ಗುವಾಹಟಿ: ಅಸ್ಸಾಂ ರಾಷ್ಟ್ರೀಯ ನಾಗರಿಕರ ದಾಖಲಾತಿ(ಎನ್ ಆರ್ ಸಿ) ಅಂತಿಮ ವರದಿ ಹೊರಬಿದ್ದಿದ್ದು ಸುಮಾರು 19 ಲಕ್ಷಕ್ಕೂ ಅಧಿಕ ಮಂದಿಯ ಹೆಸರು ಈ ದಾಖಲಾತಿ ವರದಿಯಲ್ಲಿಲ್ಲ. ಎನ್ ಆರ್ ಸಿ ದಾಖಲಾತಿಯಲ್ಲಿ ತಮ್ಮ ಹೆಸರು ಸೇರ್ಪಡೆಗೆ ಒಟ್ಟಾರೆ 3 ಕೋಟಿಯ 30 ಲಕ್ಷದ 27 ಸಾವಿರದ 661 ಮಂದಿ ಅರ್ಜಿ ಸಲ್ಲಿಸಿದ್ದರು.
ಸಂವಿಧಾನ ವಿಧಿ 4(3)ರಡಿಯಲ್ಲಿ ಜನರು ಸಲ್ಲಿಸಿದ ದಾಖಲಾತಿಗಳನ್ನು ಪರಿಶೀಲಿಸಿದ ನಂತರ ಅಂತಿಮ ಎನ್ ಆರ್ ಸಿ ವರದಿಯಲ್ಲಿ 3 ಕೋಟಿಯ 11 ಲಕ್ಷದ 21 ಸಾವಿರದ 4 ಮಂದಿ ಭಾರತೀಯ ನಾಗರಿಕತೆಗೆ ಅರ್ಹರಾಗಿದ್ದು, ಅರ್ಜಿ ಸಲ್ಲಿಸದವರು ಹಾಗೂ ಅನರ್ಹ ಅರ್ಜಿಗಳು ಸೇರಿ 19 ಲಕ್ಷದ 6 ಸಾವಿರದ 657 ಮಂದಿ ಅಸ್ಸಾಂ ನಾಗರಿಕರ ಪಟ್ಟಿಯಿಂದ ಹೊರಬಿದ್ದಿದ್ದಾರೆ ಎಂಬ ಅಂಕಿಅಂಶದ ಮಾಹಿತಿ ಸಿಕ್ಕಿದೆ.
ಕಳೆದ ವರ್ಷ ಎನ್ ಆರ್ ಸಿ ಪ್ರಕಟಿಸಿದ್ದ ಕರಡು ವರದಿ ಮತ್ತು ಈ ವರ್ಷಾರಂಭದಲ್ಲಿ ಪ್ರಕಟಿಸಿದ್ದ ಮತ್ತೊಂದು ಕರಡು ವರದಿಯಲ್ಲಿ 41 ಲಕ್ಷದ 9 ಸಾವಿರ ಮಂದಿಯನ್ನು ನಾಗರಿಕ ದಾಖಲಾತಿ ಪಟ್ಟಿಯಿಂದ ಹೊರಗಿಡಲಾಗಿತ್ತು.















ಇನ್ನಷ್ಟು ಸುದ್ದಿಗಳು
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ: ಏರ್ ಇಂಡಿಯಾ ಮತ್ತು ಇಂಡಿಗೋ ವಿಮಾನ ಹಾರಾಟ ರದ್ದು
ಚೀನಾದಲ್ಲಿ HMPV ವೈರಸ್ ವ್ಯಾಪಕ,ಆಸ್ಪತ್ರೆಗಳು ಫುಲ್: ಆತಂಕ ಬೇಡ- ಕೇಂದ್ರ ಸರ್ಕಾರ
ನೌಕರರ ಮಿಂಚಿನ ಮುಷ್ಕರ : ಅಂತಾರಾಷ್ಟ್ರೀಯ ವಿಮಾನಯಾನ ರದ್ದು
ಅಲ್ಪಸಂಖ್ಯಾತರ ಧಾರ್ಮಿಕ ಸ್ಥಳಗಳ ಮೇಲಿನ ದಾಳಿ ಖಂಡನೀಯ: ತೆಲಂಗಾಣ ಸಿಎಂಗೆ ಎ ಪಿ ಉಸ್ತಾದ್ ಪತ್ರ
ಲಂಚ: ಮೇಘಾ ಇಂಜಿನಿಯರಿಂಗ್ ವಿರುದ್ಧ ಸಿಬಿಐ ಪ್ರಕರಣ – 966 ಕೋಟಿ ಮೌಲ್ಯದ ಎಲೆಕ್ಟೋರಲ್ ಬಾಂಡ್ಗಳನ್ನು ಖರೀದಿಸಿದ್ದ ಕಂಪನಿ ಮೇಘಾ
ಸಮಗ್ರ ಅಭಿವೃದ್ಧಿ ಗೆ ಅಂಬೇಡ್ಕರ್ ತತ್ವ ಪಾಲನೆ ಅಗತ್ಯ : ದ್ರೌಪದಿ ಮುರ್ಮು
ಹರಿಯಾಣ : ಶಾಲಾ ಬಸ್ ಪಲ್ಟಿ; ಆರು ಮಕ್ಕಳು ಸಾವು ಈದ್ ರಜೆಯಲ್ಲೂ ತೆರೆದಿದ್ದ ಶಾಲೆ!
ಭಜರಂಗದಳ ಮಾಜಿ ರಾಜ್ಯ ಸಂಚಾಲಕ ರಘು ಪರಾರಿ
ಮುಸ್ಲಿಂ 2ಬಿ ಮೀಸಲು ರದ್ಧತಿ ಮತಬ್ಯಾಂಕ್ ಭದ್ರಪಡಿಸುವ ಸರಕಾರದ ನಡೆ ಖಂಡನೀಯ- ಎಸ್ ವೈ ಎಸ್
ದೇವಸ್ಥಾನಕ್ಕೆ ಮಾಂಸ ಎಸೆದು, ಕೋಮುಗಲಭೆ- ಪ್ರಮುಖ ಆರೋಪಿ ಚಂಚಲ್ ತ್ರಿಪಾಠಿ ಬಂಧನ