janadhvani

Kannada Online News Paper

ಕೆಸಿಎಫ್ ಮಕ್ಕಾ: ಆತ್ಮೀಯ ಮಜ್ಲಿಸ್ ಹಾಗೂ ಡಾ.ಶೇಖ್ ಬಾವಾ ಅವರಿಗೆ ಸನ್ಮಾನ

ಮಕ್ಕತುಲ್ ಮುಕರ್ರಮಃ: ಕರ್ನಾಟಕ ಕಲ್ಚರಲ್ ಫೌಂಡೇಶನ್ KCF ಮಕ್ಕತುಲ್ ಮುಕರ್ರಮಃ ಸೆಕ್ಟರ್ ವತಿಯಿಂದ ಆತ್ಮೀಯ ಮಜ್ಲಿಸ್ ಹಾಗೂ ಸನ್ಮಾನ ಸಮಾರಂಭ ಸೆಕ್ಟರ್ ಅಧ್ಯಕ್ಷರು ಉಮರುಲ್ ಫಾರೂಕ್ ಹನೀಫಿ ಬೋವು ರವರ ಅಧ್ಯಕ್ಷತೆಯಲ್ಲಿ ಮೂಸಾ ಹಾಜಿ ನಿವಾಸ ಜಬಲನ್ನೂರಿನಲ್ಲಿ ಜರುಗಿತು.

ಕಾರ್ಯಕ್ರಮವನ್ನು ದಾರುಲ್ ಇರ್ಷಾದ್ ಆರ್ಗನೈಝರ್ ಉಮರ್ ಮದನಿ ಖಾಮಿಲ್ ಸಖಾಫಿ ಪರಪ್ಪು ಉದ್ಘಾಟಿಸಿದರು.ಈ ಸಂದರ್ಭ ಕೆಸಿಎಫ್ ಅಂತಾರಾಷ್ಟ್ರೀಯ (INC) ಸಮಿತಿ ಇದರ ಅಧ್ಯಕ್ಷರಾದ ಡಾ/ ಶೇಖ್ ಬಾವ ಮಂಗಳೂರು ರವರನ್ನು ಸೆಕ್ಟರ್ ವತಿಯಿಂದ ಶಾಲು ಹೊದಿಸಿ ನೆನಪಿನ ಕಾಣಿಕೆ ಕೊಟ್ಟು ಗೌರವಿಸಲಾಯಿತು.

ನಂತರ ಕಾರ್ಯಕರ್ತರನ್ನು ಉದ್ದೇಶಿಸಿ ಡಾ/ಶೇಖ್ ಬಾವ ಕೆಸಿಎಫ್ ಮಾಡುತ್ತಿರುವ ಕಾರುಣ್ಯ ಕಾರ್ಯಾಚರಣೆ, ಇಹ್ಸಾನ್, ಅಡ್ಯಾರ್ ಕಣ್ಣೂರಿನಲ್ಲಿ ನಿರ್ಮಿಸುತ್ತಿರುವ ಕಲ್ಚರಲ್ ಸೆಂಟರ್ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಮಾತಾಡಿ ಕೆಸಿಎಫ್ ಸೌದಿ ಅರೇಬಿಯಾ ಹಜ್ಜ್ ಸಮಯದಲ್ಲಿ ಮಾಡುತ್ತಿರುವ HVC ಕಾರ್ಯಾಚರಣೆಯನ್ನು ಹೇಳಿ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮವನ್ನು ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಕಕ್ಕಿಂಜೆ ಸ್ವಾಗತಿಸಿ, ಶಿಕ್ಷಣ ಇಲಾಖೆ ಕಾರ್ಯದರ್ಶಿ ಕಲಂದರ್ ಶಾಫಿ ಅಸೈಗೋಳಿ ಕೃತಜ್ಞತೆ ಸಲ್ಲಿಸಿದರು.