ಹರೇಕಳ : ಹರೇಕಳ ಗ್ರಾಮದ ಒಂದನೇ ಮತ್ತು ಎರಡನೇ ವಾರ್ಡ್ ವ್ಯಾಪ್ತಿಯ ಪ್ರದೇಶಗಳಾದ ಕೊಜಪಾಡಿ, ದೇರಿಕಟ್ಟೆ, ಉಂಬುದ ಮೊದಲಾದ ಪ್ರದೇಶಗಳಿಗೆ ಸಮರ್ಪಕ ಕುಡಿಯುವ ನೀರು ಪೂರೈಸುವಂತೆ ಒತ್ತಾಯಿಸಿ ಡಿವೈಎಫ್ಐ ಹರೇಕಳ ಗ್ರಾಮ ಸಮಿತಿ ವತಿಯಿಂದ ಇಲ್ಲಿನ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭ ಮಾತನಾಡಿದ ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷ ರಫೀಕ್ ಹರೇಕಳ ಕಳೆದ ಹಲವು ದಿನಗಳಿಂದ ಈ ಭಾಗಕ್ಕೆ ಸಮರ್ಪಕ ನೀರು ಪೂರೈಕೆಯಾಗುತ್ತಿಲ್ಲ. ಮಳೆಗಾಲದ ಸಂದರ್ಭದಲ್ಲೇ ಹೀಗಾದರೆ ಮುಂಬರುವ ಬಿಸಿಲಿನ ಸಮಯದಲ್ಲಿ ಇಲ್ಲಿನ ಪರಿಸ್ಥಿತಿ ಹೇಗಿರಬಹುದು ಎಂದು ಇಲ್ಲಿನ ನಾಗರೀಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಪಂಚಾಯತ್ ಅಧಿಕಾರಿಗಳು ಕೂಡಲೇ ಈ ಬಗ್ಗೆ ಗಮನ ಹರಿಸಿ ಈ ಪ್ರದೇಶಗಳಿಗೆ ಸಮರ್ಪಕವಾಗಿ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನಿಯೋಗದಲ್ಲಿ ಡಿವೈಎಫ್ಐ ಹರೇಕಳ ಗ್ರಾಮ ಸಮಿತಿ ಅಧ್ಯಕ್ಷರಾದ ನಿಝಾಮ್ , ಎವ್ರಿಸ್ ಕುಟಿನ್ಹಾ , ಹನೀಫ್ ಪೋಡಾರ್, ಸ್ಥಳೀಯ ಸಿಪಿಐಎಂ ಮುಖಂಡರಾದ ಸುಂದರ ಪೂಜಾರಿ , ಉಮರಬ್ಬ ನ್ಯೂಪಡ್ಪ್ಬು, ಸತ್ತಾರ್ ಕೊಜಪಾಡಿ ಉಪಸ್ಥಿತರಿದ್ದರು.















ಇನ್ನಷ್ಟು ಸುದ್ದಿಗಳು
ಡಿ.12: ಮದಕದಲ್ಲಿ ಜಲಾಲಿಯ್ಯಾ ರಾತೀಬ್ 8ನೇ ವಾರ್ಷಿಕ ಮಜ್ಲಿಸ್
ಬಜಗೋಳಿಯಲ್ಲಿ ಸಂಭ್ರಮದ ಮೀಲಾದುನ್ನಬಿ ಕಾರ್ಯಕ್ರಮ
ಇರಾಕ್ ಕೆಸಿಎಫ್ ಪ್ರಧಾನ ಕಾರ್ಯದರ್ಶಿ ಹಸೈನಾರ್ ಕಿನ್ಯ ಅವರಿಗೆ ಊರ ಸುನ್ನೀ ಸಂಘ ಕುಟುಂಬದ ಗೌರವಾರ್ಪಣೆ
ಕಿನ್ಯಾ: ಮೀಂಪ್ರಿ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ
ಉಳ್ತೂರು ; ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ‘ಚಂದನ ರತ್ನ ಪ್ರಶಸ್ತಿ’ ಗೌರವ
ಬೊಳ್ಳಾಯಿ: SBS ವಿದ್ಯಾರ್ಥಿ ಒಕ್ಕೂಟದ ನೂತನ ಸಮಿತಿ ಅಸ್ತಿತ್ವಕ್ಕೆ
ಕಬಕ: ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಶಾಲೆಗೆ ಬಹುಮಾನ ವಿತರಣೆ
‘ಹಫ್ವಾ’ ಅಧ್ಯಕ್ಷರಾಗಿ ಸತತ 3ನೇ ಬಾರಿ ಮುಹಮ್ಮದ್ ಕುಂಞಿ ಜೋಗಿಬೆಟ್ಟು ಆಯ್ಕೆ
ಸರ್ವ ಧರ್ಮೀಯ ಸೌಹಾರ್ದತೆಗೆ ಇಸ್ಲಾಮಿನಲ್ಲಿ ಪ್ರಾಧಾನ್ಯತೆ ಇದೆ- ಬೆದ್ರಬೆಟ್ಟು ಖತೀಬ್ ಉಸ್ತಾದ್