✍️ ಅಬೂ ಮುರ್ಷಿದಾ, ಪುತ್ತೂರು_*
ನಾನಿಂದು ಬೆಳಿಗ್ಗೆ 11:00 ಗಂಟೆಯ ವೇಳೆಗೆ ಪುತ್ತೂರು ಪೇಟೆಗೆ ಹೋಗಿದ್ದೆ. ಅಲ್ಲಿಂದ ಮಾರ್ಕೆಟ್ ಕಡೆಯತ್ತ ಸಾಗಿದೆ. ಹಿಂತಿರುಗಿ ಬರುವಾಗ ಡ್ರಸ್ ಅಂಗಡಿ ಗಳನ್ನು ನೋಡಿ ಏನೋ ಮನಸ್ಸು ನೊಂದಿತು.
ಹೌದು, ಇಂದು ಡ್ರಸ್ ಅಂಗಡಿಗಳು ಸಂಪೂರ್ಣ ಬಂದ್ ಆಗಿದ್ದವು. ಕಳೆದ ವರ್ಷ ಇದೇ ಬರಾಅತ್ ದಿನ ಪುತ್ತೂರು ಪೇಟೆಯ ಒಂದೇ ಒಂದು ಜವುಲಿ ಅಂಗಡಿಗೆ ಕಾಲಿಡಲು ಜಾಗ ಇರಲಿಲ್ಲ. ಕಾರಣ ಕೇಳಿದರೆ ಎಲ್ಲರಿಗೂ ಒಂದೇ ಉತ್ತರ… ಇಂದು *ಪುದಿಯೆ ಬರಾಅತ್* ಆದರೆ ಹೇಳುವ ಮಾತುಗಳು ವಿಭಿನ್ನ. “ನನ್ನದು, ಮಗುವಿನದ್ದು, ಮಗನದ್ದು, ಮಗಳದ್ದು, ಮೊಮ್ಮಕ್ಕಳದ್ದು, ಮನೆಯದ್ದು, ಸೊಸೆದ್ದು, ಅಳಿಯನದ್ದು” ಹೀಗೆ ಉದ್ದದ ಸಾಲುಗಳು… “ಪುದಿಯೆ ಬರಾಅತ್”
ಆದರೆ ಈ ದಿನ ಯಾರಿಗೂ ಪುದಿಯೆ ಬರಾಅತ್ ನ ನೆನಪೇ ಇಲ್ಲ. ಒಂದು ವೇಳೆ ಅಂತರ್ಜಾಲವೂ ಇಲ್ಲದಿರುತ್ತಿದ್ದರೆ ಬರಾಅತ್ ದಿನದ ನೆನಪಿಗೆ ಬರುತ್ತಿರಲಿಲ್ಲವೋ, ಏನೋ? ಎಲ್ಲವೂ ಅವನ ವಿಧಿ. ಕೊರೋನೊ ಎಂಬ ಕಣ್ಣಿಗೂ ಕಾಣದ ವೈರಸ್ ಬಂದಾಗ ತುತ್ತು ಅನ್ನಕ್ಕೂ ಪರದಾಡಬೇಕಾಯಿತು. ವಾರಕ್ಕೊಮ್ಮೆ ಡ್ರೆಸ್, ವಾರಕ್ಕೊಮ್ಮೆ ಸುತ್ತಾಟ ಎಲ್ಲವೂ ನಿಂತುಹೋಯಿತು.
ಮಸೀದಿಯಲ್ಲಿ ನಡೆಯುವ ನಮಾಝ್, ಹದ್ದಾದ್, ಸ್ವಲಾತ್ ಇತರ ಮಜ್ಲಿಸ್ ನಮಗೆ ಹೋಗಲು ಸಮಯವಿರಲಿಲ್ಲ. ಸಮಯ ವಿದ್ರೂ ಮನಸ್ಸು ಇಲ್ಲ. ಈಗ ಸಮಯವಿದೆ… ಮನಸ್ಸೂ ಇದೆ… ಆದರೆ…. ಮಸೀದಿ ಬಂದ್… ಅಲ್ಲಾಹನೇ,ನೀನೇ ರಕ್ಷಿಸು…
ಬದಲಾಗೋಣ….. ಇನ್ನಾದರೂ ನಾವು ಬದಲಾಗಬೇಕು… ಕೊರೋನೊ ಅದಕ್ಕೊಂದು ಕಾರಣವಾಗಲಿ. ಎಲ್ಲ ಬಿಂದಾಸ್ ಬದಿಗಿಟ್ಟು ಅಲ್ಲಾಹುವಿನತ್ತ ಮರಳುವ ದಾರಿ ಹುಡುಕೋಣ. ಅಲ್ಲಾಹು ಅನುಗ್ರಹಿಸಲಿ. ಆಮೀನ್