ರಿಯಾದ್: ಗೋ ಏರ್ ವಿಮಾನ ಕಂಪೆನಿಯು ಸೌದಿಯಿಂದ ಕೇರಳಕ್ಕೆ ಹೆಚ್ಚಿನ ಸೇವೆಗಳನ್ನು ಪ್ರಾರಂಭಿಸಲು ಯೋಜನೆ. ದಮ್ಮಾಮ್ ಜೊತೆಗೆ ರಿಯಾದ್ ಮತ್ತು ಜಿದ್ದಾದಿಂದ ಕಣ್ಣೂರಿಗೆ ವಿಮಾನವನ್ನು ಪ್ರಾರಂಭಿಸಲು ಯೋಜಿಸುತ್ತಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಗೋ ಏರ್ ಸೌದಿ ಅರೇಬಿಯಾದ ಪ್ರಮುಖ ಉದ್ಯಮ ಗ್ರೂಪ್ ಅಲ್ ಮಜ್ದೂಯಿನ ಸಹಭಾಗಿತ್ವದಲ್ಲಿ ತನ್ನ ಸೇವೆಗಳನ್ನು ಪ್ರಾರಂಭಿಸಲಿದೆ.
ಗೋ ಏರ್ ದಮಾಂನಿಂದ ಕಣ್ಣೂರಿಗೆ ಮೊದಲ ವಿಮಾನಯಾನ ಕುರಿತು ನಡೆದ ಕಾರ್ಯಕ್ರಮದಲ್ಲಿ ಗೋ ಏರ್ ಇಂಟರ್ ನ್ಯಾಷನಲ್ ಆಪರೇಶನ್ಸ್ ಉಪಾಧ್ಯಕ್ಷ ಅರ್ಜುನ್ ದಾಸ್ ಗುಪ್ತಾ ಮಾತನಾಡಿ, ದಮ್ಮಾಮ್ ಸಹಿತ, ಸೌದಿ ಅರೇಬಿಯಾದ ಇತರ ವಿಮಾನ ನಿಲ್ದಾಣಗಳಿಂದ ಮತ್ತು ಕೇರಳದ ಇತರ ವಿಮಾನ ನಿಲ್ದಾಣಗಳಿಗೂ ಸಹ ಸೇವೆಯನ್ನು ಪ್ರಾರಂಭಿಸಲಿವೆ ಎಂದು ಹೇಳಿದರು.
ಸಾಮಾನ್ಯ ವಲಸಿಗರಿಗೆ ಆರಾಮದಾಯಕ ಸವಾರಿ ಒದಗಿಸುವ ಉದ್ದೇಶವನ್ನು ಕಂಪನಿ ಹೊಂದಿದೆ ಎಂದು ಮಜ್ದೂಯಿ ಗ್ರೂಪ್‌ನ ಉಪಾಧ್ಯಕ್ಷ ಯೂಸುಫ್ ಅಲ್-ಮಜ್ದೂಯಿ ಹೇಳಿದರು. ಕಾರ್ಯಕ್ರಮದಲ್ಲಿ ಉಭಯ ಕಂಪನಿಗಳ ನಡುವಿನ ಒಪ್ಪಂದ ಮತ್ತು ಪರಸ್ಪರ ಕರಾರು ಪತ್ರಗಳ ಹಸ್ತಾಂತರ ನಡೆಯಿತು. ಟಿಕೆಟ್ ಬುಕಿಂಗ್ ಈಗ ಅರ್ಜಾ ಟ್ರಾವೆಲ್ಸ್ ಎಂಬ ಗುಂಪಿನ ಮೂಲಕ ಲಭ್ಯವಿದೆ. ಗೋ ಏರ್ ಪಿಆರ್ ವಿಭಾಗದ ಉಪಾಧ್ಯಕ್ಷ ಭಗುಲ್ ಗಾಲಾ ಮತ್ತು ಜನರಲ್ ಮ್ಯಾನೇಜರ್ ಜಲೀಲ್ ಖಾಲಿದ್ ಉಪಸ್ಥಿತರಿದ್ದರು.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ