janadhvani

Kannada Online News Paper

ಕುರ್ ಆನ್‌ ಪ್ರಕಾಶದಿಂದ ಯವ್ವನವನ್ನು ದನ್ಯಗೋಳಿಸೋಣ : ಯೂನುಸ್ ಸಖಾಫಿ ಮಸೀದಿಕೆರೆ

ಬಾಳೆಹೊನ್ನೂರು: ಪ್ರೀತಿ, ವಿಶ್ವಾಸ ನಷ್ಟಹೊಂದುವ ಈ ಸಂದರ್ಭದಲ್ಲಿ ಕುರ್ ಆನ್‌ ಪ್ರಕಾಶದಿಂದ ಯವ್ವನವನ್ನು ದನ್ಯಗೋಳಿಸೋಣ ಗುರು ಹಿರಿಯರನ್ನು ಗೌರವಿಸೋಣ ಎಂದು ಯೂನುಸ್ ಸಖಾಫಿ ಮಸೀದಿಕೆರೆ ಹೇಳಿದರು.

ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ ಮಾಗುಂಡಿ ಯುನಿಟ್ ಇದರ ಅಧೀನದಲ್ಲಿ ಯವ್ವನ ಮರೆಯಾಗುವ ಮುನ್ನ ಎಂದ ಧ್ಯೇಯ ವಾಕ್ಯದಲ್ಲಿ ನಡೆದ ಯುನಿಟ್ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಸಯ್ಯಿದ್ ಖಿಫಾ ತಂಙಳ್ ಪ್ರಾರ್ಥನೆ ನಡೆಸಿದರು.
ಸ್ಥಳೀಯ ಖತೀಬರಾದ ಅಬ್ದುಲ್ಲಾಹಿ ಸ ಅದಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಎಸ್.ಎಸ್.ಎಫ್ ಜಿಲ್ಲಾ ನಾಯಕರಾದ ಝೈನುಲ್ ಆಬಿದ್ ಸಖಾಫಿ ಮಾಗುಂಡಿ ಪ್ರಾಸ್ತಾವಿಕ ಭಾಷಣ ನಡೆಸಿದರು.
ಮಾಗುಂಡಿ ಜುಮಾ ಮಸ್ಜಿದ್ ಇದರ ಅಧ್ಯಕ್ಷಯಾದ ಅಬ್ದುಲ್ ಅಝೀಝ್ ಹಾಜಿ ಅಧ್ಯಕ್ಷತೆ ವಹಿಸಿದರು.
ವೇದಿಕೆಯಲ್ಲಿ ಜುಮಾ ಮಸ್ಜಿದ್ ನ ಪ್ರ.ಕಾರ್ಯದರ್ಶಿ ಒ.ಖಾಲಿದ್ , ಎಸ್.ಎಸ್.ಎಫ್ ಗೌರವಾದ್ಯಕ್ಷರಾದ ಟಿ.ಎಸ್.ಅಯ್ಯೂಬ್, ಎಸ್.ವೈ.ಎಸ್ ಅಧ್ಯಕ್ಷರಾದ ಬಿ.ಎಂ ಖಾಲಿದ್ ,ಎಸ್.ಎಸ್.ಎಫ್ ಡಿವಿಷನ್ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಮಾಗುಂಡಿ , ಮದ್ರಸ ಗುರುಗಳಾದ ಸಿರಾಜುದ್ದೀನ್ ಸಖಾಫಿ, ಅಬ್ದುಲ್ ರಝ್ಝಾಕ್ ಅಹ್ಸನಿ, ಮರ್ಝೂಕ್ ಮುಸ್ಲಿಯಾರ್, ಎಸ್.ಎಸ್.ಎಫ್ ಯುನಿಟ್ ಪ್ರ.ಕಾರ್ಯದರ್ಶಿ ಹಾರಿಸ್ ಮತ್ತಿತರರು ಭಾಗವಹಿಸಿದ್ದರು.