janadhvani

Kannada Online News Paper

ಈ ವರದಿಯ ಧ್ವನಿಯನ್ನು ಆಲಿಸಿ

ಭಾರತೀಯ ಯುವ ಪೀಳಿಗೆಯ ಅಭ್ಯುದಯಕ್ಕಾಗಿ ಮರ್ಕಝು ಸ್ಸಖಾಫತಿ ಸ್ಸುನ್ನಿಯ್ಯಾದ ಹೊಸ ಚಿಂತನೆಯೆಂಬಂತೆ ,ಮರ್ಕಝ್ ರಾಷ್ಟ್ರೀಯ ಕಲಾ ಉತ್ಸವ Avenox-19 ಎಂಬ ಹೆಸರಿನಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಇದೇ ಬರುವ 4,5 ಜನವರಿ 2019 ರಂದುನಡೆಯಲಿದೆ,ಭಾರತದ ಉದ್ಯಾನ ನಗರಿಯಲ್ಲಿ ಮರ್ಕಿನ್ಸ್ ಆತಿಥ್ಯದೊಂದಿಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾರತದಾಧ್ಯಂತ ಮರ್ಕಝ್‍ನ ಅಧೀನದಲ್ಲಿ, ಕಾರ್ಯಾಚರಿಸುತ್ತಿರುವ ಧಾರ್ಮಿಕ-ಲೌಕಿಕ ಶಿಕ್ಷಣ ಸಂಸ್ಥೆಗಳಾದ ಮರ್ಕಿನ್ಸ್ ಬೆಂಗಳೂರು, ಮರ್ಕಝುಲ್ ಹಿದಾಯ ಕೊಡಗು, ಅಲ್ ನೂರ್ ಎಜ್ಯುಕೇಶನಲ್ ಸೆಂಟರ್ ಮೈಸೂರು, ಮದೀನತುನ್ನೂರ್ ಪೂನೂರ್ ಕೇರಳ , ಸತಕ್ ಎಜು ಝೋನ್ ಕೀಳಕ್ಕರೆ ತಮಿಳುನಾಡು, ತ್ವೈಬಾ ಗಾರ್ಡನ್ ಆಲ್ವಾರ್ ರಾಜಸ್ಥಾನ, ತೈಬಾ ಗಾರ್ಡನ್ ಪಶ್ಚಿಮ ಬಂಗಾಳ, ತ್ವೈಬಾ ಕಾಲೇಜ್ ಇಂದೋರ್ ಮಧ್ಯ ಪ್ರದೇಶ, ಅಡ್ವಾನ್ಸ್ಡ್ ಇಸ್ಲಾಮಿಕ್ ಇನ್ಸ್ಟಿಟ್ಯೂಟ್‍ ಗುಜರಾತ್ ಸೇರಿದ ಆಯ್ಕೆ ಮಾಡಲ್ಪಟ್ಟ ವಿವಿಧ ಸಂಸ್ಥೆಗಳ 2100 ರಷ್ಟು ವಿದ್ಯಾರ್ಥಿಗಳು 100 ಕ್ಕೂ ಮಿಕ್ಕ ಸ್ಪರ್ಧೆಗಳಲ್ಲಿ ಸ್ಪರ್ದಿಸಲಿದ್ದಾರೆ,ಎಂದು ಸಂಸ್ಥೆಯು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿರುತ್ತದೆ .

error: Content is protected !! Not allowed copy content from janadhvani.com