janadhvani

Kannada Online News Paper

ಕೆ ಸಿ ಎಫ್ ಸಿಟಿ ಸೆಕ್ಟರ್ ಜುಬೈಲ್ ವತಿಯಿಂದ ಪ್ರತಿಭೋತ್ಸವ

KCF ದಮ್ಮಾಮ್ ಝೋನಲ್ ಅಧೀನದಲ್ಲಿ ರುವ KCF ಸಿಟಿ‌ ಸೆಕ್ಟರ್ ‌ಜುಬೈಲ್ ಇದರ ಪ್ರತಿಭೋ\nತ್ಸವ ದಿನಾಂಕ 13-12-2019 ಶುಕ್ರವಾರ ದಂದು ಜುಬೈಲ್ ಇಸ್ತಿನಾದ್ ಇಸ್ತಿರಾದಲ್ಲಿ ನಡೆಯಿತು.ಮಧ್ಯಾಹ್ನ ಸುಮಾರು ಒಂದು ‌ಗಂಟೆಗೆ ಕಾರ್ಯಕ್ರಮ ಆರಂಭಗೊಂಡಿತು. ಕಾರ್ಯಕ್ರಮ ಮೊದಲ ಭಾಗವಾಗಿ‌ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ದುಆವನ್ನು ಹಾಗೂ ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಸೆಕ್ಟರ್ ಅಧ್ಯಕ್ಷರಾದ ಪಿ.ಎಚ್ ಹಮೀದ್ ಉಸ್ತಾದರು ನಡೆಸಿದರು.ಸ್ವಾಗತ ವನ್ನು ಕಾರ್ಯದರ್ಶಿ ಝಿಯಾದ್ ಬೈರಿಕಟ್ಟೆ
ಹಾಗೂ ಕಾರ್ಯಕ್ರಮ ದ ಉದ್ಘಾಟನೆಯನ್ನು ಅಝೀಝ್ ಸ ಅದಿ ನಡೆಸಿದರು. ಸೆಕ್ಟರ್ ನಾಯಕಾರಾದ ಹನೀಫ್ ಸ ಅದಿ ಕಾರ್ಯಕ್ರಮ ದ ಕುರಿತಾಗಿ ಮಾತನಾಡಿದರು.ವೇದಿಕೆಯಲ್ಲಿ ಝೋನಲ್ ನಾಯಕರಾದ ನಿಝಾರ್ ಗೂಡಿನಬಳಿ, ಸಮದ್ ವಳವೂರು ಉಪಸ್ಥಿತ ರಿದ್ದರು.

ನಂತರ ಸೆಕ್ಟರ್ ಅಧೀನದಲ್ಲಿರುವ 4 ಯುನಿಟ್ ಗಳಾದ ಕೊನೈನಿ, ತಮೀಮಿ,ಅಬೂಹಾದ್ರಿಯ, ಸೌದಿ ಏರ್ಲೈನ್ಸ್ ಯುನಿಟ್ ಗಳ ಸುಮಾರು 55 ರಷ್ಟು ಸ್ಪರ್ಧಾರ್ಥಿಗಳ ವಿವಿಧ ಸ್ಪರ್ಧೆಗಳು ನಡೆಯಿತು.
ಖಿರಾಅತ್, ಹಾಡುಗಳು,ಭಾಷಣಗಳು,ಕ್ವಿಝ್,
ಚರ್ಚಾ ಸ್ಪರ್ಧೆಗಳು ,ಪ್ರಭಂದ ಮೊದಲಾದ ಹಲವು ಸ್ಪರ್ಧೆಗಳು ನಡೆಯಿತು.ಕೊನೆಯಲ್ಲಿ ಚಾಂಪಿಯನ್ ಆಗಿ‌‌ ಕೊನೈನಿ‌ ಯುನಿಟ್ ರನ್ನರ್ ಅಪ್ ಆಗಿ‌ ಸೌದಿ‌ ಏರ್ಲೈನ್ಸ್ ಆಯ್ಕೆ ಆಯಿತು. ವೈಯಕ್ತಿಕ ಚಾಂಪಿಯನ್ಬರಾಗಿ ಶರ್ವಾನ್ ಕಾಟಿಪಳ್ಳ ರವರು ಆಯ್ಕೆಯಾದರು.

ಕಾರ್ಯಕ್ರಮ ದ‌ ಕೊನೆಯ ಭಾಗವಾಗಿ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾಗಿ ಕೆ ಸಿ ಎಫ್ ಐ ಎನ್ ಸಿ ಪ್ರಧಾನ ಕಾರ್ಯದರ್ಶಿ ಖಮರುದ್ದೀನ್ ಗೂಡಿನಬಳಿ, ದಮ್ಮಾಮ್ ಝೋನಲ್ ಅಧ್ಯಕ್ಷರಾದ ರಶೀದ್ ಸಖಾಫಿ, ಸಮೀವುಲ್ಲಾ ಗೂಡಿನಬಳಿ ರವರು ಆಗಮಿಸಿದರು.ಸಿಟಿ ಸೆಕ್ಟರ್ ವತಿಯಿಂದ INC ಪ್ರಧಾನ ಕಾರ್ಯದರ್ಶಿ ಖಮರುದ್ದೀನ್ ಗೂಡಿನಬಳಿ ರವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮ ದಲ್ಲಿ ತೀರ್ಪುಗಾರರಾಗಿ ದಮ್ಮಾಮ್ ಝೋನಲ್ ನಾಯಕರು ಸಹಕರಿಸಿದರು.

ಕಾರ್ಯಕ್ರಮದ ಜುಬೈಲ್ ಎರಡನೆಯ ಸೆಕ್ಟರ್ ಶೋಲ ಸೆಕ್ಟರ್ ‌ನಾಯಕರು ಭಾಗವಹಿಸಿದರು. ನಿಝಾರ್ ಗೂಡಿನಬಳಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಝಿಯಾದ ಬೈರಿಕಟ್ಟೆ ಧನ್ಯವಾದಗೈದರು.