janadhvani

Kannada Online News Paper

ಪ್ಯಾನ್-ಆಧಾರ್ ಜೋಡಣೆಯ ಗಡುವು ವಿಸ್ತರಣೆ

ನವದೆಹಲಿ: ಇದೇ ತಿಂಗಳ 31ಕ್ಕೆ (ನಾಳೆ) ಕೊನೆಗೊಳ್ಳಲಿದ್ದ , ಆಧಾರ್‌ಗೆ ಶಾಶ್ವತ ಖಾತೆ ಸಂಖ್ಯೆ (ಪ್ಯಾನ್‌) ಜೋಡಿಸುವ ಗಡುವನ್ನು 2020ರ ಮಾರ್ಚ್‌ ಅಂತ್ಯದವರೆಗೆ ವಿಸ್ತರಿಸಲಾಗಿದೆ.ಗಡುವು ವಿಸ್ತರಣೆ ಸಂಬಂಧ ಅಧಿಸೂಚನೆ ಹೊರಡಿಸಲಾಗಿದೆ ಎಂದು ನೇರ ತೆರಿಗೆ ಕೇಂದ್ರೀಯ ಮಂಡಳಿಯು (ಸಿಬಿಡಿಟಿ) ತಿಳಿಸಿದೆ.

ಯಾವುದೇ ಅಡೆತಡೆ ಇಲ್ಲದೆ ಆದಾಯ ತೆರಿಗೆಯ ಸೇವೆಗಳ ಪ್ರಯೋಜನಗಳನ್ನು ಪಡೆದುಕೊಳ್ಳಲು ಪ್ಯಾನ್‌ಗೆ ಆಧಾರ್‌ ಜೋಡಿಸುವಂತೆ ತಿಳಿಸಿದೆ. ಈ ಪ್ರಕ್ರಿಯೆಗೆ ಇದುವರೆಗೆ ಒಟ್ಟಾರೆ ಎಂಟು ಬಾರಿ ಗಡುವು ವಿಸ್ತರಣೆ ಮಾಡಲಾಗಿದೆ. ಆದಾಯ ತೆರಿಗೆ ಪಾವತಿದಾರರು ಪ್ಯಾನ್‌ಗೆ ಆಧಾರ್‌ ಜೋಡಿಸುವುದು ಆದಾಯ ತೆರಿಗೆ ಕಾಯ್ದೆ ಪ್ರಕಾರ ಕಡ್ಡಾಯವಾಗಿದೆ.

ಇದನ್ನೂ ಓದಿ…

ಕೇಂದ್ರ ಸರ್ಕಾರದ ಆಧಾರ್‌ ಕಾರ್ಯಕ್ರಮ ಸಾಂವಿಧಾನ ಸಿಂಧುತ್ವ ಹೊಂದಿರುವುದಾಗಿ ಕಳೆದ ವರ್ಷ ಸುಪ್ರೀಂ ಕೋರ್ಟ್ ತೀರ್ಪು ನೀಡಿತು. ಪ್ಯಾನ್‌ ಪಡೆಯಲು ಹಾಗೂ ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆಯಲ್ಲಿ ಆಧಾರ್‌ ಕಡ್ಡಾಯ ಮುಂದುವರಿಯಲಿದೆ ಎಂದು ಕೋರ್ಟ್‌ ತಿಳಿಸಿತ್ತು.

ಆದಾಯ ತೆರಿಗೆ ಕಾಯ್ಡೆ ಸೆಕ್ಷನ್‌ 139 ಎಎ(2)ರ ಪ್ರಕಾರ ಪ್ಯಾನ್‌ ಹೊಂದಿರುವ ವ್ಯಕ್ತಿಯು ಆಧಾರ್‌ ಪಡೆಯಲು ಅರ್ಹರಾಗಿರುತ್ತಾರೆ ಹಾಗೂ ತೆರಿಗೆ ಇಲಾಖೆಗೆ ಆಧಾರ್‌ ಸಂಖ್ಯೆ ನೀಡುವುದು ಕಡ್ಡಾಯವಾಗಿದೆ.