janadhvani

Kannada Online News Paper

ಕುವೈಟ್: ಖಾಸಗೀ ವಲಯದಲ್ಲೂ ಸ್ವದೇಶೀಕರಣ

ಕುವೈತ್ ಸಿಟಿ: ದೇಶದ ಸರಕಾರೀ, ಸಾರ್ವಜನಿಕ ವಲಯದಲ್ಲಿ ಜಾರಿಗೆ ತರಲಾಗುತ್ತಿರುವ ಸ್ವದೇಶೀಕರಣದ ನಂತರ ಖಾಸಗಿ ವಲಯದಲ್ಲಿಯೂ ಸ್ವದೇಶೀಕರಣಕ್ಕೆ ಚಾಲನೆ ನೀಡಲಾಗುತ್ತಿದೆ. ಈ ಬಗ್ಗೆ ತಜ್ಞರ ತಂಡದ ವರದಿಯನ್ನು ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಇಲಾಖೆಯ ಸಚಿವ ಮರಿಯಮ್ ಅಲ್ ಅಖೀಲ್ ಸಂಬಂಧಿಸಿದ ಅಧಿಕಾರಿಗಳಿಗೆ ಪ್ರಸ್ತಾವನೆಯನ್ನು ಸಲ್ಲಿಸಿದರು.

ಹಂತ ಹಂತವಾಗಿ ಸಾರ್ವಜನಿಕ ವಲಯದಲ್ಲಿ ಸರ್ಕಾರ ಸ್ವದೇಶೀಕರಣವನ್ನು ಜಾರಿಗೆ ತರುತ್ತಿದ್ದು, ಅದನ್ನು ತ್ವರಿತಗೊಳಿಸಿ ಮುಂದಿನ ಐದು ವರ್ಷಗಳಲ್ಲಿ ಪೂರ್ಣಗೊಳಿಸುವಂತೆ ಸಚಿವರು ಆದೇಶ ನೀಡಿದ್ದಾರೆ.

ಅಲ್ಲದೆ ಖಾಸಗಿ ವಲಯದಲ್ಲಿ ವಿದೇಶಿಯರ ವಶದಲ್ಲಿರುವ ಉದ್ಯೋಗಾವಕಾಶವನ್ನು ಸ್ಥಳೀಯರಿಗಾಗಿ ಕಾದಿರಿಸುವ ಬಗ್ಗೆಯೂ ನಿರ್ಧಾರ ಕೈಗೊಳ್ಳಲಾಗಿದೆ. ಇಡೀ ದೇಶದ ಖಾಸಗಿ ವಲಯದಲ್ಲಿನ ಆಡಳಿತ, ನಿರ್ವಹಣೆ ಹುದ್ದೆಗಳನ್ನು ಸಂಪೂರ್ಣವಾಗಿ ದೇಶೀಯ ಪ್ರಜೆಗಳಿಗೆ ಖಾತರಿಪಡಿಸುವುದು ಸರ್ಕಾರದ ಗುರಿಯಾಗಿದೆ.

ಸರ್ಕಾರ ಪ್ರಸ್ತುತ ಖಾಸಗಿ ವಲಯದಲ್ಲಿನ ಸ್ವದೇಶೀಕರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಬಹಳಷ್ಟು ವಿದೇಶಿಯರು ಪರಿಣಾಮ ಎದುರಿಸಬೇಕಾದಂತಹ ಹಲವಾರು ಯೋಜನೆಗಳ ಬಗ್ಗೆ ಯೋಚಿಸುತ್ತಿದೆ.

ದೇಶವು ಎದುರಿಸುತ್ತಿರುವ ಗಂಭೀರ ವಿಷಯವಾದ ಜನಸಂಖ್ಯಾ ಅಸಮತೋಲನಕ್ಕೆ ಪರಿಹಾರ, ವೈಯಕ್ತಿಕ ಸ್ಪೋನ್ಸರ್ಶಿಪ್ ಸಂಪ್ರದಾಯ, ಮಾನವ ಕಳ್ಳಸಾಗಣೆ ಮುಂತಾದ ಪ್ರಮುಖ ವಿಷಯಗಳ ಬಗ್ಗೆ ಸರ್ಕಾರ ಗಮನ ಹರಿಸುತ್ತಿದೆ. ಈ ಸಮಸ್ಯೆಗಳನ್ನು ಗಂಭೀರವಾಗಿ ಚರ್ಚಿಸುವುದು ಮತ್ತು ತಕ್ಷಣದ ಪರಿಹಾರವನ್ನು ಪರಿಶೀಲಿಸುವುದಕ್ಕಾಗಿ ಸಚಿವರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಆದರೆ ಸರ್ಕಾರಿ, ಖಾಸಗಿ ವಲಯದಲ್ಲಿ ದೇಶೀಕರಣ ಶಕ್ತವಾಗುವುದರೊಂದಿಗೆ ಆ ವಲಯದಲ್ಲಿ ಕಾರ್ಯವಿರ್ವಹಿಸುವ ವಿದೇಶಿಯರು ತಮ್ಮ ಕೆಲಸ ಕಳೆದುಕೊಳ್ಳುವ ಭೀತಿ ಮುಂದುವರಿಯಲಿದೆ.

error: Content is protected !! Not allowed copy content from janadhvani.com