ಬೈಂದೂರು: ಕರ್ನಾಟಕ ಮುಸ್ಲಿಂ ಜಮಾಅತ್ ಇದರ ಬೈಂದೂರು ತಾಲೂಕು ಘೋಷಣಾ ಸಮಾವೇಶವು ಕರ್ನಾಟಕ ಮುಸ್ಲಿಂ ಜಮಾಅತ್ ಉಡುಪಿ ಜಿಲ್ಲಾ ಉಪಾಧ್ಯಕ್ಷರಾದ ಜನಾಬ್ ಬಿ.ಎಸ್.ಎಫ್. ರಫೀಖ್ ರವರ ಅಧ್ಯಕ್ಷತೆಯಲ್ಲಿ ನಾವುಂದ ಬುಸ್ತಾನುಲ್ ಉಲೂಂ ಮದ್ರಸ ಸಭಾಂಗಣದಲ್ಲಿ ನಡೆಯಿತು.
ಸ್ಥಳೀಯ ಮುದರ್ರಿಸರಾದ ಅಬ್ದುಲ್ಲತೀಫ್ ಅಲ್- ಫಾಳಿಲಿ ಯವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಶುಭ ಹಾರೈಸಿದರು. ಕರ್ನಾಟಕ ಮುಸ್ಲಿಂ ಜಮಾಅತ್ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೈ. ಬಿ. ಸಿ. ಬಶೀರ್ ಅಲಿ ಮೂಳೂರು ವಿಷಯ ಮಂಡಿಸಿದರು. ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಸದಸ್ಯರೂ, ಜಿಲ್ಲಾ ಕಾರ್ಯದರ್ಶಿಯೂ ಆದ ಕೆ. ಎ. ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಪ್ರಾಸ್ತಾವಿಕ ಭಾಷಣ ಮಾಡಿದರು. ಬಳಿಕ ಕರ್ನಾಟಕ ಮುಸ್ಲಿಂ ಜಮಾಅತ್ ಜಿಲ್ಲಾ ಕಾರ್ಯದರ್ಶಿ ಸುಬ್ಹಾನ್ ಅಹ್ಮದ್ ಹೊನ್ನಾಳ ರವರು ಬೈಂದೂರು ತಾಲೂಕು ಸಮಿತಿಯ ಆಯ್ಕೆ ಪ್ರಕ್ರಿಯೆಯ ನೇತೃತ್ವ ವಹಿಸಿ ನೂತನ ಸಮಿತಿಯನ್ನು ಘೋಷಣೆ ಮಾಡಿದರು.
ಸಮಿತಿಯ ಗೌರವ ಸಲಹೆಗಾರಾಗಿ ಅಬ್ದುಲ್ಲತೀಫ್ ಅಲ್-ಫಾಳಿಲಿ ನಾವುಂದ, ತೌಫೀಖ್ ಎನ್. ಅಬ್ದುಲ್ಲಾ ಹಾಜಿ ನಾವುಂದ, ಅಬ್ದುಲ್ ಹಮೀದ್ ಹಾಜಿ ಬಡಾಕೆರೆ, ಹಸೈನಾರ್ ಮುಸ್ಲಿಯಾರ್ ಕೋಯನಗರ, ಸಯ್ಯದ್ ಮೀರಾನ್ ಸಾಬ್ ಬೈಂದೂರು, ಅಧ್ಯಕ್ಷರಾಗಿ ಮನ್ಸೂರ್ ಇಬ್ರಾಹಿಂ ಮರವಂತೆ, ಪ್ರಧಾನ ಕಾರ್ಯದರ್ಶಿ ಫಹೀಮ್ ಶಿರೂರು, ಕೋಶಾಧಿಕಾರಿಯಾಗಿ ಜಾಫರ್ ಸಾಬ್ ಬೈಂದೂರು, ಸಂಘಟನಾ ಕಾರ್ಯದರ್ಶಿಯಾಗಿ ಕೆ.ಎಂ.ಎಚ್. ಝುಹುರಿ ಕೋಯನಗರ, ಉಪಾಧ್ಯಕ್ಷರಾಗಿ ಸಿದ್ದೀಕ್ ಸಾಬ್ ಶಿರೂರು, ಸುಲೈಮಾನ್ ಚಾತನಕೆರೆ, ಹುಸೈನ್ ಬೈಂದೂರು, ಅಹ್ಮದ್ ನಾವುಂದ, ಕಾರ್ಯದರ್ಶಿಗಳಾಗಿ ಇರ್ಷಾದ್ ಕೋಯನಗರ, ಅಬ್ದುಲ್ ಖಾದರ್ ಬಡಾಕರೆ, ಖಾಸಿಂ ಉಪ್ಪುಂದ, ಸುಲ್ತಾನ್ ಬೈಂದೂರು, ಕಾರ್ಯಕಾರಿ ಸದಸ್ಯರಾಗಿ ಅಡ್ವಕೇಟ್ ಇಲ್ಯಾಸ್ ನಾವುಂದ, ಎಸ್. ಜೆ. ಬಿ. ಕೋಯ, ರಫೀಖ್ ಮರವಂತೆ, ಅಬ್ದುಸ್ಸಲಾಂ ನಾವುಂದ, ಅಬ್ದುಲ್ ಹಮೀದ್ ಬಡಾಕೆರೆ, ಅಬ್ಬಾಸ್ ಮಾಣಿಕೊಳಲು, ಬಶೀರ್ ಶಿರೂರು, ರಮಳಾನ್ ಆಕಳಬೈಲು, ಸುಲೈಮಾನ್ ಬಡಾಕೆರೆ, ಹಂಝ ಆಕಳಬೈಲು, ಶಾಜಹಾನ್ ಚಾತನಕೆರೆ, ಮೊಯಿದೀನ್ ನಾವುಂದ, ಫೈಝಾನ್ ಬೈಂದೂರು ಎಂಬವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಜಿಲ್ಲಾ ಉಪಾಧ್ಯಕ್ಷರಾದ ಶೇಖ್ ಮುಹಮ್ಮದ್ ನಯೀಮ್ ಕಟಪಾಡಿ, ಜಿಲ್ಲಾ ಕಾರ್ಯದರ್ಶಿ ಕೆ. ಎಸ್. ಎಂ. ಮನ್ಸೂರು ಉಡುಪಿ, ಎಸ್ಸೆಸ್ಸೆಫ್ ದ.ಕ ಜಿಲ್ಲಾ ಉಪಾಧ್ಯಕ್ಷರಾದ ಕೊಂಬಾಳಿ ಝುಹುರಿ, ಎಸ್ಸೆಸ್ಸೆಫ್ ಬೈಂದೂರು ಡಿವಿಷನ್ ಅಧ್ಯಕ್ಷರಾದ ಎಸ್. ಎಂ. ಹನೀಫ್ ಸಅದಿ, ಜಿಲ್ಲಾ ಸಂಯುಕ್ತ ಜಮಾಅತ್ ನಾಯಕರಾದ ಹೆಚ್. ಶಹಬಾನ್ ಹಂಗಳೂರು, ಅಬ್ದುಲ್ ಖಾದರ್ ಬಡಾಕರೆ,
ಎಸ್. ವೈ. ಎಸ್ ನಾವುಂದ ಸೆಂಟರ್ ಅಧ್ಯಕ್ಷರಾದ ರಮಳಾನ್ ಆಕಳಬೈಲು, ಬೈಂದೂರು ಜಾಮಿಯಾ ಮಸೀದಿ ಅಧ್ಯಕ್ಷರಾದ ಸಿ.ಎ.ಸಾಹೇಬ್. ಕಾರವಾರ ಜಿಲ್ಲಾ ವಕ್ಫ್ ಬೋರ್ಡ್ ಸದಸ್ಯರಾದ ಫಾರೂಕ್ ಸಾಬ್ ಜಿಲ್ಲಾ ಎಸ್. ವೈ. ಎಸ್ ಕಾರ್ಯದರ್ಶಿ ಇಬ್ರಾಹಿಂ ಮಾಣಿಕೊಳಲು ಹಾಗೂ ಇನ್ನಿತರ ಉಲಮಾ ಉಮರಾ ನಾಯಕರು ಉಪಸ್ಥಿತರಿದ್ದರು.
ಕರ್ನಾಟಕ ಮುಸ್ಲಿಂ ಜಮಾಅತ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಡ್ವಕೆಟ್ ಇಲ್ಯಾಸ್ ನಾವುಂದ ಸ್ವಾಗತಿಸಿ, ವಂದಿಸಿದರು.