ಬಂಟ್ವಾಳ ತಾಲೂಕಿಗೆ ಒಳಪಟ್ಟ ಕಕ್ಯಪದವು ಎಂಬ ಊರು ನಾಡಿನ ಜನತೆಗೆ ಚಿರಪರಿಚಿತವಾಗಿದೆ. ಕಕ್ಯಪದವು ಜಮಾಅತಿಗೆ ಒಳಪಟ್ಟಂತಹ ಜನತೆಗೆ ಉಪಕಾರವಾಗುವ ರೀತಿಯಲ್ಲಿ ಸುಲ್ತಾನುಲ್ ಉಲಮಾ ಎ.ಪಿ. ಉಸ್ತಾದರ ಸಾರಥ್ಯದ ಮರ್ಕಝ್ ನ ಅಧೀನದಲ್ಲಿ ಕಕ್ಯಪದವಿನ ಮಣ್ಣಿನಲ್ಲಿ ನಾಲ್ಕನೇ ಮಸ್ಜಿದ್ ನಿರ್ಮಾಣ ಗೊಂಡು ಇದೀಗ ಉದ್ಘಾಟನಾ ಸಂಭ್ರಮದಲ್ಲಿದೆ, ಅಲ್ ಹಂದುಲಿಲ್ಲಾಹ್..
ನೂತನ ಮಸ್ಜಿದ್ ಉದ್ಘಾಟನಾ ಸಮಾರಂಭ
ಕಕ್ಯಪದವು ಕ್ವಾಟ್ರಸ್ ನಲ್ಲಿ ನೂತನವಾಗಿ ನಿರ್ಮಿಸಲ್ಪಟ್ಟ ಮಸ್ಜಿದ್ ನ ಉದ್ಘಾಟನಾ ಸಮಾರಂಭವು ನಾಳೆ (14/12/2018) ಅಸರ್ ನಮಾಝಿನ ಬಳಿಕ ನಡೆಯಲಿದ್ದು ಪ್ರಸ್ತುತ ಕಾರ್ಯಕ್ರಮ ದಲ್ಲಿ ಅಹ್ಲುಬೈತಿನ ಪರಂಪರೆ ಅಸೈಯ್ಯಿದ್ ಅಬ್ದುರ್ರಹ್ಮಾನ್ ಸಾದಾತ್ ತಂಙಳ್ ಗುರುವಾಯನಕೆರೆ ಮಸ್ಜಿದಿನ ವಕ್ಫ್ ನೆರವೇರಿಸುತ್ತಾ ಔಪಚಾರಿಕವಾಗಿ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣವನ್ನು ಕಕ್ಯಪದವು ಜುಮಾ ಮಸ್ಜಿದ್ ಖತೀಬರಾದ ಬಹು/ ಅಬೂಸ್ವಾಲಿಹ್ ಖಾಮಿಲ್ ಸಖಾಫಿ ಬೆಳ್ಮ ರವರು ಮಾಡಲಿದ್ದಾರೆ, ನಂತರ ಮಗ್ರಿಬ್ ನಮಾಝಿನ ಬಳಿಕ ಕಕ್ಯಪದವು ಜುಮಾ ಮಸ್ಜಿದ್ ಅಧ್ಯಕ್ಷರಾದ ಅಬ್ದುರ್ರಹ್ಮಾನ್ ಕಕ್ಯಪದವು ರವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಮತ ಪ್ರಭಾಷಣ ನಡೆಯಲಿದ್ದು ಕಾರ್ಯಕ್ರಮದಲ್ಲಿ ಪ್ರಭಾಷಣ ರಂಗದಲ್ಲಿ ತನ್ನ ಅದ್ಭುತವಾದ ವಾಕ್ ಚಾತುರ್ಯದ ಮೂಲಕ ಜನಮನ್ನಣೆ ಗಳಿಸಿದ ಯುವ ಪ್ರಭಾಷಕರು, ಮೂಡಡ್ಕ ಸ್ಥಾಪನೆಯ ಮುದರ್ರಿಸರಾದ ಬಹು/ ಸ್ವಲಾಹುದ್ದೀನ್ ಸಖಾಫಿ ಮಾಡನ್ನೂರು ರವರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ.
ಪ್ರಸ್ತುತ ಸಮಾರಂಭದಲ್ಲಿ ಸೈಯ್ಯಿದ್ ಸಾದಾತುಗಳು ಉಲಮಾ ನೇತಾರರು, ಉಮರಾ ನಾಯಕರುಗಳು, ಸಂಘಟನಾ ಕಾರ್ಯಕರ್ತರು ಭಾಗವಹಿಸಲಿದ್ದಾರೆ, ಅದ್ದರಿಂದ ಆ ಸಮಾರಂಭಕ್ಕೆ ತಮಗೆಲ್ಲಾರಿಗೂ ಆದರದ ಸುಸ್ವಾಗತ.