ರಿಯಾದ್: ಸಂದರ್ಶನ ವಿಸಾದಲ್ಲಿ ಆಗಮಿಸುವ ವಿದೇಶೀಯರು ತಮ್ಮ ಸ್ವದೇಶದ ಚಾಲನಾ ಪರವಾನಗಿ ಅಥವಾ ಅಂತರ್‌ರಾಷ್ಟ್ರೀಯ ಚಾಲನಾ ಪರವಾನಗಿ ಇದ್ದಲ್ಲಿ ಸೌದಿ ಅರೇಬಿಯಾದಲ್ಲಿ ವಾಹನ ಚಲಾಯಿಸಬಹುದು ಎಂದು ಟ್ರಾಫಿಕ್ ಖಾತೆಯು ತಿಳಿಸಿದೆ. ಆದರೆ, ಅಂತಹ ಪರವಾನಗಿಯು ಕಾಲಾವಧಿ ಹೊಂದಿರಬೇಕು. ಸೌದಿಗೆ ಬಂದು ಒಂದು ವರ್ಷದ ವರೆಗೆ ಈ ರೀತಿ ವಾಹನ ಚಲಾಯಿಸಬಹುದಾಗಿದೆ.
ಟನಲ್‌ಗಳಲ್ಲಿ ಲೈಟ್ ಉಪಯೋಗಿಸದೆ ವಾಹನ ಚಲಾಯಿಸುವವರಿಗೆ 500 ರಿಂದ 900 ರಿಯಾಲ್ ದಂಡ ವಿಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದು, ಚಾಲಕ ಮತ್ತು ಇತರರ ಸುರಕ್ಷೆ ಖಚಿತ ಪಡಿಸಿಕೊಳ್ಳುವ ಸಲುವಾಗಿ ಈ ನಡೆ ಎಂದು ತಿಳಿಸಲಾಗಿದೆ. ಲೈಟ್ ಇಲ್ಲದೆ ಟನಲ್‌ಗಳಲ್ಲಿ ವಾಹನ ಚಲಾಯಿಸುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.