janadhvani

Kannada Online News Paper

ಬಹ್ರೈನ್‌: ಪ್ರಿ ಎಂಟ್ರಿ ವಿಸಾ ದರದಲ್ಲಿ ಭಾರೀ ಇಳಿಕೆ

ಮನಾಮ: ಬಹ್ರೈನ್‌ನಲ್ಲಿ ಪ್ರಿ ಎಂಟ್ರಿ ವಿಸಾದ ದರದಲ್ಲಿ ಬಾರೀ ರಿಯಾಯಿತಿ ಘೋಷಿಸಲಾಗಿದೆ. ದೇಶಕ್ಕೆ ಬರುವ ಸಂದರ್ಶಕರಿಗೆ ಯಾತ್ರಾ ಕ್ರಮಗಳು ಸುಗಮಗೊಳಿಸುವ ಕ್ರಮದ ಭಾಗವಾಗಿ ಈ ತಿರ್ಮಾನ ಕೈಗೊಳ್ಳಲಾಗಿದ್ದು, ಹೊಸ ವಿಸಾ ದರವು 2020ರಿಂದ ಜಾರಿಗೆ ಬರಲಿದೆ.

ಒಂದು ವರ್ಷ ಕಾಲಾವಧಿಯ ಎಂಟ್ರಿ ವಿಸಾಗೆ ಪ್ರಸಕ್ತ 80 ದಿನಾರ್ ಪಾವತಿಸಬೇಕಾಗಿತ್ತು. ಆ ದರವನ್ನು 40 ದಿನಾರ್‌ಗೆ ಇಳಿಸಲಾಗಿದೆ. ಐದು ವರ್ಷ ಕಾಲಾವಧಿಯ ವಿಸಾಗಳಿಗೂ ಬಾರೀ ರಿಯಾಯಿತಿ ಘೋಷಿಸಲಾಗಿದ್ದು, 170 ದೀನಾರ್ ದರವನ್ನು 60 ದಿನಾರ್‌ಗೆ ಇಳಿಸಲಾಗಿದೆ. ವಿದೇಶೀ ವಿದ್ಯಾರ್ಥಿಗಳಿಗೆ ಒಂದು ವರ್ಷದ ಬದಲಾಗಿ ಐದು ವರ್ಷ ಕಾಲಾವಧಿಯ ವಿಸಾ ಅನುಸರಿಸಲಾಗುತ್ತದೆ.
ರಾಜತಾಂತ್ರಿಕ ವಿಸಾಗಳ ಕಾಲಾವಧಿಯನ್ನು ಮೂರರಿಂದ ಐದಕ್ಕೆ ಏರಿಸಲಾಗಿದೆ. ರಾಜ ಸಲ್ಮಾನ್ ಬಿನ್ ಹಮದ್ ಅಲ್ ಖಲೀಫಾ ಸಾರಥ್ಯದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎನ್ನಲಾಗಿದೆ.