ ಜೀವನ ಹಸನಾಗಿರಲಿ. ಅವರ ಅಗಲಿಕೆಯನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬಸ್ಥರಿಗೆ ಅಲ್ಲಾಹನು ದಯಪಾಲಿಸಲಿ.
ಮೃತರ ಅಗಲಿಕೆಗೆ ಕಿನ್ಯಾ ಕೇಂದ್ರ ಜುಮಾ ಮಸೀದಿಯ ಆಡಳಿತ ಸಮಿತಿ ಹಾಗೂ ಸುನ್ನೀ ಸಂಘಟನೆಗಳು ಸಂತಾಪವನ್ನು ಸೂಚಿಸಿ, ಕುರ್ ಆನ್ ಪಾರಾಯಣ, ತಹ್ಲೀಲ್ ಹಾಗೂ ಪ್ರತ್ಯೇಕ ದುಆ ನಡೆಸುವಂತೆಯೂ ಮನವಿ ಮಾಡಿದೆ.















ಇನ್ನಷ್ಟು ಸುದ್ದಿಗಳು
ಡಿ.12: ಮದಕದಲ್ಲಿ ಜಲಾಲಿಯ್ಯಾ ರಾತೀಬ್ 8ನೇ ವಾರ್ಷಿಕ ಮಜ್ಲಿಸ್
ಬಜಗೋಳಿಯಲ್ಲಿ ಸಂಭ್ರಮದ ಮೀಲಾದುನ್ನಬಿ ಕಾರ್ಯಕ್ರಮ
ಇರಾಕ್ ಕೆಸಿಎಫ್ ಪ್ರಧಾನ ಕಾರ್ಯದರ್ಶಿ ಹಸೈನಾರ್ ಕಿನ್ಯ ಅವರಿಗೆ ಊರ ಸುನ್ನೀ ಸಂಘ ಕುಟುಂಬದ ಗೌರವಾರ್ಪಣೆ
ಕಿನ್ಯಾ: ಮೀಂಪ್ರಿ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ
ಉಳ್ತೂರು ; ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ‘ಚಂದನ ರತ್ನ ಪ್ರಶಸ್ತಿ’ ಗೌರವ
ಬೊಳ್ಳಾಯಿ: SBS ವಿದ್ಯಾರ್ಥಿ ಒಕ್ಕೂಟದ ನೂತನ ಸಮಿತಿ ಅಸ್ತಿತ್ವಕ್ಕೆ
ಕಬಕ: ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಶಾಲೆಗೆ ಬಹುಮಾನ ವಿತರಣೆ
‘ಹಫ್ವಾ’ ಅಧ್ಯಕ್ಷರಾಗಿ ಸತತ 3ನೇ ಬಾರಿ ಮುಹಮ್ಮದ್ ಕುಂಞಿ ಜೋಗಿಬೆಟ್ಟು ಆಯ್ಕೆ
ಸರ್ವ ಧರ್ಮೀಯ ಸೌಹಾರ್ದತೆಗೆ ಇಸ್ಲಾಮಿನಲ್ಲಿ ಪ್ರಾಧಾನ್ಯತೆ ಇದೆ- ಬೆದ್ರಬೆಟ್ಟು ಖತೀಬ್ ಉಸ್ತಾದ್