ಆಂಕೋರೇಜ್, ಆಲಾಸ್ಕ, ಆ.1: ಆಗಸದಲ್ಲಿ ಎರಡು ವಿಮಾನಗಳ ನಡುವೆ ಡಿಕ್ಕಿಯಾಗಿ ಸಂಸದರೊಬ್ಬರೂ ಸೇರಿದಂತೆ ಏಳು ಮಂದಿ ಸಾವಿಗೀಡಾದ ದುರಂತ ಅಮೆರಿಕದ ಅಲಾಸ್ಕದ ಅಂಕರೋರೇಜ್ನಲ್ಲಿ ಸಂಭವಿಸಿದೆ. ಈ ಭೀಕರ ಅಪಘಾತದಲ್ಲಿ ಯಾರೂ ಬದುಕುಳಿದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಕೆನೈ ಪರ್ಯಾಯ ದ್ವೀಪದ ಸಾಲ್ಡೋಟ್ನಾ ವಿಮಾನ ನಿಲ್ದಾಣದ ಬಳಿ ಈ ದುರ್ಘಟನೆ ಸಂಭವಿಸಿದೆ.
ಒಂದು ಲಘು ವಿಮಾನವನ್ನು ಚಾಲನೆ ಮಾಡುತ್ತಿದ್ದ ಸಾಲ್ಡೋಟ್ನಾ ನಗರದ ಸಂಸದ ಮತ್ತು ರಿಪಬ್ಲಿಕನ್ ಪಕ್ಷದ ಮುಖಂಡ ಗ್ಯಾರಿ ನೋಪ್ ಸಹ ಈ ದುರ್ಘಟನೆಯಲ್ಲಿ ಮೃತಪಟ್ಟಿದ್ಧಾರೆ. ಮತ್ತೊಂದು ವಿಮಾನದಲ್ಲಿದ್ದ ನಾಲ್ಕು ಜನ ಪ್ರವಾಸಿಗರು, ಓರ್ವ ಗೈಡ್ ಹಾಗೂ ವಿಮಾನದ ಪೈಲಟ್ ಸೇರಿ ಎಲ್ಲ ಆರು ಜನರೂ ಸಹ ಅಸುನೀಗಿದ್ದಾರೆ.

ವಿಮಾನಗಳು ಡಿಕ್ಕಿ ಹೊಡೆದ ನಂತರ ಅದರ ಭಾಗಗಳು ಹೆದ್ದಾರಿಯ ಮೇಲೆ ಬಿದ್ದಿದ್ದವು. ಹೀಗಾಗಿ, ಕೆಲ ಕಾಲ ಹೈವೇಯನ್ನು ಮುಚ್ಚಲಾಗಿತ್ತು. ಈ ಅಪಘಾತ ಸಂಭವಿಸಲು ಕಾರಣವೇನು ಎನ್ನುವುದು ಇನ್ನೂ ಬೆಳಕಿಗೆ ಬಂದಿಲ್ಲ.
2019ರ ಮೇ ತಿಂಗಳಲ್ಲಿ ಕೂಡ ಇದೇ ಮಾದರಿಯ ಅಪಘಾತ ಸಂಭವಿಸಿತ್ತು. ವಿಮಾನಗಳು ಆಗಸದಲ್ಲಿ ಮುಖಾಮುಖಿ ಡಿಕ್ಕಿ ಆದ ಪರಿಣಾಮ 6 ಜನರು ಮೃತಪಟ್ಟಿದ್ದರು.















ಇನ್ನಷ್ಟು ಸುದ್ದಿಗಳು
ಅಮೆರಿಕ-ಇರಾನ್ ಒಪ್ಪಂದ: ‘ಮಿಸ್ಟರ್ ಸೆಕ್ಯೂರಿಟಿ’ಗೆ ಭಾರಿ ಹಿನ್ನಡೆ- ನೆತನ್ಯಾಹು ರಾಜಕೀಯ ವರ್ಚಸ್ಸಿಗೆ ಧಕ್ಕೆ
‘ಪಶ್ಚಿಮ ಏಷ್ಯಾದಲ್ಲಿ ಶಾಂತಿಯ ಉದಯ’ ;ಅಮೆರಿಕ-ಇರಾನ್ ಕದನ ವಿರಾಮ ತಿಳುವಳಿಕಾ ಪತ್ರಕ್ಕೆ ಸಹಿ- ಹಾರ್ಮುಜ್ ಜಲಸಂಧಿ ಶೀಘ್ರದಲ್ಲೇ ಮುಕ್ತ
ಇರಾನ್ ಒಪ್ಪಂದ ಪಾಲಿಸದಿದ್ದರೆ ನೆತ್ತಿ ಮೇಲೆ ಬಾಂಬ್ ವರ್ಷಣ- ಡೊನಾಲ್ಡ್ ಟ್ರಂಪ್ ಖಡಕ್ ಎಚ್ಚರಿಕೆ!
ಇರಾನ್-ಯುಎಸ್ ಕದನ ವಿರಾಮ: ಡೊನಾಲ್ಡ್ ಟ್ರಂಪ್ ಘೋಷಣೆ- ಇರಾನ್ನಿಂದಲೂ ದೃಢೀಕರಣ
ಮುಂದಿನ 24 ಗಂಟೆಗಳಲ್ಲಿ ಯು.ಎಸ್-ಇರಾನ್ ಶಾಂತಿ ಒಪ್ಪಂದ ಅಂತಿಮ: ಪಾಕ್ ಪ್ರಧಾನಿ ಶಹಬಾಝ್ ಷರೀಫ್
“ಬೆಲೆ ಏರಿಕೆ ನನಗೆ ಇಷ್ಟ”-ಇರಾನ್ ಯುದ್ಧದ ಕಾರಣದಿಂದ ಉಂಟಾದ ಬೆಲೆ ಏರಿಕೆಯ ಬಗ್ಗೆ ಟ್ರಂಪ್ ವಿವಾದಾತ್ಮಕ ಹೇಳಿಕೆ
’60 ದಿನಗಳಲ್ಲಿ ಹೊಸ ಕೆಲಸ ಹುಡುಕಿ, ಇಲ್ಲದಿದ್ದರೆ ದೇಶ ತೊರೆಯಿರಿ’- ಭಾರತೀಯ ಉದ್ಯೋಗಿಗಳಿಗೆ ಆತಂಕ
ಗಲ್ಫ್ ನಾಯಕರ ವಿನಂತಿಗೆ ಮನ್ನಣೆ ; ಇರಾನ್ ಮೇಲಿನ ದಾಳಿ ತಾತ್ಕಾಲಿಕ ರದ್ದು- ಟ್ರಂಪ್
‘ಯುದ್ಧ ಕೊನೆಗೊಳಿಸುವುದಕ್ಕೆ ಆದ್ಯತೆ ನೀಡಬೇಕು’- ಅಮೆರಿಕದ 14 ಅಂಶಗಳ ಪ್ರಸ್ತಾವನೆಗೆ ಇರಾನ್ ಪ್ರತಿಕ್ರಿಯೆ
ಕೊಲೆ ಬೆದರಿಕೆ, ದಂಗೆಯ ಸಾಧ್ಯತೆ; ನಿವಾಸ ಬಿಟ್ಟು ಹೊರಬಾರದ ಪುಟಿನ್- ಭದ್ರತಾ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆ