ಅಬುಧಾಬಿ: ಹೊಸದಾಗಿ ಪ್ರಾರಂಭಗೊಳ್ಳಲಿರುವ ಬಜೆಟ್ ವಿಮಾನ ಕಂಪೆನಿಯಾದ ಏರ್ ಅರೇಬಿಯಾ ಅಬುಧಾಬಿಯು ಮುಖ್ಯವಾಗಿ ಭಾರತೀಯ ವಲಯವನ್ನು ಗುರಿಯಾಗಿಸಿಕೊಂಡಿದೆ. ಈ ಮೂಲಕ ಅಬುಧಾಬಿಯ ಭಾರತೀಯರಿಗೆ ಅಗ್ಗದ ದರದಲ್ಲಿ ಭಾರತಕ್ಕೆ ಪ್ರಯಾಣಿಸಲು ಸಾಧ್ಯವಾಗಲಿದೆ. ಈ ಸೇವೆ ಶೀಘ್ರದಲ್ಲೇ ಆರಂಭಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ.
ಅಬುಧಾಬಿಯ ವಿಮಾನ ಕಂಪೆನಿಯಾದ ಇತ್ತಿಹಾದ್ ಏರ್ವೇಸ್ ಮತ್ತು ಶಾರ್ಜಾದ ಬಜೆಟ್ ವಿಮಾನಯಾನ ಕಂಪೆನಿ ಏರ್ ಅರೇಬಿಯಾ ಜಂಟಿಯಾಗಿ ಹೊಸ ಉದ್ಯಮವನ್ನು ರೂಪಿಸಿವೆ. ಇದು ಅಬುಧಾಬಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೆಲೆಗೊಳ್ಳಲಿರುವ ಅಬುಧಾಬಿಯ ಮೊದಲ ಕಡಿಮೆ-ವೆಚ್ಚದ ವಿಮಾನ ಸೇವೆಯಾಗಲಿದೆ.
ಜೆಟ್ ಏರ್ವೇಸ್ ಈಗಾಗಲೇ ಭಾರತದಿಂದ ಅಬುಧಾಬಿಗೆ ಹಲವಾರು ಸೇವೆಗಳನ್ನು ನಿರ್ವಹಿಸಿದೆ. ಆದರೆ ಕಂಪನಿಯು ವಿಫಲವಾದಂತೆ ಕೊಲ್ಲಿ ಪ್ರಯಾಣಿಕರು ಸಂಕಷ್ಟಕ್ಕೀಡಾಗಿದ್ದರು. ಜನರು ಹೆಚ್ಚಿನ ಬೆಲೆಗೆ ಟಿಕೆಟ್ ಖರೀದಿಸಿ ಊರಿಗೆ ಮರಳಬೇಕಾದ ಪರಿಸ್ಥಿತಿ ಈ ಮೂಲಕ ಸೃಷ್ಟಿಯಾದವು. ಏರ್ ಅರೇಬಿಯಾ ಅಬುಧಾಬಿಯ ಸಾಕ್ಷಾತ್ಕಾರದೊಂದಿಗೆ, ಭಾರತೀಯ ವಲಯದಲ್ಲಿ ಹೆಚ್ಚಿನ ವಿಮಾನಗಳು ಹಾರಾಟ ನಡೆಸಲಿವೆ. ಭಾರತದ ಹಲವು ನಗರಗಳು ಸೇರಿದಂತೆ ಪ್ರಮುಖ ಕೇಂದ್ರಗಳಿಗೆ ಸೇವೆಗಳನ್ನು ಒದಗಿಸುವ ನಿರೀಕ್ಷೆಯಿದೆ.
ಅಬುಧಾಬಿಯ ಮೊದಲ ಕಡಿಮೆ ವೆಚ್ಚದ ಹಾರಾಟವು ಭಾರತೀಯ ಪ್ರಯಾಣಿಕರಿಗೆ ಮಾತ್ರವಲ್ಲದೆ ಇತರ ಅನಿವಾಸಿಗರಿಗೂ ಪ್ರಯೋಜನವನ್ನು ನೀಡಲಿದೆ. ಅಬುಧಾಬಿಗೆ ಭೇಟಿ ನೀಡುವವರಲ್ಲಿ ಹೆಚ್ಚಿನವರು ಭಾರತೀಯ ವಲಯದವರಾಗಿದ್ದಾರೆ ಎನ್ನಲಾಗಿದೆ.















ಇನ್ನಷ್ಟು ಸುದ್ದಿಗಳು
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ