ರಿಯಾದ್: ಕೋವಿಡ್ ಲಾಕ್ಡೌನ್ ಕಾರಣ ಊರಲ್ಲಿ ಬಾಕಿ ಉಳಿದಿರುವವರ ರೀ ಎಂಟ್ರಿ ವಿಸಾಗಳನ್ನು ಸೌದಿರ ಕಂಪನಿಗಳು ನವೀಕರಿಸಲು ಪ್ರಾರಂಭಿಸಿವೆ. ರಜೆಯ ಮೇಲೆ ತೆರಳಿದ ಬಹುತೇಕ ಮಂದಿಯ ರೀ ಎಂಟ್ರಿ ಅವಧಿಯು ನಾಳೆ ಮುಕ್ತಾಯಗೊಳ್ಳಲಿದೆ.
ಕೋವಿಡ್ನಿಂದಾಗಿ ಅಂತರರಾಷ್ಟ್ರೀಯ ವಿಮಾನಗಳು ಅಸ್ತವ್ಯಸ್ತಗೊಂಡ ನಂತರ ಅನೇಕರು ಮನೆಯಲ್ಲಿ ಸಿಲುಕಿಕೊಂಡಿದ್ದಾರೆ. ಸೌದಿ ಅರೇಬಿಯಾ ತಮ್ಮ ಅವಧಿ ಮೀರಿದ ಇಕಾಮಾ ಮತ್ತು ಮರು ಪ್ರವೇಶ ವೀಸಾಗಳನ್ನು ಎರಡು ಹಂತಗಳಲ್ಲಿ ನವೀಕರಿಸಿದೆ. ನವೀಕರಿಸಲಾದ ಮರು ಪ್ರವೇಶದ ಅವಧಿ ನಾಳೆಗೆ ಮುಗಿಯಲಿದೆ.ಮತ್ತೆ ಮರು ಪ್ರವೇಶವನ್ನು ಉಚಿತವಾಗಿ ನವೀಕರಿಸಲಾಗುತ್ತದೆ ಎಂಬುದರ ಬಗ್ಗೆ ಜಾವಾಝಾತ್ ಇನ್ನೂ ಘೋಷಿಸಿಲ್ಲ.
ಆದರೆ ಎಲ್ಲಾ ಕಂಪನಿಗಳು ಈಗ ತಮ್ಮ ಉದ್ಯೋಗಿಗಳ ಮರು-ಪ್ರವೇಶ ವೀಸಾ ಅವಧಿಯನ್ನು ಆನ್ಲೈನ್ನಲ್ಲಿ ನವೀಕರಿಸಬಹುದು. ಇಕಾಮಾ ಅವಧಿ ಹೊಂದಿರುವವರ ಮರು-ಪ್ರವೇಶವನ್ನು ಈಗ ಕಂಪನಿಯ ಅಥವಾ ಪ್ರಾಯೋಜಕರ ಅಬ್ಶೀರ್ ಮತ್ತು ಮುಕೀಮ್ ವ್ಯವಸ್ಥೆಗಳ ಮೂಲಕ ಮಾತ್ರ ವಿಸ್ತರಿಸಬಹುದು. ತಿಂಗಳಿಗೆ 100 ರಿಯಾಲ್ಗಳನ್ನು ಪಾವತಿಸುವ ಮೂಲಕ ಆನ್ಲೈನ್ನಲ್ಲಿ ನವೀಕರಿಸಬಹುದು.
ಆನ್ಲೈನ್ ಬ್ಯಾಂಕಿಂಗ್ ಮತ್ತು ಎಟಿಎಂ ಮೂಲಕ ಶುಲ್ಕ ಪಾವತಿ ಮಾಡಬಹುದು. ಇಕಾಮಾ ಸಂಖ್ಯೆ ಮತ್ತು ಮರು ಪ್ರವೇಶ ವಿಸಾ ಸಂಖ್ಯೆಯೊಂದಿಗೆ ಪಾವತಿ ಮಾಡಬೇಕು. ಇದರ ನಂತರ ಮುಕೀಮ್, ಅಬ್ಶೀರ್ ತೆರೆದು ಮರು-ಪ್ರವೇಶವನ್ನು ವಿಸ್ತರಿಸಲು ಐಕಾನ್ ಕ್ಲಿಕ್ ಮಾಡಿ. ಶೀಘ್ರದಲ್ಲೇ ಮರು ಪ್ರವೇಶವನ್ನು ವಿಸ್ತರಿಸಲಾಗುತ್ತದೆ.
ಅವಲಂಬಿತರು ತಮ್ಮ ಹೆತ್ತವರ ಅಬ್ಶೀರ್ ಮೂಲಕ ಮರು ಪ್ರವೇಶವನ್ನು ವಿಸ್ತರಿಸಬಹುದು. ಅವಧಿ ಮೀರಿದ ಮರು-ಪ್ರವೇಶವನ್ನು ನವೀಕರಿಸದಿದ್ದರೆ ಏನಾಗಬಹುದು ಎಂಬ ಅಸ್ಪಷ್ಟತೆಯಿಂದಾಗಿ ಕಂಪೆನಿಗಳು ನೌಕರರ ಮರು-ಪ್ರವೇಶವನ್ನು ನವೀಕರಿಸಲು ಪ್ರಾರಂಭಿಸಿವೆ.
ಶುಭ ಸುದ್ಧಿ: ಅವಧಿ ಮೀರಿದ “ರೀ ಎಂಟ್ರಿ” ವಿಸ್ತರಿಸಲಾಗುವುದು- ಜವಾಝಾತ್















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ