ರಿಯಾದ್: ಸೌದಿ ಅರೇಬಿಯಾಗೆ ಬಹು ಪ್ರವೇಶ ವೀಸಾ ಆದ ಮಲ್ಟಿಪಲ್ ಎಂಟ್ರಿ ವಿಸಾದ ನವೀಕರಣವನ್ನು ಅತ್ಯಂತ ಸುಲಭಗೊಳಿಸಲಾಗಿದೆ. ಒಂದು ವರ್ಷದ ವೀಸಾದಲ್ಲಿರುವ ಅನಿವಾಸಿ ಕುಟುಂಬಗಳು ಅಂತಿಮ ನವೀಕರಣಕ್ಕಾಗಿ ದೇಶವನ್ನು ತೊರೆಯಬೇಕಾಗಿಲ್ಲ. ವೀಸಾವನ್ನು ದೇಶದೊಳಗಿನಿಂದ ನವೀಕರಿಸುವಂತೆ ಕಾರ್ಯವಿಧಾನವನ್ನು ಸರಳೀಕರಿಸಲಾಗಿದೆ.
ಒಂಬತ್ತರಿಂದ 12 ತಿಂಗಳ ಅವಧಿಗೆ ಆನ್ಲೈನ್ನಲ್ಲಿ ವೀಸಾ ನವೀಕರಣಗಳನ್ನು ಮಾಡಬಹುದಾಗಿದೆ. ಮೊದಲ ಮೂರು ತಿಂಗಳ ನಂತರ, ಇದನ್ನು ಸೌದಿಯಿಂದ ಆರು ತಿಂಗಳವರೆಗೆ ಆನ್ಲೈನ್ನಲ್ಲಿ ನವೀಕರಿಸಬಹುದು. ಈ ಹಿಂದೆ ಆರು ತಿಂಗಳ ನಂತರ, ಒಂಬತ್ತು ತಿಂಗಳವರೆಗೆ ನವೀಕರಣಕ್ಕಾಗಿ ದೇಶವನ್ನು ತೊರೆಯಬೇಕಾಗಿತ್ತು.
ವೀಸಾ ನವೀಕರಣ ಸೇವೆ ಅವಧಿ ಮುಗಿಯುವ ಏಳು ದಿನಗಳ ಮೊದಲು ಆನ್ಲೈನ್ನಲ್ಲಿ ಸೇವೆ ಲಭ್ಯವಿರುತ್ತದೆ. ಆರೋಗ್ಯ ವಿಮೆ ಅವಧಿ ಮುಗಿದಿದ್ದರೆ, ನವೀಕರಣದ ನಂತರ ವೀಸಾ ನವೀಕರಣವನ್ನು ಮುಂದುವರಿಸಬೇಕು.
ವೀಸಾ ಮತ್ತು ವಿಮಾ ನವೀಕರಣ ಶುಲ್ಕವನ್ನು ಆನ್ಲೈನ್ನಲ್ಲಿ ಪಾವತಿಸಬಹುದು. ಒಂಬತ್ತು ತಿಂಗಳ ನಂತರ,12 ತಿಂಗಳವರೆಗೆ ಆನ್ಲೈನ್ನಲ್ಲಿ ನವೀಕರಿಸಬಹುದು. ಈ ಸೇವೆ ಲಭ್ಯವಿರುವ ಹೊರತಾಗಿಯೂ, ಅನೇಕ ಕುಟುಂಬಗಳು ತಮ್ಮ ವೀಸಾವನ್ನು ನವೀಕರಿಸಲು ಬಹ್ರೈನ್ ಮತ್ತು ಯುಎಇಗೆ ತೆರಳಿ ಬಳಿಕ ನವೀಕರಿಸಿ ವಾಪಾಸಾಗುತ್ತಿದ್ದಾರೆ ಎನ್ನಲಾಗಿದೆ.















ಇನ್ನಷ್ಟು ಸುದ್ದಿಗಳು
ದುಬೈ-ಇಸ್ರೇಲ್ ವಿಮಾನದಲ್ಲಿ ಪೈಲಟ್ಗಳ ನಡುವೆ ಸಂಘರ್ಷ : ಸೌದಿಯಲ್ಲಿ ತುರ್ತು ಭೂಸ್ಪರ್ಶ
ಅಣು-ವಿಕಿರಣ ಸೋರಿಕೆಯಾದರೆ ಏನು ಮಾಡಬೇಕು?; ಜಾಗರೂಕತೆಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ CDAA
ಒಮಾನ್:ಕಾರ್ಮಿಕ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ- ಫೀಲ್ಡ್ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವಾಲಯ
ರಸ್ತೆ ಬದಿಯ ಪೈಪ್ ಸರಿಪಡಿಸಿದ ಭಾರತೀಯ ಡೆಲಿವರಿ ಯುವಕ – ದುಬೈ ಸರ್ಕಾರದ ಗೌರವ
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ