ಬಂಟ್ವಾಳ : ಪುದು ಗ್ರಾಮದ ಪೇರಿಮಾರ್ – ನಾಣ್ಯ ಅಂಗನವಾಡಿ ಕೇಂದ್ರದಲ್ಲಿ ಸರಳತೆಯಿಂದ ದೇಶದ 74ನೇ ಸ್ವಾತಂತ್ರ ದಿನಾಚರಣೆಯನ್ನು ಆಚರಿಸಲಾಯಿತು.
ಪುದು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ & ಹಾಲಿ ಸದಸ್ಯರು, ಅಂಗನವಾಡಿ ಬಾಲವಿಕಾಸ ಸಮಿತಿಯ ಅಧ್ಯಕ್ಷರಾದ ಹಾಶೀರ್ ಪೇರಿಮಾರ್ ರವರು ಧ್ವಜಾರೋಹಣಗೈದರು. ನಂತರ ಮಾತನಾಡಿದ ಅವರು ದೇಶದಿಂದ ಬ್ರಿಟಿಷರನ್ನು ಅಹಿಂಸೆ, ಉಪವಾಸ, ಸತ್ಯಾಗ್ರಹದಂತಹ ಅಸ್ತ್ರಗಳ ಮೂಲಕ ಹಿಮ್ಮೆಟ್ಟಿಸಿರುವುದು ಭಾರತೀಯರ ಸಾತ್ವಿಕ ಶಕ್ತಿಯಿಂದ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಸೇನಾನಿಗಳನ್ನು ಸ್ಮರಿಸಿಕೊಳ್ಳುತ್ತ ಪ್ರತಿಯೊಬ್ಬರೂ ಅವರ ದೇಶಭಕ್ತಿಯ ಆದರ್ಶ ಮತ್ತು ವಿಚಾರಧಾರೆಗಳನ್ನು ಅಳವಡಿಸಿಕೊಂಡರೇ ಅಖಂಡ, ಬಲಿಷ್ಠ, ಸುಂದರ ಸೌಹಾರ್ಧ ಭಾರತ ಕಟ್ಟಲು ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಸ್ಜಿದುಳ್ ಖಿಳರ್ ಖಜಾಂಚಿ ಹುಸೈನ್ ಬಾಲ್ದಬೋಟ್ಟು, ಬಾಲವಿಕಾಸ ಸಮಿತಿಯ ಸದಸ್ಯ ಉಮರಬ್ಬ ಪೇರಿಮಾರ್, ಯುವ ಕಾಂಗ್ರೆಸ್ ಕಾರ್ಯದರ್ಶಿಯಾದ ಶೌಕತ್ ಆಲಿ ಮಾರಿಪಳ್ಳ, ಫಾಝೀಲ್ ಪೇರಿಮಾರ್, ಹಮೀದ್ ಪೇರಿಮಾರ್, ಆಮೀನ್ ಮಾಲಿಕ್ ಬಾಲ್ದಬೋಟ್ಟು, ನಿಯಾಝ್ ಅಹ್ಮದ್ ಪೇರಿಮಾರ್, ಉನೈಸ್ ಬಾಲ್ದಬೋಟ್ಟು, ಸಲೀಂ ಪೇರಿಮಾರ್, ಇಕ್ಬಾಲ್ ಪೇರಿಮಾರ್, ಶಾಹೀದ್ ಪೇರಿಮಾರ್, ಹಫೀಝ್ ಪೇರಿಮಾರ್, ಜುನೈದ್ ಪೇರಿಮಾರ್ ಅಂಗನವಾಡಿಯ ಶಿಕ್ಷಕಿ ಕುಸುಮಾ, ಸಹಾಯಕ ಶಿಕ್ಷಕಿ ಅಶ್ವಿನಿ ಕುಮಾರಿ, ಆಶಾ ಕಾರ್ಯಕರ್ತೆ ಕುಸುಮಾ ನಾಣ್ಯ ಹಾಗೂ ಊರಿನ ಪ್ರಮುಖ ನಾಗರಿಕರು ಉಪಸ್ಥಿತರಿದ್ದರು.
ಮೇಲ್ಕಾರ್ ವುಮೆನ್ಸ್ ಕಾಲೇಜಿನ ಅಧ್ಯಾಪಕರಾದ ಮಾಜೀದ್ ಎಂ.ಎನ್ ಪೇರಿಮಾರ್ ರವರು ಸ್ವಾಗತ ಮತ್ತು ಧನ್ಯವಾದ ಸಲ್ಲಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಸಿಹಿತಿಂಡಿ ವಿತರಿಸಲಾಯಿತು.