janadhvani

Kannada Online News Paper

CONNECT 2018 ಸುನ್ನೀ ಸಂಘ ಕುಟುಂಬದ ನಾಯಕರಿಂದ ಭರದ ಸಿದ್ದತೆ

ಮಂಗಳೂರು: ಕರ್ನಾಟಕ ಕಲ್ಚರಲ್ ಫೌಂಡೇಶನ್, ಕರ್ನಾಟಕ ಸುನ್ನೀ ಸ್ಟುಡೆಂಟ್ಸ್ ಫೆಡರೇಷನ್,ಕರ್ನಾಟಕ ಸುನ್ನೀ ಯುವಜನ ಸಂಘದ ನೇತೃತ್ವದಲ್ಲಿ ಇದೇ ಬರುವ ಡಿಸೆಂಬರ್ ಮೂರನೇ ತಾರಿಕಿನಂದು ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆಯಲಿರುವ ವಿವಿಧ ಕಾರ್ಯಕ್ರಮಗಳನ್ನೊಳಗೊಂಡ ಕನೆಕ್ಟ್ 2018 ಸಾಮುದಾಯಿಕ ಸಮ್ಮಿಲನದ ಯಶಸ್ವಿಗೆ ಸುನ್ನೀ ಸಂಘ ಕುಟುಂಬದ ನಾಯಕರು ಹಾಗೂ ಕಾರ್ಯಕರ್ತರಿಂದ ಭರದ ಸಿದ್ದತೆ ನಡೆಯುತ್ತಿದೆ.ಈ ಬಗ್ಗೆ ಇಂದು ಮಂಗಳೂರಿನ ಪಡೀಲ್ ಇಲ್ಮ್ ಸೆಂಟರ್ ನಲ್ಲಿ ನಡೆದ ಮಹತ್ವದ ಸಭೆಯಲ್ಲಿ ವಿವಿಧ ಸುನ್ನೀ ಸಂಘಟನೆಗಳ ನಾಯಕರು ಭಾಗವಹಿಸಿ ಅವಲೋಕನ ನಡೆಸಿದರು. ಸಭೆಯನ್ನು ಕರ್ನಾಟಕ ಕಲ್ಚರಲ್ ಫೌಂಡೇಶನ್ ಅಂತಾರಾಷ್ಟ್ರೀಯ ಅಧ್ಯಕ್ಷ ಎಸ್ ಪಿ ಹಂಝ ಸಖಾಫಿ ಬಂಟ್ವಾಳ ಉದ್ಘಾಟಿಸಿದರು. ಸುನ್ನೀ ಕೋಆರ್ಡಿನೇಶನ್ ಸಮಿತಿಯ ಸಂಚಾಲಕ ಬಹು ಪಿ ಪಿ ಅಹ್ಮದ್ ಸಖಾಫಿ ಕಾಶಿಪಟ್ನ ಅಧ್ಯಕ್ಷತೆ ವಹಿಸಿದ್ದರು. ಡಿಸೆಂಬರ್ ಮೂರರಂದು ಹನ್ನೊಂದು ಜೋಡಿ ಬಡ ಹೆಣ್ಣುಮಕ್ಕಳ ವಿವಾಹ, ಮಧ್ಯಾಹ್ನ ಎಸ್ಸೆಸ್ಸೆಫ್ ನೇತೃತ್ವದಲ್ಲಿ ಬ್ರಹತ್ ಮೀಲಾದ್ ಜಾಥಾ,ಹಾಗೂ ಸಂಜೆ ಎಸ್ ವೈ ಎಸ್ ವತಿಯಿಂದ ಬೃಹತ್ ಹುಬ್ಬುರ್ರಸೂಲ್ ಕಾನ್ಫರೆನ್ಸ್ ನಡೆಯಲಿದೆ.
ಎಸ್ ವೈ ಎಸ್ ರಾಜ್ಯ ಕಾರ್ಯದರ್ಶಿ ಸಿದ್ದೀಕ್ ಸಖಾಫಿ ಮೂಳೂರು,ಇಶಾರ ಸಂಪಾದಕ ಹಮೀದ್ ಬಜಪೆ, ಕನಕ್ಟ್ 2018 ಪ್ರಧಾನ ಕಾರ್ಯದರ್ಶಿ ರಝಾಕ್ ಹಾಜಿ ನಾಟೆಕಲ್ ಎಸ್ ಇ ಡಿ ಸಿ ರಾಜ್ಯಾಧ್ಯಕ್ಷ ಕೆಕೆಎಂ ಕಾಮಿಲ್ ಸಖಾಫಿ ಎಸ್ಸೆಸ್ಸೆಫ್ ರಾಜ್ಯ ನಾಯಕ ಹಾಫಿಳ್ ಯಾಕೂಬ್ ಸಅದಿ ನಾವೂರು ಎಸ್ಸೆಸ್ಸೆಫ್ ದ.ಕ ಜಿಲ್ಲಾಧ್ಯಕ್ಷ ಸಿರಾಜುದ್ದೀನ್ ಸಖಾಫಿ ಕನ್ಯಾನ ಎಸ್ ವೈ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿನಾರ ಎಸ್ ಎಂ ಎ ಪ್ರಧಾನ ಕಾರ್ಯದರ್ಶಿ ಖಲೀಲ್ ಮುಸ್ಲಿಯಾರ್ ಬೋಳಂತೂರು ಎಸ್ ವೈ ಎಸ್ ಉಡುಪಿ ಜಿಲ್ಲಾ ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ರಝ್ವಿ ,ವಿ ಯು ಇಸಾಕ್ ಝುಹ್ರಿ ಸೂರಿಂಜೆ ಕೆಸಿಎಫ್ ಸೌದಿ ಅರೇಬಿಯಾದ ಸಲೀಂ ಕನ್ಯಾಡಿ,ನಝೀರ್ ಹಾಜಿ ಕಾಶಿಪಟ್ನ ಕೆಸಿಎಫ್ ಅಜ್ಮಾನ್ ಇದರ ಅಬೂಬಕ್ಕರ್ ಮದನಿ ದುಬೈ ಕೆಸಿಎಫ್ ನ ಎನ್ ಕೆ ಸಿದ್ದೀಕ್ ಅಳಿಕೆ, ನಾಸಿರ್ ಗಾಳಿಮುಖ,ಅಬ್ದುಲ್ ರಹಿಮಾನ್ ಪ್ರಿಂಟೆಕ್ ಕೃಷ್ಣಾಪುರ ಇಸ್ಮಾಯಿಲ್ ಮಾಸ್ಟರ್ ಮಂಗಿಲಪದವು ಮುಂತಾದವರು ಭಾಗವಹಿಸಿದ್ದರು.
Reported by :media cell
CONNECT 2018

error: Content is protected !! Not allowed copy content from janadhvani.com