ಜಿದ್ದಾ: ಕೋಝಿಕೋಡ್ನಿಂದ ಏರ್ ಇಂಡಿಯಾ ವಿಮಾನ ಸೇವೆಗಳು ಈ ತಿಂಗಳು ಪುನರಾರಂಭಗೊಳ್ಳಲಿವೆ ಎನ್ನಲಾಗಿದೆ. ಆರಂಭದಲ್ಲಿ, ವಾರಕ್ಕೆ ಎರಡು ಸೇವೆಗಳು ಇರಲಿದ್ದು, ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಹೊರಡಲಿದೆ.
ಹಜ್ ನಂತರ ಕೋಝಿಕೋಡ್-ಜಿದ್ದಾ ಸೇವೆ ಪುನರಾರಂಭಗೊಳ್ಳಲಿದೆ ಎಂದು ಏರ್ ಇಂಡಿಯಾ ಈ ಹಿಂದೆ ಘೋಷಿಸಿತ್ತು. ಆದರೆ, ಏರ್ ಕ್ರಾಫ್ಟ್ ಕೊರತೆಯಿಂದಾಗಿ ಸೇವೆಗಳ ಪುನರಾರಂಭ ವಿಳಂಬವಾಗಿದೆ. ಈ ಹಿನ್ನೆಲೆಯಲ್ಲಿ, ಕೊಚ್ಚಿ-ಜಿದ್ದಾ ವಲಯದ ಎರಡು ಸೇವೆಗಳನ್ನು ರದ್ದುಗೊಳಿಸಿ ಕೋಝಿಕೋಡ್ಗೆ ಸೇವೆಯನ್ನು ಪುನರಾರಂಭಿಸಲು ಏರ್ ಇಂಡಿಯಾ ನಿರ್ಧರಿಸಿದೆ.
ವಾರಕ್ಕೆ ನಾಲ್ಕು ಸೇವೆಗಳನ್ನು ನಡೆಸಲು ಪ್ರಯತ್ನಿಸಲಾಗುತ್ತಿದೆ ಎನ್ನಲಾಗಿದ್ದು, ಜಿದ್ದಾದಿಂದ ಮೊದಲ ವಿಮಾನ ಅಕ್ಟೊಬರ್ 27 ರ ರವಿವಾರ ರಾತ್ರಿ 11.15 ಕ್ಕೆ ಕೋಝಿಕೋಡ್ಗೆ ಹೊರಡಲಿದ್ದಯ, ಅದು ಮರುದಿನ ಸಂಜೆ 5.55 ಕ್ಕೆ ಕೋಝಿಕೋಡ್ನಿಂದ ಜಿದ್ದಾಗೆ ತೆರಳಲಿದೆ.
ಮುಂದಿನ ವಿಮಾನವು ಮಂಗಳವಾರ ಅದೇ ಸಮಯದಲ್ಲಿ ಜಿದ್ದಾದಿಂದ ಹೊರಡಲಿದೆ. ಅ .10 ರಂದು ಟಿಕೆಟ್ ಬುಕಿಂಗ್ ಪ್ರಾರಂಭವಾಗುವ ಸಾಧ್ಯತೆ ಇದ್ದು, ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ನೀಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.















ಇನ್ನಷ್ಟು ಸುದ್ದಿಗಳು
ದುಬೈ-ಇಸ್ರೇಲ್ ವಿಮಾನದಲ್ಲಿ ಪೈಲಟ್ಗಳ ನಡುವೆ ಸಂಘರ್ಷ : ಸೌದಿಯಲ್ಲಿ ತುರ್ತು ಭೂಸ್ಪರ್ಶ
ಅಣು-ವಿಕಿರಣ ಸೋರಿಕೆಯಾದರೆ ಏನು ಮಾಡಬೇಕು?; ಜಾಗರೂಕತೆಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ CDAA
ಒಮಾನ್:ಕಾರ್ಮಿಕ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ- ಫೀಲ್ಡ್ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವಾಲಯ
ರಸ್ತೆ ಬದಿಯ ಪೈಪ್ ಸರಿಪಡಿಸಿದ ಭಾರತೀಯ ಡೆಲಿವರಿ ಯುವಕ – ದುಬೈ ಸರ್ಕಾರದ ಗೌರವ
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ