janadhvani

Kannada Online News Paper

ಸೌಹಾರ್ದ ವೇದಿಕೆಗೆ ನವ ಸಾರಥ್ಯ: ಭೀಮರಾವ್ ವಾಷ್ಠರ್ ಅಧ್ಯಕ್ಷ, ಇಕ್ಬಾಲ್ ಬಾಳಿಲ ಕಾರ್ಯದರ್ಶಿ

ಮಂಗಳೂರು: ದೇಶದಲ್ಲಿ ಸೌಹಾರ್ದತೆ ನೆಲ್ಲೆನಿಲ್ಲಲು ಎಲ್ಲಾ ಧರ್ಮಗಳ ಚಿಂತಕರು, ಸಾಹಿತಿಗಳನ್ನು ಒಟ್ಟುಸೇರಿಸಿ 2017ರಲ್ಲಿ ಹುಟ್ಟು ಹಾಕಿದ ದ.ಕ.ಜಿಲ್ಲಾ ಮಾನವರು ಸಹೋದರರು ಸೌಹಾರ್ದ ವೇದಿಕೆಯ 2020/21 ನೇ ಸಾಲಿನ ನೂತನ ಸಮಿತಿಯನ್ನು ಅಂತರ್ಜಾಲದಲ್ಲಿ ಚುನಾವಣೆ ನಡೆಸುವ ಮೂಲಕ ಆಯ್ಕೆ ಮಾಡಲಾಯಿತು.

ಚುನಾವಣಾ ಅಧಿಕಾರಿಯಾಗಿ ಮುಹಮ್ಮದ್ ಕುಂಞಿ ಮಾಸ್ಟರ್ ಭಾಗವಹಿಸಿ 40 ಮಂದಿಯ ಮತದಾನ ನಡೆಸಿ ಬಳಿಕ ಪದಾಧಿಕಾರಿಗಳ ಘೋಷಣೆ ಮಾಡಿದರು.

ನೂತನ ಅಧ್ಯಕ್ಷರಾಗಿ ಹೆಚ್.ಭೀಮರಾವ್ ವಾಷ್ಠರ್ ಸುಳ್ಯ ,ಪ್ರಧಾನ ಕಾರ್ಯದರ್ಶಿಯಾಗಿ ಕೆ.ಎಂ.ಇಕ್ಬಾಲ್ ಬಾಳಿಲ, ಕೋಶಾಧಿಕಾರಿಯಾಗಿ ಎ.ಅಬೂಬಕರ್ ಅನಿಲಕಟ್ಟೆ ವಿಟ್ಲ ಚುನಾಯಿತರಾದರು.

ಪ್ರಧಾನ ಸಂಚಾಲಕರಾಗಿ ಮುಹಮ್ಮದ್ ಹಾಜಿ ಪರಪ್ಪು, ಸಹ ಸಂಚಾಲಕರಾಗಿ ಸಫ್ವಾನ್ ಸವಣೂರು, ಉಪಾಧ್ಯಕ್ಷರುಗಳಾಗಿ ಹೈದರ್ ಅಲಿ ಐವತ್ತೊಕ್ಲು, ವಿಜಯದಾಸ ನವಲಿ ರಾಯಚೂರು, ಎನ್.ಎಂ.ಹನೀಫ್ ನಂದರಬೆಟ್ಟು, ಜುನೈದ್ ಜೆಕೆಎ ಉಪ್ಪಳ, ಭರಮಣ್ಣ ಗುರಿಕಾರ್ ಕೊಪ್ಪಳ.

ಸಹ ಕಾರ್ಯದರ್ಶಿ ಗಳಾಗಿ ಅಬ್ದುಲ್ ಅಝೀಝ್ ಮಾಡಾವು, ಸಲೀಂ ಮಾಣಿ, ಸಾಬಿತ್ ಕುಂಬ್ರ, ಸಂಯೋಜಕರಾಗಿ ದಾವೂದ್ ಉಜಿರೆ, ಸಂಘಟನಾ ಕಾರ್ಯದರ್ಶಿಯಾಗಿ ದಿಲೀಪ್ ವೇದಿಕ್ ಕಡಬ, ಮಾಧ್ಯಮ ಕಾರ್ಯದರ್ಶಿಗಳಾಗಿ ಗಣೇಶ್ ಅದ್ಯಪಾಡಿ ಮಂಗಳೂರು, ಬಶೀರ್ ಕಲ್ಕಟ್ಟ ,ವಿದೇಶ ಸಂಚಾಲಕರಾಗಿ ಮುಸ್ತಫಾ ಅಂಜಿಕ್ಕಾರ್ ದೋಹ ಕತ್ತರ್.

ಸಲಹೆಗಾರರಾಗಿ ಕೆ.ಎ.ಅಬ್ದುಲ್ ಅಝೀಝ್ ಪುಣಚ, ಡಿ.ಐ.ಅಬೂಬಕರ್ ಕೈರಂಗಳ, ಡಾ. ಅಶೋಕ್ ಕುಮಾರ್ ಕಾಸರಗೋಡು, ಹಮೀದ್ ಹಸನ್ ಮಾಡೂರು, ಮಂಜುನಾಥ್ ಎನ್. ಮಂಗಳೂರು, ನವೀನ್ ಪಿರೇರ ಸುರತ್ಕಲ್.

ನಿರ್ದೇಶಕರಾಗಿ ಜಲಾಲುದ್ದೀನ್ ಮದನಿ ಉಳ್ಳಾಲ, ಎಂ.ಪಿ.ಇರ್ಫಾನ್ ನಡುಪದವು, ಆರ್.ಕೆ.ಮದನಿ ಅಮ್ಮೆಂಬಳ, ಅರಫ ಸ‌ಅದಿ ಮುಡಿಪು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಲತೀಫ್ ಆಲಂತಡ್ಕ ಪುಣಚ, ನೌಫಲ್ ಅಡ್ಕರೆ, ನೌಶಾದ್ ಹಿಮಮಿ ಚಾರ್ಮಾಡಿ, ಸಮ್ಯಕ್ತ ಜೈನ್, ಇಬ್ರಾಹಿಂ ಖಲೀಲ್ ಪುತ್ತೂರು, ಮುಸ್ತಫಾ ಬೆಳ್ಳಾರೆ, ಹಕೀಂ ಬಜ್ಪೆ, ಆಸಿಫ್ ಮಾಡಾವು ನೇಮಕಗೊಂಡಿದ್ದಾರೆ ಎಂದು ಸ್ಥಾಪಕಾಧ್ಯಕ್ಷ ಕೆ.ಎ.ಅಬ್ದುಲ್ ಅಝೀಝ್ ಪುಣಚ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com