janadhvani

Kannada Online News Paper

ಆಂಕೋರೇಜ್, ಆಲಾಸ್ಕ, ಆ.1: ಆಗಸದಲ್ಲಿ ಎರಡು ವಿಮಾನಗಳ ನಡುವೆ ಡಿಕ್ಕಿಯಾಗಿ ಸಂಸದರೊಬ್ಬರೂ ಸೇರಿದಂತೆ ಏಳು ಮಂದಿ ಸಾವಿಗೀಡಾದ ದುರಂತ ಅಮೆರಿಕದ ಅಲಾಸ್ಕದ ಅಂಕರೋರೇಜ್‍ನಲ್ಲಿ ಸಂಭವಿಸಿದೆ. ಈ ಭೀಕರ ಅಪಘಾತದಲ್ಲಿ ಯಾರೂ ಬದುಕುಳಿದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಕೆನೈ ಪರ್ಯಾಯ ದ್ವೀಪದ ಸಾಲ್ಡೋಟ್ನಾ ವಿಮಾನ ನಿಲ್ದಾಣದ ಬಳಿ ಈ ದುರ್ಘಟನೆ ಸಂಭವಿಸಿದೆ.

ಒಂದು ಲಘು ವಿಮಾನವನ್ನು ಚಾಲನೆ ಮಾಡುತ್ತಿದ್ದ ಸಾಲ್ಡೋಟ್ನಾ ನಗರದ ಸಂಸದ ಮತ್ತು ರಿಪಬ್ಲಿಕನ್ ಪಕ್ಷದ ಮುಖಂಡ ಗ್ಯಾರಿ ನೋಪ್ ಸಹ ಈ ದುರ್ಘಟನೆಯಲ್ಲಿ ಮೃತಪಟ್ಟಿದ್ಧಾರೆ. ಮತ್ತೊಂದು ವಿಮಾನದಲ್ಲಿದ್ದ ನಾಲ್ಕು ಜನ ಪ್ರವಾಸಿಗರು, ಓರ್ವ ಗೈಡ್ ಹಾಗೂ ವಿಮಾನದ ಪೈಲಟ್ ಸೇರಿ ಎಲ್ಲ ಆರು ಜನರೂ ಸಹ ಅಸುನೀಗಿದ್ದಾರೆ.

ವಿಮಾನಗಳು ಡಿಕ್ಕಿ ಹೊಡೆದ ನಂತರ ಅದರ ಭಾಗಗಳು ಹೆದ್ದಾರಿಯ ಮೇಲೆ ಬಿದ್ದಿದ್ದವು. ಹೀಗಾಗಿ, ಕೆಲ ಕಾಲ ಹೈವೇಯನ್ನು ಮುಚ್ಚಲಾಗಿತ್ತು. ಈ ಅಪಘಾತ ಸಂಭವಿಸಲು ಕಾರಣವೇನು ಎನ್ನುವುದು ಇನ್ನೂ ಬೆಳಕಿಗೆ ಬಂದಿಲ್ಲ.

2019ರ ಮೇ ತಿಂಗಳಲ್ಲಿ ಕೂಡ ಇದೇ ಮಾದರಿಯ ಅಪಘಾತ ಸಂಭವಿಸಿತ್ತು. ವಿಮಾನಗಳು ಆಗಸದಲ್ಲಿ ಮುಖಾಮುಖಿ ಡಿಕ್ಕಿ ಆದ ಪರಿಣಾಮ 6 ಜನರು ಮೃತಪಟ್ಟಿದ್ದರು.

error: Content is protected !!
%d bloggers like this: