janadhvani

Kannada Online News Paper

ಬಪ್ಪನಾಡು ರೆಸಿಡೆನ್ಸಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಮುಲ್ಕಿ : ಬಪ್ಪನಾಡು ರೆಸಿಡೆನ್ಸಿಯಲ್ಲಿ 74 ನೆ ಸ್ವಾತಂತ್ರ್ಯೋತ್ಸವ ವನ್ನು ಧ್ವಜಾರೋಹಣದ ಮೂಲಕ ಬಪ್ಪನಾಡು ರೆಸಿಡೆನ್ಸಿಯ ಅಸೊಸಿಯೇಶನ್ ನ ಅಧ್ಯಕ್ಷ ರಾದ ಪ್ರವೀಣ್ ಶೆಟ್ಟಿ ಯವರು ನೆರವೇರಿಸಿದರು.

ಈ ಸಂದರ್ಭ ಕಾರ್ಯದರ್ಶಿ ವಿಜೀತ್ ಅಮೀನ್,ಮಾಜಿ ಅಧ್ಯಕ್ಷ ಸುನೀಲ್, ಶಾಫಿ ಜುಮಾ ಮಸೀದಿಯ ಅಧ್ಯಕ್ಷ ರಾದ ಲಿಯಾಖತ್ ಆಲಿಯವರು ಉಪಸ್ಥಿತರಿದ್ದರು. ಪ್ರಸ್ತುತ ಕಾರ್ಯಕ್ರಮದಲ್ಲಿ SSLC ಯಲ್ಲಿ 94.5 ಶತಮಾನ ಗಳಿಸಿದ ರೀಯಾ ಶರೀಫ್ ರನ್ನು ಸನ್ಮಾನಿಸಿ ಕಿರು ಕಾಣಿಕೆ ಯನ್ನು ನೀಡಿ ಗೌರವಿಸಲಾಯಿತು.

ಅಬ್ದುಲ್ ರಶೀದ್ ಮುಲ್ಕಿ ಮತ್ತು ಮುಲ್ಕಿ ಮಸಾಕೀನ್ ನ ಮಾಜಿ ಅಧ್ಯಕ್ಷ ಅಬ್ದುಲ್ ಖಾದರ್ ಮತ್ತು ಊರಿನ ನಾಗರಿಕರು ಉಪಸ್ಥಿತರಿದ್ದರು

ವರದಿ : ಮುಸ್ತಫ ಚಿತ್ರಾಪು