janadhvani

Kannada Online News Paper

ಕರ್ನಾಟಕ ಮೋಟಾರ್ ವಾಹನ ಕಾಯ್ದೆ ತಿದ್ದುಪಡಿ- ಚಿಲ್ಲರೆ ಹಿಂದಿರುಗಿಸದ ಕಂಡಕ್ಟರ್ ಗೆ 500 ದಂಡ

ಬೆಂಗಳೂರು,ಜೂ.27: ಟ್ರಾಫಿಕ್ ನಿಯಮ ಉಲ್ಲಂಘನೆ ಕುರಿತ ಮೋಟಾರು ವಾಹನ ಕಾಯ್ದೆ ತಿದ್ದುಪಡಿಗೆ ಕೇಂದ್ರ ಸಚಿವ ಸಂಪುಟದ ಅನುಮೋದನೆ ಸಿಕ್ಕಿದ ಬೆನ್ನಲ್ಲೇ ಕರ್ನಾಟಕ ಮೋಟಾರ್ ವಾಹನ ಕಾಯ್ದೆಯನ್ನು ತಿದ್ದುಪಡಿಸಿ ಜಾರಿ ಮಾಡಲಾಗಿದೆ.

ಇಂದು [ಗುರುವಾರ] ಹೊಸ ನಿಯಮ ಜಾರಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಹೊಸ ನಿಯಮದ ಪ್ರಕಾರ ಯಾವುದಕ್ಕೆ ಎಷ್ಟು ದಂಡ ಎನ್ನುವ ಪಟ್ಟಿ ಈ ಕೆಳಗಿನಂತಿದೆ.

  • ಮಿತಿ ಮೀರಿದ ವೇಗದ ಚಾಲನೆಗೆ 1 ಸಾವಿರ ರೂ. ದಂಡ. -[ಮುಂಚೆ 500 ರೂ. ಇತ್ತು]
  • ವಾಹನ ಚಲಾಯಿಸುವಾಗ ಮೊಬೈಲ್ ಬಳಿಸಿದರೆ 1 ಸಾವಿರ ರೂ. ದಂಡ.
  • ಚಾಲನೆ ವೇಳೆ 2ನೇ ಬಾರಿ ಮೊಬೈಲ್ ಬಳಸಿ ಸಿಕ್ಕಿಬಿದ್ದರೆ 2 ಸಾವಿರ ರೂ. ದಂಡ.
  • ನೊಂದಣಿ ಇಲ್ಲದೆ ವಾಹನ ಚಲಾವಣೆ ಮಾಡಿದರೆ ಮೊದಲ ಬಾರಿಗೆ 5 ಸಾವಿರ ರೂ. ದಂಡ. – [ಮುಂಚೆ 100 ರೂ. ಇತ್ತು]
  • ನೊಂದಣಿ ಇಲ್ಲದೆ ಚಲಾಯಿಸಿ 2 ಬಾರಿಗೆ ಸಿಕ್ಕಿ ಬಿದ್ದರೆ 10 ಸಾವಿರ ರೂ.- [ಮುಂಚೆ 300 ರೂ. ಇತ್ತು]
  • ಇನ್ಷೂರೆನ್ಸ್, DL ಇಲ್ಲದೆ ಚಾಲನೆ ಮಾಡಿದರೆ 1 ಸಾವಿರ ರೂ.
  • ಫಿಟ್ನೆಸ್ ಸರ್ಟಿಫಿಕೆಟ್ ಇಲ್ಲದ ವಾಹನ ಚಲಾಯಿಸಿದರೆ 2 ಸಾವಿರ ರೂ.
  • ಫಿಟ್ನೆಸ್ ಸರ್ಟಿಫಿಕೆಟ್ ಇಲ್ಲದೆ 2ನೇ ಬಾರಿ ಚಲಾಯಿಸಿದರೆ 5 ಸಾವಿರ ರೂ.
  • ಬಸ್ ನಲ್ಲಿ ಚಿಲ್ಲರೆ ಹಿಂದಿರುಗಿಸದ ಕಂಡಕ್ಟರ್ ಗೆ 500 ರೂ. ದಂಡ- [ಮುಂಚೆ 100 ರೂ. ಇತ್ತು]
  • ಅವಧಿ ಮೀರಿದ ಟಿಕೆಟ್ ನೀಡಿದರೆ ಕಂಡಕ್ಟರ್ ಗೆ 500 ರೂ. ದಂಡ- [ಮುಂಚೆ 100 ರೂ. ಇತ್ತು]
  • ಪ್ರಯಾಣದ ದೂರಕ್ಕೆ ತಕ್ಕಂತೆ ಟಿಕೆಟ್ ನೀಡದಿದ್ದರೆ ಕಂಡಕ್ಟರ್ 500 ರೂ. ದಂಡ.- [ಮುಂಚೆ 100 ರೂ. ಇತ್ತು]

error: Content is protected !! Not allowed copy content from janadhvani.com