ಸಕಲೇಶಪುರ: ಯೌವ್ವನ ಮರೆಯಾಗುವ ಮುನ್ನ …ಎಂಬ ಘೋಷ ವಾಕ್ಯದೊಂದಿಗೆ 2018 ನೇ ಸಾಲಿನ ಸದಸ್ಯತನ ಅಭಿಯಾನ ನಡೆದು ಎಸ್ ಎಸ್ ಎಫ್ ವಿವಿಧ ಘಟಕಗಳ ಚುನಾವಣೆಯು ನಡೆಯಲಿದ್ದು ಈ ಬಗ್ಗೆ ವಿವರಿಸುವ ಕಾರ್ಯಾಗಾರವು ಸಕಲೇಶಪುರ ದ ಕುಡುಗರ ಹಳ್ಳಿ ಮಸೀದಿ ಸಭಾಂಗಣದಲ್ಲಿ ಎಸ್ ಎಸ್ ಎಫ್ ಹಾಸನ ಜಿಲ್ಲಾಧ್ಯಕ್ಷರಾದ ಸುಲೈಮಾನ್ ಸಖಾಫಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಎಸ್ ಎಸ್ ಎಫ್ ರಾಜ್ಯ ಚುನಾವಣಾ ಮಂಡಳಿ ಸಂಚಾಲಕ ಹಾಫಿಳ್ ಯಾಕೂಬ್ ಸಅದಿ ನಾವೂರು ಕಾರ್ಯಾಗಾರ ನಡೆಸಿ ಕೊಟ್ಟರು. ರಾಜ್ಯ ಚುನಾವಣಾ ಮಂಡಳಿಯ ತಾಂತ್ರಿಕ ಅಧಿಕಾರಿ ರವೂಫ್ ಖಾನ್ ಕುಂದಾಪುರ ತಾಂತ್ರಿಕ ಮಾಹಿತಿ ನೀಡಿದರು. ಎಸ್ ಎಸ್ ಎಫ್ ರಾಜ್ಯ ನಾಯಕ ಜಾಫರ್ ಹಾಸನ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಾಜಿದ್ ಕೂಡಿಗೆ ಸ್ವಾಗತಿಸಿ ವಂದಿಸಿದರು.