ಮಾಣಿ : ಸುನ್ನೀ ಯುವಜನ ಸಂಘ( SYS ) ಸೂರಿಕುಮೇರು ಬ್ರಾಂಚ್ ಕಮಿಟಿ ವತಿಯಿಂದ ಸ್ಥಳೀಯ ಐವತ್ತು ಕುಟುಂಬಗಳಿಗೆ ಕಿಟ್ ವಿತರಣಾ ಕಾರ್ಯಕ್ರಮ ಗುರುವಾರ ನಡೆಯಿತು.ಯೂಸುಫ್ ಹಾಜಿ ಸೂರಿಕುಮೇರು ಅಧ್ಯಕ್ಷತೆ ವಹಿಸಿದ್ದರು.
ರಝಾಕ್ ಮದನಿ ಕಾಮಿಲ್ ಸಖಾಫಿ ಉದ್ಘಾಟನೆ ನಡೆಸಿದರು, ಇಬ್ರಾಹಿಂ ಸಅದಿ ಮಾಣಿ ದುಆ ನೆರವೇರಿಸಿದರು, ಕಾರ್ಯಕ್ರಮದಲ್ಲಿ ಸೆಂಟರ್ ನಾಯಕ ಸುಲೈಮಾನ್ ಸೂರಿಕುಮೇರು, ಹಂಝ ಕಾಯರಡ್ಕ,ಕರೀಂ ನೆಲ್ಲಿ,ಅಬ್ದುಲ್ ಫತ್ತಾಹ್ ಹಳೀರ,ಚೆರೆಮೋನಾಕ ಸರಪಾಡಿ,ಮುಂತಾದ ಗಣ್ಯರು ಭಾಗವಹಿಸಿದ್ದರು.
ಹನೀಫ್ ಸಂಕ ವಿತರಣಾ ಕಾರ್ಯಕ್ರಮ ನೆರವೇರಿಸಿದರು,ಸಲೀಂ ಮಾಣಿ ಧನ್ಯವಾದ ಸಮರ್ಪಿಸಿದರು.