janadhvani

Kannada Online News Paper

ಮೂಡುಬಿದ್ರಿ ಅಲ್ ಮಫಾಝ್ ಮಕ್ಕಾ ಸಮಿತಿ ಅಸ್ತಿತ್ವಕ್ಕೆ

ಮಕ್ಕತುಲ್ ಮುಕರ್ರಮಃ: ಮೂಡುಬಿದ್ರಿ ಅಲ್ ಮಫಾಝ್ ಚ್ಯಾರಿಟೇಬಲ್ ಟ್ರಸ್ಟ್ ಮಕ್ಕತುಲ್ ಮುಕರ್ರಮಃ ಸಮಿತಿಯ ಸಭೆಯು ಅಲ್ ಹಾಜ್ ಪಿ.ಪಿ ಅಹ್ಮದ್ ಸಖಾಫಿ ಕಾಶಿಪಟ್ಣರವರ ಅಧ್ಯಕ್ಷತೆಯಲ್ಲಿ ಜಬಲನ್ನೂರು ಮೂಸಾ ಹಾಜಿಯವರ ನಿವಾಸದಲ್ಲಿ ಜರಗಿತು.

ಕಾರ್ಯಕ್ರಮವನ್ನು ಮಾಣಿ ದಾರುಲ್ ಇರ್ಷಾದ್ ಆರ್ಗನೈಝರ್ ಉಮರ್ ಮದನಿ ಖಾಮಿಲ್ ಸಖಾಫಿ ಪರಪ್ಪು ಉಧ್ಘಾಟಿಸಿ ಮಾತನಾಡಿ, ಸ್ಥಾಪನೆಗಳ ಉದ್ದೇಶ, ಅದಕ್ಕೆ ಬೇಕಾಗಿ ಕಾರ್ಯಾಚರಿಸಿದರೆ ಸಿಗುವ ಫಲವನ್ನು ವಿವರಿಸಿದರು.

ಪಿ.ಪಿ ಉಸ್ತಾದ್ ಮಾತನಾಡಿ ಅಲ್ ಮಫಾಝ್ ಸಂಸ್ಥೆಯಲ್ಲಿ 125 ವಿಧ್ಯಾರ್ಥಿಗಳು ಇದೀಗ ಕಲಿಯುತ್ತಿದ್ದು, ಕಟ್ಟಡಗಳ ನಿರ್ಮಿಸುವ ಬಗ್ಗೆ ಹಾಗೂ ಆ ಊರಿಗೆ ಇಂತಹ ಒಂದು ಸ್ಥಾಪನೆಯ ಅನಿವಾರ್ಯತೆ ಬಗ್ಗೆ ಕಾರ್ಯಕರ್ತರಿಗೆ ಮನದಟ್ಟು ಮಾಡಿದರು.

ನಂತರ ನೂತನ ಸಮಿತಿಯನ್ನು ರಚಿಸಲಾಯ್ತು.
ಗೌರವ ಅಧ್ಯಕ್ಷರಾಗಿ ಉಮರ್ ಮದನಿ ಖಾಮಿಲ್ ಸಖಾಫಿ ಪರಪ್ಪು, ಅಧ್ಯಕ್ಷರಾಗಿ ಮೂಸಾ ಹಾಜಿ ಕಿನ್ಯಾ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಗಂಟಲ್ಕಟ್ಟೆ, ಕೋಶಾಧಿಕಾರಿ ನಝೀರ್ ಮೂಡುಬಿದ್ರಿ, ಉಪಾಧ್ಯಕ್ಷರು ಹನೀಫ್ ಸಖಾಫಿ ಬೊಳ್ಮಾರ್, ಜೊತೆ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಪುಚ್ಚಮೊಗರು. ಕಾರ್ಯಕಾರಿ ಸದಸ್ಯರಾಗಿ ಇಕ್ಬಾಲ್ ಕಕ್ಕಿಂಜೆ, ಶರೀಫ್ ಝೈನಿ ಈಶ್ವರಮಂಗಿಲ, ಕಬೀರ್ ಬಾಜಾರ್, ಶರೀಫ್ ಸೂರಿಂಜೆ, ಬದ್ರುದ್ದೀನ್ ಮಲಾರ್ ರವರನ್ನು ಆಯ್ಕೆ ಮಾಡಲಾಯಿತು.

ಕಾರ್ಯಕ್ರಮವನ್ನು ಹನೀಫ್ ಸಖಾಫಿ ಬೊಳ್ಮಾರ್ ಸ್ವಾಗತಿಸಿ, ಮೂಸಾ ಹಾಜಿ ಕಿನ್ಯಾ ಕೃತಜ್ಞತೆ ಸಲ್ಲಿಸದರು

error: Content is protected !! Not allowed copy content from janadhvani.com