ಬಾಗ್ದಾದ್, ನ.30: ದೇಶದಲ್ಲಿ ಸರ್ಕಾರಿ ವಿರೋಧಿ ಪ್ರತಿಭಟನೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಇರಾಕ್ ಪ್ರಧಾನಿ ಆದಿಲ್ ಅಬ್ದುಲ್ ಮಹ್ದಿ ರಾಜೀನಾಮೆ ನೀಡುವ ನಿರ್ಧಾರ ಕೈಗೊಂಡಿದ್ದಾಗಿ ಘೋಷಿಸಿದ್ದಾರೆ.
“ಸರ್ಕಾರದ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಯುವುದಾಗಿ ಸಂಸತ್‌ನ ಪ್ರತಿನಿಧಿ ಸಭೆಗೆ ಅಧಿಕೃತ ಪತ್ರವನ್ನು ಸಲ್ಲಿಸುತ್ತೇನೆ” ಎಂದು ಪ್ರಧಾನಿ ಅಬ್ದುಲ್ ಮಹ್ದಿ ಶುಕ್ರವಾರದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ದೇಶದ ಉನ್ನತ ಶಿಯಾ ಧರ್ಮ ಗುರುವಿನ ಇಚ್ಛೆಯಂತೆ ನಾನು ಅಧಿಕಾರದಿಂದ ಕೆಳಗಿಳಿಯುತ್ತೇನೆ ಎಂದು ಆದಿಲ್ ಅಬ್ದುಲ್ ಮಹದಿ ಶುಕ್ರವಾರ ಘೋಷಿಸಿದ್ದಾರೆ.
ಸುಮಾರು ಎರಡು ತಿಂಗಳುಗಳ ಸರಕಾರ ವಿರೋಧಿ ಪ್ರತಿಭಟನೆಗಳ ಬಳಿಕ ಅವರು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.ಪ್ರಧಾನಿಯ ಲಿಖಿತ ಹೇಳಿಕೆಯನ್ನು ರಾಜಧಾನಿ ಬಗ್ದಾದ್‌ನ ತಹ್ರೀರ್ ಚೌಕದಲ್ಲಿ ನೆರೆದ ಪ್ರತಿಭಟನಕಾರರು ಹರ್ಷೋದ್ಗಾರಗಳಿಂದ ಸ್ವಾಗತಿಸಿದರು. ಪ್ರತಿಭಟನೆಗಳಲ್ಲಿ ಈವರೆಗೆ 400ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಇರಾಕ್ನಲ್ಲಿ ಸರ್ಕಾರ ವಜಾಗೊಳಿಸಿ, ಆರ್ಥಿಕ ಬಿಕ್ಕಟ್ಟು ಕೊನೆಗೊಳಿಸಬೇಕೆಂದು ಆಗ್ರಹಿಸಿ, ಕಳೆದ ಅಕ್ಟೋಬರ್ ನಲ್ಲಿ ಆರಂಭವಾದ ಪ್ರತಿಘಟನೆ ಉಲ್ಬಣಗೊಳ್ಳುತ್ತಿದೆ. ಸರ್ಕಾರ ವಜಾಗೊಳಿಸಲು ಮತ್ತು ಆರ್ಥಿಕ ಬಿಕ್ಕಟ್ಟನ್ನು ಕೊನೆಗೊಳಿಸಲು ಜನರು ಒತ್ತಾಯಿಸುತ್ತಿದ್ದಾರೆ. ಪ್ರತಿಭಟನಾಕಾರರ ವಿರುದ್ಧ ನವೆಂಬರ್ನಲ್ಲಿ, ಅತಿಯಾದ ಬಲ ಪ್ರಯೋಗ ಮಾಡಿದ ಹಿನ್ನೆಲೆಯಲ್ಲಿ 66 ಇರಾಕಿ ಅಧಿಕಾರಿಗಳನ್ನು ವಿಚಾರಣೆಗೆ ಗುರಿಪಡಿಸಲಾಗಿತ್ತು.















ಇನ್ನಷ್ಟು ಸುದ್ದಿಗಳು
ಇರಾನ್ ಮೇಲೆ ಮತ್ತೆ ಯುಎಸ್ ದಾಳಿ; ಬಂದರ್ ಅಬ್ಬಾಸ್ ಸೇರಿದಂತೆ ವಿವಿಧ ಕೇಂದ್ರಗಳಲ್ಲಿ ಬಾಂಬ್ ದಾಳಿ
ಇರಾಕ್ನಲ್ಲೂ ಖಾಮ್ನಈ ಅಂತ್ಯಕ್ರಿಯೆ ವಿಧಿವಿಧಾನಗಳು; ನಜಫ್ನತ್ತ ಹರಿದುಬಂದ ಜನಸಾಗರ
ವಿಕಾಸದ ಕೂಗಿನೊಂದಿಗೆ ಇತ್ತಿಹಾದ್ ರೈಲು; ಟಿಕೆಟ್ ದರ ಮತ್ತು ರಿಯಾಯಿತಿಗಳ ಘೋಷಣೆ
ಯುಎಇ: ಮುಂದುವರಿದ ಭಾರತೀಯ ಪಾಸ್ಪೋರ್ಟ್ ಸೇವಾ ಬಿಕ್ಕಟ್ಟು
ಇತ್ತಿಹಾದ್ ರೈಲಿಗೆ ಐತಿಹಾಸಿಕ ಕ್ಷಣ; ಭವ್ಯ ಆರಂಭಕ್ಕೆ ಯುಎಇನಲ್ಲಿ ಅಭೂತಪೂರ್ವ ಜನಸ್ಪಂದನ
ವಲಸಿಗರಿಗೆ ಶುಭ ಸುದ್ದಿ: ಸೌದಿ ವರ್ಕ್ ಪರ್ಮಿಟ್ ಸ್ಥಿತಿ ಸರಿಪಡಿಸಿಕೊಳ್ಳುವ ಗಡುವು ವಿಸ್ತರಣೆ
‘ಅವನು ಬದುಕಿದ್ದರೆ ನಾನು ಕೂಡ ಬದುಕುತ್ತೇನೆ’; ಭೂಕಂಪದ ಅವಶೇಷಗಳ ನಡುವೆ ಮರಣವನ್ನೇ ಗೆದ್ದು ಬಂದ ತಾಯಿ ಮತ್ತು 18 ದಿನದ ಮಗು!
ದಾಳಿಗಳು ಮುಂದುವರಿದರೆ ‘ನರಕಸದೃಶ’ ತಿರುಗೇಟು ನೀಡಲಾಗುವುದು- ಇರಾನ್ ಎಚ್ಚರಿಕೆ
ಮತ್ತೆ ಯುದ್ಧವೇ? – ಎರಡನೇ ದಿನವೂ ಇರಾನ್ ಮೇಲೆ ಯುಎಸ್ ದಾಳಿ
ಬಹ್ರೇನ್ ಮೇಲೆ ಇರಾನ್ ಡ್ರೋನ್ ದಾಳಿ: ಸೌದಿ ಅರೇಬಿಯಾ ತೀವ್ರ ಖಂಡನೆ- ಪೂರ್ಣ ಬೆಂಬಲ ಘೋಷಣೆ