ಕುವೈತ್ ಸಿಟಿ: ಕುವೈತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ಸೇವೆಗಳು ಪುನರಾರಂಭಗೊಂಡಿದೆ. ಆದರೆ, ನಾಗರಿಕ ವಿಮಾನಯಾನ ಪ್ರಾಧಿಕಾರ (ಸಿಎಎ) ಭಾರತ ಸೇರಿದಂತೆ 31 ದೇಶಗಳ ಸೇವೆಗಳಿಗೆ ತಾತ್ಕಾಲಿಕ ನಿಷೇಧ ಹೇರಿದೆ. ಕೋವಿಡ್ ಹರಡುವುದನ್ನು ತಡೆಯಲು ಆರೋಗ್ಯ ಸಚಿವಾಲಯದ ನಿರ್ದೇಶನವನ್ನು ಅನುಸರಿಸಿ ಈ ಕ್ರಮ ಎನ್ನಲಾಗಿದೆ.
ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ, ಫಿಲಿಪೈನ್ಸ್ ಮತ್ತು ಇರಾನ್‌ನ ವಲಸಿಗರನ್ನು ಈ ಹಿಂದೆ ದೇಶಕ್ಕೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿತ್ತು. ಈ ಏಳು ದೇಶಗಳ ಜೊತೆಗೆ, ಚೀನಾ, ಬ್ರೆಜಿಲ್, ಲೆಬನಾನ್, ಇಟಲಿ, ಕೊಲಂಬಿಯಾ, ಸಿಂಗಾಪುರ್, ಈಜಿಪ್ಟ್ ಮತ್ತು ಸ್ಪೇನ್ ಸೇರಿದಂತೆ ಹೆಚ್ಚಿನ 29 ದೇಶಗಳನ್ನು ಇದಕ್ಕೆ ಒಳಪಡಿಸಲಾಗಿದೆ. ಮುಂದಿನ ಸೂಚನೆವರೆಗೂ ಈ ಸ್ಥಳಗಳಿಂದ ಯಾವುದೇ ವಾಣಿಜ್ಯ ವಿಮಾನಗಳು ಇರುವುದಿಲ್ಲ.
ಕೋವಿಡ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕೆಲವು ದೇಶಗಳ ಮೇಲೆ ನಿಷೇಧ ಹೇರಲಾಗಿದೆ ಮತ್ತು ಯಾವುದೇ ಸಮಯದಲ್ಲಿ ಪಟ್ಟಿಯ ಬದಲಾವಣೆ ಸಾಧ್ಯತೆಯಿದೆ ಎಂದು ಸರ್ಕಾರದ ವಕ್ತಾರ ತಾರಿಕ್ ಅಲ್-ಮಸ್ತಮ್ ಟ್ವೀಟ್ ಮಾಡಿದ್ದಾರೆ.
ವಿಮಾನ ನಿಲ್ದಾಣ ತೆರೆದಿದ್ದರೂ ಸಹ, ಪ್ರಸ್ತುತ ಪರಿಸ್ಥಿತಿಯಲ್ಲಿ ವಿದೇಶ ಪ್ರವಾಸವನ್ನು ಸಾಧ್ಯವಾದಷ್ಟು ತಪ್ಪಿಸಬೇಕು ಎಂದು ಆರೋಗ್ಯ ಸಚಿವಾಲಯ ಸೂಚಿಸಿದೆ ಎಂದು ಅವರು ಹೇಳಿದರು. ಕೋವಿಡ್ ಪ್ರಮಾಣಪತ್ರವಿಲ್ಲದೆ ವಿದೇಶಿ ಪ್ರಜೆಗಳನ್ನು ಪ್ರವೇಶಿಸುವುದಿಲ್ಲ ಎಂದು ಹೇಳಿದರು.















ಇನ್ನಷ್ಟು ಸುದ್ದಿಗಳು
ದುಬೈ-ಇಸ್ರೇಲ್ ವಿಮಾನದಲ್ಲಿ ಪೈಲಟ್ಗಳ ನಡುವೆ ಸಂಘರ್ಷ : ಸೌದಿಯಲ್ಲಿ ತುರ್ತು ಭೂಸ್ಪರ್ಶ
ಅಣು-ವಿಕಿರಣ ಸೋರಿಕೆಯಾದರೆ ಏನು ಮಾಡಬೇಕು?; ಜಾಗರೂಕತೆಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ CDAA
ಒಮಾನ್:ಕಾರ್ಮಿಕ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ- ಫೀಲ್ಡ್ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವಾಲಯ
ರಸ್ತೆ ಬದಿಯ ಪೈಪ್ ಸರಿಪಡಿಸಿದ ಭಾರತೀಯ ಡೆಲಿವರಿ ಯುವಕ – ದುಬೈ ಸರ್ಕಾರದ ಗೌರವ
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ