MSA ಕಳೆದ ಐದಾರು ವರ್ಷಗಳಿಂದ ತನ್ನದೇ ಆದ ವಿಷಿಷ್ಟ ರೀತಿಯಲ್ಲಿ ಸಮಾಜದ ಏಳಿಗೆಗಾಗಿ, ಹಲವಾರು ರೀತಿಯಲ್ಲಿ ಕಾರ್ಯಚರಿಸುತ್ತಿದೆ. ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವ ಬಡ ಕುಟುಂಬಕ್ಕೆ ನೆರಳಾಗಿ ನಿಂತಿರುವ MSA ಕಾರ್ಯಕರ್ತರು ಪ್ರತೀ ವರ್ಷ ರಂಝಾನಿನಲ್ಲಿ ಅರ್ಹ ಕುಟುಂಬಗಳಿಗೆ ದಿನಸಿ ಸಾಮಾಗ್ರಿಗಳನ್ನು ನೀಡುತ್ತಾ ಬಂದಿದೆ.
ಈ ವರ್ಷ COVID-19 ಕಾರಣ ದಿಂದಾಗಿ ಸಂಬಳವಿಲ್ಲದೆ ಜನರು ಹಲವಾರು ರೀತಿಯಲ್ಲಿ ಸಂಕಷ್ಟವನ್ನು ಎದುರಿಸ ಬೇಕಾಗಿ ಬಂದಿದೆ. ಸುಮಾರು 110 ಕುಟುಂಬಗಳಿಗೆ ಒಂದು ತಿಂಗಳ ದಿನಸಿ ಸಾಮಾಗ್ರಿಗಳನ್ನು ನೀಡಿದ MSA ಸಂಸ್ಥೆಯ ಈ ಕಾರ್ಯಕ್ಕೆ ಇಂಡಿಯನ್ ಗ್ರಾಂಡ್ ಮುಫ್ತಿ ಶೈಕ್ ಅಬೂಬಕ್ಕರ್ ಅಹ್ಮದ್ ಎ.ಪಿ. ಕಾಂತಪುರಂ ಉಸ್ತಾದರೂ ಪ್ರಸಂಶೆಯನ್ನು ವ್ಯಕ್ತ ಪಡಿಸಿದ್ದಾರೆ.
ಈ ಸಂಸ್ಥೆಯು ಮಿನ್ಹಾಜುನ್ಹ್ನ ವಿಮೆನ್ಸ್ ಶರೀಅತ್ ಕಾಲೇಜನ್ನು ನಡೆಸುತ್ತಿದ್ದು ನಾಲ್ಕನೇ ವರ್ಷಕ್ಕೆ ಪಾದಾರ್ಪಣೆಯನ್ನು ಮಾಡುತ್ತಿದೆ. ಬಡ ಹೆಣ್ಣು ಮಕ್ಕಳ ಮದುವೆಗೆ ಸಹಾಯ, ಕಲಿಯಲು ಆಸಕ್ತಿ ಇರುವ ಬಡ ವಿಧ್ಯಾರ್ಥಿಗಳಿಗೆ ಧನ ಸಹಾಯ, ಚಿಕಿತ್ಸೆಗೆ ಹಣವಿಲ್ಲದೆ ಸಮಸ್ಯೆಗೆ ಸಿಲುಕಿರುವವರಿಗೆ ಸಹಾಯವನ್ನು ಮಾಡುತ್ತಿರುವ ಈ ಸಂಸ್ಥೆಯು ಸಮಾಜದ ಹಾಗೂ ಮುಸ್ಲಿಂ ಸಮುದಾಯದ ಏಳಿಗೆಯನ್ನ ಗುರಿಯಾಗಿರಿಸಿ ತನ್ನ ಗಲ್ಫ್ ರಾಷ್ಟ್ರದ ಸದಸ್ಯರ ಆರ್ಥಿಕ ನೆರವಿನಿಂದ ಸಮಾಜಮುಕಿ ಕೆಳಸಗಳನ್ನು ನಡೆಸುತ್ತಾ ಬಂದಿದೆ.
ಈ ಸಂಸ್ಥೆಯು, ಅಧ್ಯಕ್ಷರಾದ ಡಾ. ಅಬ್ದುರ್ರಶೀದ್ ಝೈನಿ ಖಾಮಿಲ್ ಉಸ್ತಾದರ ನೇತೃತ್ವದಲ್ಲಿ ಕಾರ್ಯಾಚರಿಸುತ್ತಿದ್ದು ಹಲವಾರು ಸಮಾಜಪ್ರಿಯ ಪದ್ದತಿಯನ್ನು ನಡೆಸುವ ಕನಸನ್ನ ಹೊಂದಿದೆ.