janadhvani

Kannada Online News Paper

ಹಜ್ ಪ್ರಯುಕ್ತ ಕಿಂಗ್ ಅಬ್ದುಲ್ ಅಝೀಝ್ ದ್ವಾರವನ್ನು ತೆರೆಯಲಾಗಿದೆ

ಮಕ್ಕಾ: ಹಜ್ ನಿರ್ವಹಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ಹರಮ್‌ಗಳಿಗೆ ತಲುಪುವ ಹಜ್ಜಾಜ್‌ಗಳ ಸಂಖ್ಯೆ ಹೆಚ್ಚಾಗತೊಡಗಿದ್ದು, ಮಸ್ಜಿದುಲ್ ಹರಾಮ್ ನ ಅತೀ ದೊಡ್ಡ ಪ್ರವೇಶ ದ್ವಾರವಾದ ಕಿಂಗ್ ಅಬ್ದುಲ್ ಅಝೀಝ್ ದ್ವಾರವನ್ನು ಯಾತ್ರಿಕರ ಸೌಕರ್ಯಾರ್ಥ ತೆರೆಯಲಾಗಿದೆ.

ಹಜ್ ವೇಳೆಯಲ್ಲಿನ ದಟ್ಟಣೆ ನಿಯಂತ್ರಿಸುವ ಸಲುವಾಗಿ ಈ ದ್ವಾರವನ್ನು ತೆರೆಯಲಾಗಿದೆ ಎಂದು ಹರಮ್ ಖಾತೆಯ ಸಚಿವಾಲಯ ತಿಳಿಸಿದೆ.