ರಿಯಾದ್(ಜನಧ್ವನಿ ವಾರ್ತೆ):ಕರೆನ್ಸಿ ನೋಟುಗಳನ್ನು ಅಜಾಗರೂಕತೆಯಿಂದ ಉಪಯೋಗಿಸುವವರ ವಿರುದ್ದ ಉಗ್ರ ಎಚ್ಚರಿಕೆಯೊಂದಿಗೆ ಸೌದಿ ಸಾರ್ವಜನಿಕ ಪ್ರಾಸಿಕ್ಯೂಶನ್. ಉದ್ದೇಶಪೂರ್ವಕವಾಗಿ ನೋಟುಗಳಲ್ಲಿ ಗೀಚುವ ಮೂಲಕ ಅದಕ್ಕೆ ಕುಂದು ಉಂಟುಮಾಡುವವರಿಗೆ ಪ್ರೋಸಿಕ್ಯೂಷನ್ ಎಚ್ಚರಿಕೆಯನ್ನು ನೀಡಿದೆ.
ನೋಟುಗಳ ಆಕೃತಿಗೆ ದಕ್ಕೆ ಉಂಟಾಗುವಂತಹ ರೀತಿಯಲ್ಲಿ ಉದ್ದೇಶಪೂರ್ವಕವಾಗಿ ವಿಕೃತಗೊಳಿಸುವವರು 5 ವರ್ಷಗಳ ಜೈಲು ಶಿಕ್ಷೆ ಅನುಭವಿಸ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ನೋಟುಗಳನ್ನು ವಿಕೃತಗೊಳಿಸುವುದು, ಹರಿಯುವುದು, ಅದರ ಆಕೃತಿಯನ್ನು ಬದಲಾಯಿಸುವುದು, ಕೆಮಿಕಲ್ ಉಪಯೋಗಿಸಿ ತೊಳೆಯುವುದು, ಯಾವುದಾದರೂ ರೀತಿಯಲ್ಲಿ ನಾಶ ಪಡಿಸುವುದು ಮುಂತಾದವುಗಳು 5 ವರ್ಷಗಳ ಕಾರಾಗೃಹ ಅನುಭವಿಸಬೇಕಾದ ಅಪರಾಧವಾಗಿದೆ. ನೋಟುಗಳನ್ನು ನಾಶ ಪಡಿಸುವವರಿಗೆ ನಖಲಿ ಕರೆನ್ಸಿ ನಿರ್ಮಾಣಕ್ಕೆ ವಿಧಿಸಲಾಗುವ ಅಪರಾಧವನ್ನು ಹೊರಿಸಿ 10,000 ರಿಯಾಲ್ ದಂಡ ಕೂಡಾ ವಿಧಿಸಲಾಗುತ್ತದೆ.















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ನಕಲಿ ದಾಖಲೆ ದೃಢೀಕರಣ ಜಾಲ: ಭಾರತೀಯ ರಾಯಭಾರ ಕಚೇರಿಯಿಂದ ಎಚ್ಚರಿಕೆ
ವಿಮಾನಯಾನ ರದ್ದತಿಯಿಂದ ಅತಂತ್ರರಾದ ಉಮ್ರಾ ಯಾತ್ರಾರ್ಥಿಗಳು- DKSCಯಿಂದ ಮಾನವೀಯ ನೆರವು
ವಲಸಿಗರಿಗೆ ಶುಭ ಸುದ್ದಿ: ಜಿದ್ದಾ–ಕೋಝಿಕ್ಕೋಡ್ ನಡುವೆ ಫ್ಲೈನಾಸ್ ನೇರ ವಿಮಾನ ಸೇವೆ ಆರಂಭ
ರಿಯಾದ್ ವಿಮಾನ ನಿಲ್ದಾಣ ಬಂದ್: ಪರ್ಯಾಯ ಪ್ರಯಾಣ ಮಾರ್ಗದಲ್ಲೂ ಟಿಕೆಟ್ ದರ ಏರಿಕೆ
ಸೌದಿ: ಸಿಲುಕಿರುವ ಯಾತ್ರಿಕರ ವಾಪಸಾತಿಗೆ ರಾಯಭಾರ ಕಚೇರಿ ತೀವ್ರ ಕಾರ್ಯಾಚರಣೆ
ಯುಎಇ : ನಾಲ್ಕು ಪಾಸ್ಪೋರ್ಟ್ ಸೇವಾ ಕೇಂದ್ರಗಳು ಇಂದಿನಿಂದ ಸ್ಥಗಿತ- ರಾಯಭಾರ ಕಚೇರಿ
ಉಮ್ರಾ ಯಾತ್ರಿಕರ ವಾಪಸಾತಿಗೆ ಪರ್ಯಾಯ ವಿಮಾನ ವ್ಯವಸ್ಥೆ ಕಲ್ಪಿಸಬೇಕು- ರಾಯಭಾರ ಕಚೇರಿ
ರಿಯಾದ್, ಜಿದ್ದಾ ವಿಮಾನ ಸೇವೆಗಳು ಅಕ್ಟೋಬರ್ 27ರವರೆಗೆ ಸ್ಥಗಿತ
ಧರ್ಮ ನಿಂದನೆ ದೂರು: ಯುವಕನ ಮರಣದಂಡನೆಯನ್ನು ರದ್ದುಗೊಳಿಸಿದ ಸೌದಿ ಸುಪ್ರೀಂ ಕೋರ್ಟ್
ಸೌದಿ ವಿಮಾನ ಸೇವೆ ಸ್ಥಗಿತ: ವೀಸಾ ಅವಧಿ ಮೀರಿದವರಿಗೆ ದಂಡವಿಲ್ಲದೆ ನಿರ್ಗಮನಕ್ಕೆ ಅವಕಾಶ- ಭಾರತೀಯ ರಾಯಭಾರ ಕಚೇರಿ