ಬೆಂಗಳೂರು: ರಾಜ್ಯದ ಸಾರಿಗೆ ಸಂಸ್ಥೆಗಳು ಬಸ್ ಸಂಚಾರ ಸೇವೆಗೆ ಸಜ್ಜಾಗಿವೆ. ಸಂಚಾರ ವೇಳೆ, ಕೊರೋನಾ ವೈರಸ್ ಸೋಂಕು ಹರಡದಂತೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನ ಕೆಎಸ್ಸಾರ್ಟಿಸಿ ಮತ್ತು ಬಿಎಂಟಿಸಿ ಕೈಗೊಂಡಿವೆ. ರಾಜ್ಯದ ಅನುಮತಿಗಷ್ಟೇ ಸಾರಿಗೆ ಸಂಸ್ಥೆಗಳು ಕಾಯುತ್ತಿವೆ.
ಇದೇ ವೇಳೆ, ವಿವಿಧ ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರವನ್ನು ಏರಿಕೆ ಮಾಡಲು ಸರ್ಕಾರ ಗಂಭೀರ ಚಿಂತನೆ ನಡೆಸಿರುವುದು ತಿಳಿದುಬಂದಿದೆ. ಲಾಕ್ಡೌನ್ನಿಂದಾಗಿ ಈಗಾಗಲೇ ಸಾಕಷ್ಟು ನಷ್ಟವಾಗಿದೆ. ಬಸ್ ಸಂಚಾರ ಪುನಾರಂಭವಾದರೂ ಆದಾಯ ಬರುವ ಸಾಧ್ಯತೆ ಇಲ್ಲ. ಬಸ್ಸುಗಳಲ್ಲಿ ಸಾಮಾಜಿಕ ಅಂತರ ಪಾಲಿಸಲು ಕಡಿಮೆ ಪ್ರಯಾಣಿರಿರಬೇಕಿರುವುದರಿಂದ ಈಗಿರುವ ದರದಲ್ಲಿ ನಷ್ಟವೇ ಆಗಲಿದೆ. ಆದ್ದರಿಂದ ತಾತ್ಕಾಲಿಕ ಕ್ರಮವಾಗಿ ಶೇ. 30ರಷ್ಟು ಪ್ರಯಾಣ ದರ ಏರಿಸುವ ಕುರಿತು ಸರ್ಕಾರದ ಉನ್ನತ ಮಟ್ಟದಲ್ಲಿ ಚರ್ಚೆ ನಡೆದಿದೆ ಎಂದು ಮೂಲಗಳು ಹೇಳುತ್ತಿವೆ. ಇವರ ಪ್ರಕಾರ, ದರ ಏರಿಕೆ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.
ಬಸ್ಸುಗಳು ಸಜ್ಜು: ಸಾರಿಗೆ ಸಂಸ್ಥೆಗಳು ತಮ್ಮ ಡಿಪೋದಲ್ಲಿರುವ ಎಲ್ಲಾ ಬಸ್ಸುಗಳನ್ನ ಸರ್ವಿಸ್ ಮಾಡಿ ನಿಲ್ಲಿಸಿವೆ. ಪ್ರತಿಯೊಂದು ಬಸ್ಸಿಗೂ ಸ್ಯಾನಿಟೈಸ್ ಮಾಡಲಾಗಿದೆ. ಎಲ್ಲಾ ಸಿಬ್ಬಂದಿ ವರ್ಗದವರಿಗೂ ಕೋವಿಡ್ ತಪಾಸಣೆ ಮಾಡಲಾಗುತ್ತಿದೆ. ಈಗಾಗಲೇ 39 ಸಾವಿರ ಕೆಎಸ್ಆರ್ಟಿಸಿ ಡ್ರೈವರ್, ಕಂಡಕ್ಟರ್ ಮತ್ತಿತರ ಸಿಬ್ಬಂದಿಯ ತಪಾಸಣೆ ಆಗಿದೆ.
ಹಾಗೆಯೇ ಕೊರೋನಾ ವೈರಸ್ ಹರಡದಂತೆ ತಡೆಯಲು ಬಿಎಂಟಿಸಿ ತನ್ನ ಸಿಬ್ಬಂದಿಗೆ ಮಾರ್ಗಸೂಚಿ ನೀಡಿದೆ. ಪ್ರತಿಯೊಬ್ಬ ಸಿಬ್ಬಂದಿಯೂ ವೈಯಕ್ತಿಕ ಶುಚಿತ್ವಕ್ಕೆ ಮೊದಲ ಆದ್ಯತೆ ಕೊಡಬೇಕು; ಕರ್ತವ್ಯಕ್ಕೆ ಹಾಜರಾಗುವ ಪ್ರತಿಯೊಬ್ಬರೂ ಆರೋಗ್ಯ ದೃಢೀಕರಣ ಹೊಂದಿದ್ದರೆ ಮತ್ತು ಮಾಸ್ಕ್ ಧರಸಿದರೆ ಮಾತ್ರ ಪ್ರವೇಶ; ಪ್ರವೇಶ ದ್ವಾರದಲ್ಲಿ ಥರ್ಮಲ್ ಟೆಸ್ಟಿಂಗ್ಗೆ ಒಳಪಡುವುದು ಕಡ್ಡಾಯ; ಯಾವುದೇ ವ್ಯಕ್ತಿ ಜೊತೆ ಮೌಖಿಕವಾಗಿ ವ್ಯವಹರಿಸುವಾಗ 6 ಅಡಿ ಅಂತರ ಕಡ್ಡಾಯ; ಕಚೇರಿಯ ಒಳಗೆ ಬರುವಾಗ ಸ್ಯಾನಿಟೈಸರ್ನಿಂದ ಕೈ ಶುಚಿ ಮಾಡಿಕೊಳ್ಳಬೇಕು; ಆದಷ್ಟೂ ಮನೆಯಿಂದಲೇ ಊಟ ತಂದು ಸೇವಿಸಬೇಕು; ಮುಂದಿನ ಆದೇಶದವರೆಗೂ ಬಯೋಮೆಟ್ರಿಕ್ ಬಳಸುವಂತಿಲ್ಲ ಇವೇ ಮುಂತಾದ ಅಂಶಗಳು ಮಾರ್ಗಸೂಚಿಯಲ್ಲಿವೆ.















ಇನ್ನಷ್ಟು ಸುದ್ದಿಗಳು
ರಾಜ್ಯ ಸರ್ಕಾರಕ್ಕೆ ದಕ್ಷಿಣ ಕನ್ನಡ ಜಿಲ್ಲಾ ವಖ್ಫ್ ಸಲಹಾ ಸಮಿತಿಯಿಂದ ಅಭಿನಂದನೆಗಳು
ನೌಕರರ ಮಿಂಚಿನ ಮುಷ್ಕರ : ಅಂತಾರಾಷ್ಟ್ರೀಯ ವಿಮಾನಯಾನ ರದ್ದು
ಭಜರಂಗದಳ ಮಾಜಿ ರಾಜ್ಯ ಸಂಚಾಲಕ ರಘು ಪರಾರಿ
‘ಎನ್ ಹಾನ್ಸ್ ಇಂಡಿಯಾ ಕಾನ್ಫರೆನ್ಸ್’- ಮಂಗಳೂರಿನ ಸಮಾವೇಶಕ್ಕೆ ಕ್ಷಣಗಣನೆ
ಖುರ್ಆನ್ ದುರ್ವ್ಯಾಖ್ಯಾನಕಾರರಿಂದ ಇಸ್ಲಾಂಗೆ ಭಾರೀ ಹಾನಿಯುಂಟಾಗುತ್ತಿದೆ- ಡಾ. ಝೈನೀ ಕಾಮಿಲ್
ಪಬ್ಲಿಕ್ ಟಿವಿಯ ರಂಗನಾಥ್ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸುವಂತೆ ನ್ಯಾಯಾಲಯ ಆದೇಶ
‘ಕೈ’ ಪಾಲಯಕ್ಕೆ ಸಿಎಂ ಇಬ್ರಾಹಿಂ ಗುಡ್ ಬೈ – ಜೆಡಿಎಸ್ ಸೇರುವುದು ಖಚಿತ.?
ಮದ್ರಸಾಗಳಲ್ಲಿ, ಜನಗಳ ಮಧ್ಯೆ ಸೌಹಾರ್ದ, ಸಹಬಾಳ್ವೆ, ಭ್ರಾತೃತ್ವ ಸಂಬಂಧಗಳನ್ನು ಬೆಳೆಸಲು ಕಲಿಸಲಾಗುತ್ತಿದೆ- ರಾಜ್ಯ ಸರ್ಕಾರ
ರೌಳತುಲ್ ಉಲೂಂ ಓಲ್ಡ್ ಸ್ಟೂಡೆಂಟ್ಸ್ ಉಕ್ಕುಡ ಆಯೋಜಿಸಿದ ಸ್ನೇಹ ಸಂಗಮ
ರಾಜ್ಯದಲ್ಲಿ ನೈಟ್ ಕರ್ಪ್ಯೂ- ರಾತ್ರಿ 10 ರಿಂದ ಯಾವುದೇ ವಾಹನಗಳ ಓಡಾಟಕ್ಕೆ ಅವಕಾಶವಿಲ್ಲ