janadhvani

Kannada Online News Paper

ಅನಿವಾಸಿ ಭಾರತೀಯರನ್ನು ಸ್ವೀಕರಿಸಲು ಸಜ್ಜರಾಗಿ- ರಾಜ್ಯ ಸರಕಾರಕ್ಕೆ ಕೇಂದ್ರ ಸೂಚನೆ

ತಿರುವನಂತಪುರಂ,ಏ.16: ಭಾರತಕ್ಕೆ ಮರಳಲು ಬಯಸುವ ವಲಸಿಗರನ್ನು ನಿರೀಕ್ಷಿತ ಸಮಯಕ್ಕಿಂತ ಮುಂಚಿತವಾಗಿ ಕರೆತರಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರ ಅಂದಾಜಿಸಿದೆ. ಮರಳುವವರಿಗೆ ಸೌಲಭ್ಯಗಳನ್ನು ಒದಗಿಸುವಂತೆ ಕೇಂದ್ರದಿಂದ ನಿನ್ನೆ ಕೇರಳ ಸರ್ಕಾರಕ್ಕೆ ನಿರ್ದೇಶನ ಲಭಿಸಿರುವುದಾಗಿ ಮಲಯಾಳ ಪತ್ರಿಕೆ ವರದಿ ಮಾಡಿದೆ. ಕರ್ನಾಟಕ ಸರಕಾರದಿಂದ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಸಚಿವಸಂಪುಟ ಸಭೆಯಲ್ಲಿ ವಲಸಿಗರಿಗೆ ಒದಗಿಸಲಾಗುವ ಸೌಲಭ್ಯಗಳನ್ನು ನಿಗದಿಪಡಿಸಲಾಗುವುದು, ಗರ್ಭಿಣಿಯರು, ಮಕ್ಕಳು ಮತ್ತು ರೋಗಿಗಳಿಗೆ ಆದ್ಯತೆ ನೀಡಲಾಗುವುದು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಏತನ್ಮಧ್ಯೆ, ಕೊಲ್ಲಿಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 18,000 ದಾಟಿದೆ. ಆರು ಕೊಲ್ಲಿ ರಾಷ್ಟ್ರಗಳಲ್ಲಿ 133 ಮಂದಿ ಬಲಿಯಾಗಿದ್ದಾರೆ. ಮುಂದಿನ ಎರಡು ವಾರಗಳು ಯುಎಇಯ ಸಮನ್ವಯ ಕಾರ್ಯಾಚರಣೆಯಲ್ಲಿ ನಿರ್ಣಾಯಕವಾಗಲಿದೆ ಎಂದು ಅಂದಾಜಿಸಲಾಗಿದೆ.

ಕೊಲ್ಲಿಯಲ್ಲಿನ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಗಳಿಗೆ ಕೊವಿಡ್ ಪರಿಣಾಮ ಬೀರಲಿದೆ ಎಂಬ ಆತಂಕದ ಹಿನ್ನೆಲೆಯಲ್ಲಿ ಯುಎಇ ಸೇರಿದಂತೆ ಕೊಲ್ಲಿ ರಾಷ್ಟ್ರಗಳು ಯುದ್ಧ ಆಧಾರಿತ ಪ್ರತಿದಾಳಿ ಕಾರ್ಯಾಚರಣೆಯಲ್ಲಿ ತೊಡಗಿವೆ. ಸೌದಿ ಅರೇಬಿಯಾ, ಯುಎಇ ಮತ್ತು ಕತಾರ್ ನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ.

ಸೌದಿ ಅರೇಬಿಯಾದಲ್ಲಿ 5862 ಪ್ರಕರಣಗಳು ದೃಢ ಪಟ್ಟಿದೆ.ಇದರಲ್ಲಿ 186 ಭಾರತೀಯರು ಎಂದು ರಾಯಭಾರ ಕಚೇರಿ ತಿಳಿಸಿದೆ. ಗರಿಷ್ಠ ಎರಡು ಲಕ್ಷ ಜನರಿಗೆ ಕೋವಿಡ್‌ ಬಾಧಿಸಲಿದೆ ಎಂದು ಸೌದಿ ಆರೋಗ್ಯ ಸಚಿವಾಲಯ ಅಂದಾಜಿಸಿದೆ.