janadhvani

Kannada Online News Paper

ಲೋಕಸಭಾ ಚುನಾವಣೆಯಲ್ಲಿ ಇವಿಎಂ ಹ್ಯಾಕ್ ಮಾಡಲಾಗಿತ್ತು-ಹ್ಯಾಕರ್

ಲಂಡನ್, ಜ.21: 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಇವಿಎಂಗಳನ್ನು ಹ್ಯಾಕ್ ಮಾಡಲಾಗಿತ್ತು ಎಂದು ಭಾರತದಲ್ಲಿ ಬಳಸುವ ಇವಿಎಂಗಳನ್ನು ತಯಾರಿಸಿದ್ದ ತಂಡದಲ್ಲಿದ್ದರೆನ್ನಲಾದ ವ್ಯಕ್ತಿಯೊಬ್ಬರು ಬಹಿರಂಗ ಪಡಿಸಿದ್ದಾರೆ.

ಲಂಡನ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 2014ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಇವಿಎಂಗಳನ್ನು ಹ್ಯಾಕ್ ಮಾಡಲಾಗಿತ್ತು. ಮಹಾರಾಷ್ಟ್ರ ಉತ್ತರ ಪ್ರದೇಶ ಹಾಗು ಗುಜರಾತ್ ಚುನಾವಣೆಗಳಲ್ಲೂ ಇವಿಎಂಗಳನ್ನು ತಿರುಚಲಾಗಿದೆ ಎಂದವರು ಆರೋಪಿಸಿದ್ದಾರೆ.

2009ರಿಂದ 2014ರವರೆಗೆ ಸೈಯದ್ ಶುಜಾ ಎಲೆಕ್ಟ್ರಾನಿಕ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿ. ಜೊತೆಗೆ ಕೆಲಸ ಮಾಡಿದ್ದೆ ಎಂದ ಅವರು ನಾಲ್ಕು ದಿನಗ ಹಿಂದೆ ತನ್ನ ಮೇಲೆ ದಾಳಿ ನಡೆದಿತ್ತು ಎಂದು ಆರೋಪಿಸಿದ್ದಾರೆ. 2014ರ ಚುನಾವಣೆಯಲ್ಲಿ ಬಳಸಲಾದ ಇವಿಎಂಗಳನ್ನು ರಚಿಸಿದ್ದ ತಂಡದಲ್ಲಿ ತಾನೂ ಇದ್ದೆ, ಹೇಗೆ ಹ್ಯಾಕಿಂಗ್ ನಡೆಸಲಾಗುತ್ತದೆ ಎನ್ನುವುದನ್ನು ಎಲ್ಲರಿಗೂ ತಿಳಿಸಲು ತಾನು ಬಯಸಿದ್ದೇನೆ ಎಂದವರು ಹೇಳಿದ್ದಾರೆ.

ಲಂಡನ್ ನಲ್ಲಿ ಇಂಡಿಯನ್ ಜರ್ನಲಿಸ್ಟ್ ಅಸೋಸಿಯೇಶನ್ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಸ್ಕೈಪ್ ಮೂಲಕ ಮಾತನಾಡಿದ ಅವರು, “ಬ್ಲೂಟೂತ್ ಗಳನ್ನು ಬಳಸಿ ಇವಿಎಂಗಳನ್ನು ಹ್ಯಾಕ್ ಮಾಡಲು ಸಾಧ್ಯವಿಲ್ಲ. ಇವಿಎಂ ಹ್ಯಾಕ್ ಗೆ ಗ್ರಾಫೈಟ್ ಆಧಾರಿತ ಟ್ರಾನ್ಸ್ ಮಿಟರ್ ನ ಅಗತ್ಯವಿದೆ. 2014ರಲ್ಲಿ ಈ ಟ್ರಾನ್ಸ್ ಮಿಟರನ್ನು ಬಳಸಲಾಗಿತ್ತು ಎಂದು ವಿವರಿಸಿದರು.

ಬಿಜೆಪಿಯ ಹಿರಿಯ ನಾಯಕ ಗೋಪಿನಾಥ್ ಮುಂಢೆಯವರ ಹತ್ಯೆ: ಎಲ್ಲಾ ಇವಿಎಂಗಳನ್ನು ಹ್ಯಾಕ್ ಮಾಡಲಾಗಿತ್ತು ಎನ್ನುವ ವಿಷಯ ತಿಳಿದಿದ್ದ ಕಾರಣ ಬಿಜೆಪಿ ನಾಯಕರೇ ಬಿಜೆಪಿಯ ಹಿರಿಯ ನಾಯಕ ಗೋಪಿನಾಥ್ ಮುಂಢೆಯವರನ್ನು ಹತ್ಯೆಗೈದಿದ್ದಾರೆ ಎಂದು ಅಮೆರಿಕ ಮೂಲದ ಹ್ಯಾಕರ್ ಆರೋಪಿಸಿದ್ದಾರೆ.

“2014ರಲ್ಲಿ ಈ ಬಗ್ಗೆ ತಿಳಿದಿದ್ದ ಬಿಜೆಪಿ ನಾಯಕನನ್ನು ನಾನು ಭೇಟಿಯಾಗಿದ್ದೆ. ಬಿಜೆಪಿ ನಾಯಕರ ಭೇಟಿಯ ನಂತರ ನಮ್ಮ ತಂಡದ ಸದಸ್ಯರೊಬ್ಬರು ದಾಳಿಯೊಂದರಲ್ಲಿ ಮೃತಪಟ್ಟರು. ಗೋಪಿನಾಥ್ ಮುಂಢೆಯವರಿಗೆ ‘ಹ್ಯಾಕಿಂಗ್ ಗೆಲುವಿನ’ ಬಗ್ಗೆ ತಿಳಿದಿತ್ತು. ಅವರು ಸರಕಾರ ಬಣ್ಣ ಬಯಲು ಮಾಡುತ್ತಾರೆಂದು ಅವರನ್ನು ಹತ್ಯೆಗೈಯಲಾಯಿತು” ಎಂದು ಹ್ಯಾಕರ್ ಸೈಯದ್ ಶುಜಾ ಗಂಭೀರ ಆರೋಪ ಮಾಡಿದ್ದಾರೆ.

2014ರಲ್ಲಿ ಜೂನ್ ನಲ್ಲಿ ನಡೆದ ಅಪಘಾತವೊಂದರಲ್ಲಿ ಗೋಪಿನಾಥ್ ಮುಂಢೆ ಮೃತಪಟ್ಟಿದ್ದರು.

ಗೌರಿ ಲಂಕೇಶ್ ಹತ್ಯೆ ಹಾಗೂ ಇವಿಎಂ:

2014ರ ಚುನಾವಣೆಯಲ್ಲಿ ಇವಿಎಂಗಳನ್ನು ಹ್ಯಾಕ್ ಮಾಡಲಾಗಿತ್ತು ಎನ್ನುವ ಬಗ್ಗೆ ವರದಿ ಪ್ರಕಟಿಸಲು ಪತ್ರಕರ್ತೆ ಗೌರಿ ಲಂಕೇಶ್ ಸಿದ್ಧರಿದ್ದರು. ಇವಿಎಂ ಗಳಲ್ಲಿ ಬಳಸಲಾದ ಕೇಬಲ್ ಗಳನ್ನು ಯಾರು ತಯಾರಿಸಿದ್ದರು ಎನ್ನುವುದನ್ನು ತಿಳಿದುಕೊಳ್ಳಲು ಗೌರಿ ಲಂಕೇಶ್ ಆರ್ ಟಿಐ ಅರ್ಜಿ ಸಲ್ಲಿಸಿದ್ದರು. ಆನಂತರ ಅವರನ್ನು ಕೊಲ್ಲಲಾಯಿತು ಎಂದು ಅಮೆರಿಕ ಮೂಲದ ಹ್ಯಾಕರ್ ಸೈಯದ್ ಶುಜಾ ಹೇಳಿದರು.

error: Content is protected !! Not allowed copy content from janadhvani.com