ಪೊಲೀಸರೇ..
ಕೈಯಲ್ಲಿ ಲಾಠಿ ಇದೆ ಎಂದ ಮಾತ್ರಕ್ಕೆ ಸಿಕ್ಕ ಸಿಕ್ಕವರಿಗೆ ಹೊಡೆದು,ಬಡಿದು ಖಾಕಿ ಮೌಲ್ಯವನ್ನು ಕಳಕೊಳ್ಳಬೇಡಿ.
ಈಗಾಗಲೇ ನಿಮ್ಮಲ್ಲಿರುವ ಗೌರವ, ಕನಿಕರ ಸಾರ್ವಜನಿಕರಿಗೆ ಇಲ್ಲವಾಗಿದೆ. ನಾನು ಉದ್ಯೋಗದಲ್ಲಿರುವ ಸೌದಿ ಅರೇಬಿಯಾದಲ್ಲೂ ಕೂಡ ಕರ್ಫ್ಯು ಇದೆ.
ಸಂಜೆ 7 ರಿಂದ ಬೆಳಿಗ್ಗೆ 6ರ ತನಕ ಜನರು ಹೊರಗೆ ಬರುವಂತಿಲ್ಲ.ಯಾರನ್ನಾದರೂ
ಹೊರಗೆ ಕಂಡಲ್ಲಿ 10,000 ರಿಯಾಲ್ (1,90,000)ರೂ.ದಂಡ ಇದೆ.
( ತುರ್ತು ಮತ್ತು ಅಗತ್ಯ ವಸ್ತುಗಳಿಗೆ ಎಸ್ಕ್ಯೂಸ್ ಇದೆ.)
ಕಾನೂನು ಉಲ್ಲಂಘಿಸುವವರು ಸಾವಿರದಲ್ಲಿ ಒಬ್ಬ,ಆದರೆ ಅಂತರವನ್ನು
ಇಲ್ಲಿಯ ಪೊಲೀಸರು ಹಿಡಿದು ಬಡಿಯುವುದಿಲ್ಲ,ನಡು ರಸ್ತೆಯಲ್ಲಿ ಶಿಕ್ಷಿಸುವುದಿಲ್ಲ ಹೆಚ್ಚೇಕೆ ಇಲ್ಲಿ ಪೊಲೀಸರ ಕೈಯಲ್ಲಿ ಲಾಠಿಯೇ ಇಲ್ಲ.
ಆದರೆ ನಮ್ಮ ಭಾರತದಲ್ಲಿ ಪೊಲೀಸರ ವರ್ತನೆ “ಪೊಲೀಸರು ಮನುಷ್ಯರೇ” ಎಂದು ಸಂಶಯಿಸುತ್ತಿದೆ.
ಅಕ್ಷರಶಃ ಹುಚ್ಚು ವರ್ತನೆ.
ಜನಸಾಮಾನ್ಯರು ಕಾನೂನು ಉಲ್ಲಂಘಿಸಿದ್ದಲ್ಲಿ ಸ್ವಯಂ ಪ್ರೇರಿತರಾಗಿ ಕೇಸು ದಾಖಲಿಸಿ.
ಜನರು ಮೋಜಿ ಮಸ್ತಿಗೆ ರಸ್ತೆಗಿಳಿಯುತ್ತಿಲ್ಲ.ಅಗತ್ಯ ವಸ್ತುವಿಗಾಗಿ ಜನರು ರಸ್ತೆಗಿಳಿಯುವುದು ಅಪರಾಧವಾದರೆ ದೇಶದಲ್ಲಿ ಸಂಪೂರ್ಣ ಬಂದ್ ಘೋಷಿಸಲಿ.
ಅನಗತ್ಯವಾಗಿ ತಿರುಗಾಡುವವರನ್ನು ಕಂಡರೆ ಕೂಡಲೇ ಕಸ್ಟಡಿಗೆ ತೆಗೆದು ಕೇಸು ದಾಖಲಿಸಿ ಕಾನೂನು ಕ್ರಮ ತೆಗೆಯಿರಿ ಅದು ಬಿಟ್ಟು ನಾಲ್ಕೈದು ಪೊಲೀಸರು ಒಟ್ಟು ಸೇರಿ ಮನ ಬಂದಂತೆ ಹೊಡೆಯುವ ನೈತಿಕ ಹಕ್ಕು ನಿಮಗಿಲ್ಲ.
ಜನಸಾಮಾನ್ಯರು ಕೂಡ ನಿಮ್ಮಂತೆ ಮನಷ್ಯರು ಎಂಬುದನ್ನು ಅರ್ಥಮಾಡಿಕೊಳ್ಳಿ ಇಲ್ಲದಿದ್ದಲ್ಲಿ ಜನಸಾಮಾನ್ಯರ ಬೈಗುಳ,ಶಾಪ ನಿಮಗೆ ತಪ್ಪಿದ್ದಲ್ಲ.
ನೀವು ನಿಮ್ಮ ಕರ್ತವ್ಯ ಮಾಡುತಿದ್ದೀರಿ ಅಷ್ಟೇ.
ಜನ ಸಾಮನ್ಯರು ಕಟ್ಟುತ್ತಿರುವ ತೆರಿಗೆಯಿಂದ ನಿಮಗೆ ಸಂಬಳ, ವಸತಿ ಕೊಟ್ಟು ನಿಮ್ಮನ್ನು ಜನಸಾಮಾನ್ಯರೇ ಪೋಷಿಸುತ್ತಿದ್ದಾರೆ ಎಂಬುದು ನೆನಪಿರಲಿ.
ನೀವು ನಿಮ್ಮ ಡ್ಯುಟಿಯನ್ನು ಪುಕ್ಕಟೆಗಾಗಿ ಮಾಡುತ್ತಿಲ್ಲ.ಜವಾಬ್ದಾರಿಯಿಂದ ಕರ್ತವ್ಯ ನಿರ್ವಯಿಸಿ. ಖಾಕಿ ಮೌಲ್ಯವನ್ನು ಕಳಕೊಳ್ಳಬೇಡಿ.
✍ಇಸ್ಹಾಕ್ ಸಿ.ಐ.ಫಜೀರ್, ಸೌದಿ ಅರೇಬಿಯಾ