ಜಿದ್ದಾ: ಸೌದಿ ಅರೇಬಿಯಾದ ಖಾಸಗಿ ವಲಯದವರಿಗೆ ಬಕ್ರೀದ್ ರಜೆ ಘೋಷಿಸಲಾಗಿದ್ದು, ಸರಕಾರಿ ವಲಯದ ಸಿಬ್ಬಂದಿಗೆ ಈ ವರ್ಷ 12 ರಜೆ ಲಭ್ಯವಾಗಲಿದೆ.
ಉಮ್ಮುಲ್ ಖುರಾ ಕ್ಯಾಲೆಂಡರ್ ಪ್ರಕಾರ ದುಲ್ಹಜ್ಜ್ ನಾಲ್ಕರಂದು ಕೆಲಸ ಮುಗಿಸಿದ ಮೇಲೆ ಪ್ರಾರಂಭಿಸುವ ರಜೆಯು ದುಲ್ಹಜ್ 16ರ ವರೆಗೆ ಮುಂದುವರಿಯಲಿದೆ. ಪ್ರಸಕ್ತ ಕ್ಯಾಲೆಂಡರ್ನಲ್ಲಿ ಆಗಸ್ಟ್ 5ರಿಂದ 17ರ ವರೆಗೆ ರಜಾ ದಿನಗಳನ್ನು ಗುರುತಿಸಲಾಗಿದ್ದು, ಚಂದ್ರ ದರ್ಶನಕ್ಕೆ ಅನುಸಾರವಾಗಿ ಇಂಗ್ಲೀಷ್ ದಿನಾಂಕ ಬದಲಾಗಲು ಸಾಧ್ಯತೆ ಇದೆ.
ಬಕ್ರೀದ್ ರಜಾ ದಿನದ ನಂತರ ಆಗಸ್ಟ್ 18 ರಂದು ಸರಕಾರಿ ಸಿಬ್ಬಂದಿಗೆ ಕೆಲಸ ಪ್ರಾರಂವಾಗಲಿದೆ ಎಂದು ಸೌದಿ ಸಿವಿಲ್ ಸರ್ವೀಸ್ ಸಚಿವಾಲಯ ತಿಳಿಸಿದೆ.
ಖಾಸಗಿ ವಲಯದ ಸಂಸ್ಥೆಗಳು ಮತ್ತು ಸಿಬ್ಬಂದಿಗೆ ನಾಲ್ಕು ದಿನಗಳ ಬಕ್ರೀದ್ ರಜೆ ಘೋಷಣೆ ಮಾಡಲಾಗಿದ್ದು, ಅರಫಾ ದಿನದಿಂದ ದುಲ್ಹಜ್ ಹದಿನಾಲ್ಕರ ವರೆಗೆ ಮುಂದುವರಿಯಲಿದೆ. ವೃತ್ತಿ ಕಾನೂನಿನ ಪ್ರಕಾರ ಅತ್ಯಂತ ಕನಿಷ್ಟ ಬಕ್ರೀದ್ ರಜಾ ದಿನವಾಗಿದೆ ಇದು. ಕಡಿಮೆ ಪಕ್ಷ ಈ ನಾಲ್ಕು ದಿನಗಳ ರಜೆಯನ್ನಾದರೂ ನೀಡಬೇಕು. ಅದೇ ವೇಳೆ ಖಾಸಗಿ ವಲಯದಲ್ಲಿ ಇದಕ್ಕಿಂತ ಹೆಚ್ಚು ರಜಾ ದಿನಗಳನ್ನು ತನ್ನ ಸಿಬ್ಬಂದಿಗೆ ನೀಡುವುದಾದರೆ ಯಾವುದೇ ಅಭ್ಯಂತರವಿಲ್ಲ.















ಇನ್ನಷ್ಟು ಸುದ್ದಿಗಳು
ದುಬೈ-ಇಸ್ರೇಲ್ ವಿಮಾನದಲ್ಲಿ ಪೈಲಟ್ಗಳ ನಡುವೆ ಸಂಘರ್ಷ : ಸೌದಿಯಲ್ಲಿ ತುರ್ತು ಭೂಸ್ಪರ್ಶ
ಅಣು-ವಿಕಿರಣ ಸೋರಿಕೆಯಾದರೆ ಏನು ಮಾಡಬೇಕು?; ಜಾಗರೂಕತೆಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ CDAA
ಒಮಾನ್:ಕಾರ್ಮಿಕ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ- ಫೀಲ್ಡ್ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವಾಲಯ
ರಸ್ತೆ ಬದಿಯ ಪೈಪ್ ಸರಿಪಡಿಸಿದ ಭಾರತೀಯ ಡೆಲಿವರಿ ಯುವಕ – ದುಬೈ ಸರ್ಕಾರದ ಗೌರವ
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ