janadhvani

Kannada Online News Paper

ಮೂರು ದಿನಗಳಿಗೆ ಮುಂಚಿತವಾಗಿ ‘ಇಖಾಮಾ’ ನವೀಕರಿಸಬೇಕು- 3 ನೇ ಅವಧಿ ಬಳಿಕ ಗಡೀಪಾರು

ರಿಯಾದ್: ವಿದೇಶಿ ಕಾರ್ಮಿಕರು ಅವಧಿ ಮುಗಿಯು ಕನಿಷ್ಠ ಮೂರು ದಿನಗಳಿಗೆ ಮುಂಚಿತವಾಗಿ ತಮ್ಮ ರೆಸಿಡೆನ್ಸಿ ಐಡೆಂಟಿಟಿ (ಇಖಾಮಾ) ಅನ್ನು ನವೀಕರಿಸಬೇಕು ಮತ್ತು ಇಖಾಮಾವನ್ನು ನವೀಕರಿಸದಿರುವುದು ಕಾನೂನುಬಾಹಿರ ಮತ್ತು ಅಂತಹ ವ್ಯಕ್ತಿಗಳನ್ನು ಕಾನೂನು ಕ್ರಮಕ್ಕೆ ಒಳಪಡಿಸಲಾಗುವುದು ಎಂದು ಸೌದಿ ಪಾಸ್‌ಪೋರ್ಟ್ ಪ್ರಾಧಿಕಾರ ಮತ್ತೊಮ್ಮೆ ಎಚ್ಚರಿಸಿದೆ.

ಇಖಾಮಾ ಮುಕ್ತಾಯ ದಿನಾಂಕದ ಮೊದಲು ನವೀಕರಿಸದಿದ್ದರೆ ಮೊದಲ ಬಾರಿಗೆ 500 ರಿಯಾಲ್ ದಂಡ ವಿಧಿಸಲಾಗುತ್ತದೆ. ಪುನರಾವರ್ತಿಸಿದರೆ ದಂಡದ ಮೊತ್ತವು 1000 ರಿಯಾಲ್ ‌ಗೆ ಏರಲಿದೆ ಮತ್ತು ಮೂರನೇ ಅವಧಿ ಮುಗಿಯುವ ಮೊದಲು ಅದನ್ನು ನವೀಕರಿಸದಿದ್ದರೆ, ವಿದೇಶೀಯರನ್ನು ಗಡೀಪಾರು ಮಾಡಲಾಗುತ್ತದೆ ಎಂದು ಪಾಸ್‌ಪೋರ್ಟ್ ಅಥಾರಿಟಿ ಎಚ್ಚರಿಸಿದೆ.

ಆಂತರಿಕ ಸಚಿವಾಲಯದ ಅಬ್ಶೀರ್ ಪೋರ್ಟಲ್ ಮೂಲಕ ಇಖಾಮಾ ಅವಧಿಯನ್ನು ಪರಿಶೀಲಿಸಿಕೊಳ್ಳಬೇಕು. ಕಾನೂನು ಶಿಕ್ಷೆಯನ್ನು ತಪ್ಪಿಸಲು ಕಾಲಕಾಲಕ್ಕೆ ಇಖಾಮಾವನ್ನು ನವೀಕರಿಸಬೇಕೆಂದು ಸೌದಿ ಪಾಸ್‌ಪೋರ್ಟ್ ಪ್ರಾಧಿಕಾರವು ಎಲ್ಲಾ ವಿದೇಶಿ ಕಾರ್ಮಿಕರಿಗೆ ಮಾಹಿತಿ ನೀಡಿದೆ.